ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೆಟ್ ಇಲ್ಲದೇ ಪ್ರಯಾಣಿಸಿದ 2031 ಜನರಿಂದ 3.39 ಲಕ್ಷ ದಂಡ ವಸೂಲಿ ಮಾಡಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ನವೆಂಬರ್ 17: ಟಿಕೆಟ್ ಇಲ್ಲದೇ ಪ್ರಯಾಣ, ದಂಡಕ್ಕೆ ಆಹ್ವಾನ. ಸರ್ಕಾರದ ಪ್ರತಿಯೊಂದು ಬಸ್ಸುಗಳಲ್ಲಿ ಇಂಥ ಬೋರ್ಡ್ ಸರ್ವೇ ಸಾಮಾನ್ಯವಾಗಿರುತ್ತವೆ. ಈ ಬಗ್ಗೆ ಅರಿವಿದ್ದರೂ ಸಹ ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ ಮಂದಿಗೆ ಬಿಎಂಟಿಸಿ ಬಿಸಿ ಮುಟ್ಟಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಟಿಕೆಟ್ ಇಲ್ಲದೇ ಅನಧಿಕೃತವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 3.39 ಲಕ್ಷಕ್ಕೂ ಅಧಿಕ ಮೊತ್ತದ ದಂಡವನ್ನು ವಸೂಲಿ ಮಾಡಲಾಗಿದೆ. ಆ ಮೂಲಕ ಸಾರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಎಂಟಿಸಿ ಕ್ರಮ ತೆಗೆದುಕೊಂಡಿದೆ.

ಅಕ್ಟೋಬರ್-2021ರ ಮಾಹೆಯಲ್ಲಿ ಬಎಂಟಿಸಿ ತನಿಖಾ ತಂಡದ ಅಧಿಕಾರಿಗಳು 14,233 ಟ್ರಿಪ್ ಬಸ್ಸುಗಳಲ್ಲಿ ತಪಾಸಣೆ ನಡೆಸಿದ್ದು, 2031 ಮಂದಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಹಾಗೆ ಸಿಕ್ಕಿ ಬಿದ್ದವರಿಂದ 3,39,100 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದ್ದು, ಸಂಸ್ಥೆಯ ನಿರ್ವಾಹಕರ ವಿರುದ್ಧ 1,295 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

BMTC imposes fine for 2203 ticketless passengers in October 2021

ಮಹಿಳೆಯರ ಸೀಟಿನಲ್ಲಿ ಕುಳಿತವರಿಂದ 17,200 ಲಕ್ಷ ದಂಡ ವಸೂಲಿ:

ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಗಳನ್ನು ಮೀಸಲು ಇರಿಸಲಾಗಿದೆ. ಹೀಗೆ ಮೀಸಲಿರಿಸಿದ ಆಸನಗಳಲ್ಲಿ ಕುಳಿತು ಪ್ರಯಾಣ ಮಾಡಿದ 172 ಮಂದಿ ಪುರುಷ ಪ್ರಯಾಣಿಕರಿಂದ 17,200 ರೂಪಾಯಿ ಹಣವನ್ನು ಮೋಟಾರು ವಾಹನ ಕಾಯ್ದೆ 1988 ಕಾಲಂ 177 ಮತ್ತು 94ರ ಪ್ರಕಾರ ದಂಡ ವಿಧಿಸಲಾಗಿದೆ. ಅಕ್ಟೋಬರ್ 2021ರ ಮಾಹೆಯಲ್ಲಿ ಒಟ್ಟು 2203 ಪ್ರಯಾಣಿಕರಿಂದ 3,56,300 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಅನಗತ್ಯ ದಂಡ ಪಾವತಿಸುವುದರ ಬದಲು ನಿಯಮ ಪಾಲಿಸಿ:

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಅಧಿಕೃತ ಟಿಕೆಟ್, ದಿನದ ಪಾಸ್, ಮಾಸಿಕ ಪಾಸ್ ಅನ್ನು ಹೊಂದುವುದು ಅತ್ಯಗತ್ಯವಾಗಿರುತ್ತದೆ. ಇದರಿಂದ ಅನಗತ್ಯವಾಗಿ ದಂಡವನ್ನು ಪಾವತಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಬಿಎಂಟಿಸಿ ಕಡೆಯಿಂದಲೂ ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಒದಗಿಸಲು ಅನುಕೂಲವಾಗಲಿದೆ. ಅಲ್ಲದೇ ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತುಕೊಳ್ಳಬಾರದು. ಒಂದು ವೇಳೆ ಕುಳಿತಿದ್ದರೂ ಸಹ, ಮಹಿಳಾ ಪ್ರಯಾಣಿಕರು ಬಸ್ ಏರಿದ ನಂತರದಲ್ಲಿ ಆ ಆಸನಗಳನ್ನು ಬಿಟ್ಟು ಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ರಾತ್ರಿ ಬಸ್ ಸಂಚಾರ ಆರಂಭಿಸಿದ ಬಿಎಂಟಿಸಿ; ಮಾರ್ಗದ ವಿವರರಾತ್ರಿ ಬಸ್ ಸಂಚಾರ ಆರಂಭಿಸಿದ ಬಿಎಂಟಿಸಿ; ಮಾರ್ಗದ ವಿವರ

English summary
BMTC checking staff collects Rs. 3,56,300 as penalty from 2203 ticketless travellers in October Month. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X