ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಜ.3ರಿಂದ ಬಿಎಂಟಿಸಿ ಎಸಿ ಬಸ್ ಸಂಚಾರ ಪ್ರಾರಂಭ

|
Google Oneindia Kannada News

ಬೆಂಗಳೂರು, ಜನವರಿ 1: ಸಿಲಿಕಾನ್ ಸಿಟಿಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಹವಾನಿಯಂತ್ರಿತ ಸಾರಿಗೆ ಸೇವೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

ನಗರದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಅದೇ ನಿಟ್ಟಿನಲ್ಲಿ ಜನವರಿ 3ರಿಂದ ಬೆಂಗಳೂರಿನ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಎಸಿ ಬಸ್ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ.

ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ

ಬೆಂಗಳೂರಿನ ಮಾರ್ಗಸಂಖ್ಯೆ ವಿ-ಎಂಎಫ್-6, ವಿ-ಜಿ7, ವಿ-285ಎಂಬಿ, ವಿ-333ಪಿ ಮತ್ತು ವಿ-501ಎ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರಂಭಿಸಿರುವ ಸಾರಿಗೆಗಳ ವಿವರವನ್ನು ಮುಂದೆ ಓದಿ.

BMTC Increasing Air-Conditioned Bus services in City For providing Comfortable Transport facilities

ಕ್ರ.ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಸಾರಿಗೆಗಳ ಸಂಖ್ಯೆ ಸುತ್ತುವಳಿಗಳ ಸಂಖ್ಯೆ
1 ವಿ-ಎಂಎಫ್‌-6 ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 05 64
2 ವಿ-ಜಿ7 ಕೆಂಪೇಗೌಡ ಬಸ್‌ ನಿಲ್ದಾಣ ಜನಪ್ರಿಯ ಟೌನ್‌ಶಿಪ್‌ 06 60
3 ವಿ-285ಎಂಬಿ ಕಾವೇರಿ ಭವನ ಡಿ.ಕ್ರಾಸ್‌ (ದೊಡ್ಡಬಳ್ಳಾಪುರ) 05 32
4 ವಿ-333ಪಿ ಕೆಂಪೇಗೌಡ ಬಸ್‌ ನಿಲ್ದಾಣ ವೈಟ್‌ಫೀಲ್ಡ್‌ ಟಿಟಿಎಂಸಿ 11 60
5 ವಿ-501ಎ ಹೆಬ್ಬಾಳ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 10 50
ಒಟ್ಟು 37 266

ಯಾವ ಮಾರ್ಗದಲ್ಲಿ ಎಷ್ಟು ಬಸ್ ಸಂಚಾರ:

* ಬೆಂಗಳೂರಿನ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮಾರ್ಗ ಸಂಖ್ಯೆ ವಿಎಫ್-6ನಲ್ಲಿ 5 ಬಸ್ ಅನ್ನು ಬಿಡಲಾಗುತ್ತಿದ್ದು, ಒಟ್ಟು 64 ರೌಂಡ್ ಹಾಕಲಿವೆ.

* ಕೆಂಪೇಗೌಡ ಬಸ್‌ ನಿಲ್ದಾಣದಿಂ ಜನಪ್ರಿಯ ಟೌನ್‌ಶಿಪ್‌ ಮಾರ್ಗ ಸಂಖ್ಯೆ ವಿ-ಜಿ7 ನಲ್ಲಿ 6 ಬಸ್ ಬಿಡಲಾಗುತ್ತಿದ್ದು, 60 ರೌಂಡ್ ಹಾಕಲಿವೆ.

* ಕಾವೇರಿ ಭವನದಿಂದ ಡಿ ಕ್ರಾಸ್(ದೊಡ್ಡಬಳ್ಳಾಪುರ) ಮಾರ್ಗದಲ್ಲಿ ವಿ-285ಎಂಬಿಯ 5 ಬಸ್ ಸಂಚರಿಸಲಿದ್ದು, 32 ಸುತ್ತು ಪ್ರಯಾಣಿಸಲಿವೆ.

* ಕೆಂಪೇಗೌಡ ಬಸ್ ನಿಲ್ದಾಣದಿಂದ ವೈಟ್ ಫೀಲ್ಡ್ ಟಿಟಿಎಂಸಿ ಮಾರ್ಗ ವಿ-333ಪಿಯಲ್ಲಿ 11 ಬಸ್ ಬಿಡಲಾಗುತ್ತಿದ್ದು, 60 ರೌಂಡ್ ಹೊಡೆಯಲಿವೆ.

* ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ವಿ-501ಎ ಮಾರ್ಗದಲ್ಲಿ 10 ಬಸ್ ಬಿಡಲಾಗುತ್ತಿದ್ದು, 50 ರೌಂಡ್ ಹೊಡೆಯಲಿವೆ.

ಜನವರಿ 3ರಿಂದ ಒಟ್ಟು 37 ಹವಾನಿಯಂತ್ರಿತ ಬಸ್ ಅನ್ನು ಬಿಡಲಾಗುತ್ತಿದ್ದು, 266 ಸುತ್ತು ಹಾಕಲಿವೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recommended Video

ಶಿವಣ್ಣ ಯಶ್ ದರ್ಶನ್ ಗೆ ಡಿಕೆಶಿ ಕೈಮುಗಿದು ಬೇಡಿಕೊಂಡಿದ್ದು ಯಾಕೆ? | Oneindia kannada

English summary
BMTC Increasing Air-Conditioned Bus services in City For providing Comfortable and Affordable transport facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X