ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವಜ್ರ ಪ್ರಯಾಣ ದರ ಶೇ 16.89ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 30: ಡೀಸೆಲ್ ದರ ನಿರಂತರವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಜ್ರ ಬಸ್‌ಗಳ ಪ್ರಯಾಣದರದಲ್ಲಿ ಹೆಚ್ಚಳ ಮಾಡಿದೆ.

ವೋಲ್ವೊ ಬಸ್‌ಗಳ ಟಿಕೆಟ್ ದರವನ್ನು ಶೇ 16.89ರಷ್ಟು ಏರಿಕೆ ಮಾಡಲಾಗಿದ್ದು, ಹೊಸ ದರವು ಜುಲೈ 1ರಿಂದಲೇ ಜಾರಿಗೆ ಬರಲಿದೆ.

ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?

ಹೊಸ ವರ್ಷದ ಪ್ರಯುಕ್ತ ವರ್ಷಾರಂಭದಲ್ಲಿ ಪ್ರಯಾಣಿಕರನ್ನು ಸೆಳೆಯುವ ಸಲುವಾಗಿ ಬಿಎಂಟಿಸಿ, ವಾಯುವಜ್ರ ಬಸ್‌ಗಳ ಪ್ರಯಾಣ ದರವನ್ನು ಶೇ 5ರಿಂದ ಶೇ 37ರಷ್ಟು ಕಡಿತ ಮಾಡಿತ್ತು.

bmtc hiked volvo bus ticket price up to 16.89%

ಪ್ರಾಯೋಗಿಕವಾಗಿ ಒಂದು ತಿಂಗಳ ಅವಧಿಗೆ ಪರಿಷ್ಕರಿಸಲಾಗಿದ್ದ ದರವನ್ನು ಜೂನ್ 30ರವರೆಗೂ ವಿಸ್ತರಿಸಲಾಗಿತ್ತು. ದರ ಇಳಿಕೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿ ಆದಾಯದಲ್ಲಿಯೂ ಏರಿಕೆಯಾಗಿತ್ತು. ಆದರೆ, ಪ್ರತಿ ಕಿ.ಮೀ. ಲೆಕ್ಕದಲ್ಲಿ ದೊರಕುವ ಆದಾಯದಲ್ಲಿ ಯಾವುದೇ ಹೆಚ್ಚಳ ಆಗಿರಲಿಲ್ಲ.

ಡೀಸೆಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಿರುವುದರಿಂದ ಮತ್ತು ಸಿಬ್ಬಂದಿಯ ತುಟ್ಟಿಭತ್ಯೆ ಹೆಚ್ಚಳದಿಂದ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆಯಾಗಿದೆ.

ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ

ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಪ್ರಾಯೋಗಿಕವಾಗಿ ಜಾರಿ ಮಾಡಿದ ದರ ಸೇವೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಈ ಕಾರಣದಿಂದ ದರ ಹೆಚ್ಚಳ ಅನಿವಾರ್ಯವಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗದಂತೆ ಶೇ 16.89ರಷ್ಟು ದರ ಏರಿಕೆ ಮಾಡಲಾಗಿದೆ ಎಂದು ಹೇಳಿದೆ.

English summary
BMTC hiked ist Volvo bus service ticket price up to 16.89%. The new rate will be implemented from july 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X