ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಪಾಸ್ ದರ ಏರಿಸಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಜೂನ್ 13: ವಿದ್ಯಾರ್ಥಿಗಳ ಬಸ್‌ಪಾಸ್ ದರವನ್ನು ಏರಿಕೆ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ಬಸ್‌ ಪಾಸ್ ಮೇಲೆ 30 ರೂ ಹೆಚ್ಚಳ ಮಾಡಿದೆ.

 bmtc hiked student pass price

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ಮಾರ್ಟ್ ಕಾರ್ಡ್ ಮಾದರಿಯ ವಿದ್ಯಾರ್ಥಿ ಬಸ್‌ಪಾಸ್‌ಮೇಲಿನ ಸೇವಾ ಶುಲ್ಕವನ್ನು 30 ರೂ ಕಡಿಮೆಗೊಳಿಸಿತ್ತು.

ಅದರಂತೆ 200ರ ಬದಲು 170 ರೂ ಪಾವತಿಸಬೇಕಾಗಿತ್ತು. ಇದೀಗ ಬಸ್‌ಪಾಸ್ ದರವನ್ನು 30ರೂ ಹೆಚ್ಚಳ ಮಾಡಿದೆ.

ಪ್ರೌಢಶಾಲೆ ಬಾಲಕರು 600 ರೂ, ಬಾಲಕಿಯರು 400 ರೂ ನೀಡಬೇಕಿತ್ತು, ಇದೀಗ 30 ರೂ ಹೆಚ್ಚಾಗಿ ಪಾವತಿಸಬೇಕು.

ಪಿಯುಸಿ ವಿದ್ಯಾರ್ಥಿಗಳು 900 ರೂ, ಪದವಿ ವಿದ್ಯಾರ್ಥಿಗಳು 1100, ವೃತ್ತಿಪರ ಕಾಲೇಜು 1150, ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳು 1680, ಸಂಜೆ ಕಾಲೇಜು, ಪಿಎಚ್‌ಡಿ ವಿದ್ಯಾರ್ಥಿಗಳು 1480ರೂ ವಾರ್ಷಿಕ ಪಾಸ್ ಕೊಳ್ಳಲು ಹಣ ನೀಡಬೇಕಾಗಿದೆ. ಸೇವಾ ಶುಲ್ಕ ಪ್ರತ್ಯೇಕವಾಗಿರುತ್ತದೆ.

ಯಲಹಂಕ ಸ್ಯಾಟಲೈಟ್ ಟೌನ್, ಬಸವೇಶ್ವರನಗರ, ಇಸ್ರೋಲೇಔಟ್, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ಶ್ರೀವಿದ್ಯಾನಗರ, ಎನ್‌ಆರ್ ಕಾಲೊನಿ, ನಂದಿನಿ ಲೇಔಟ್, ಮಲ್ಲೇಶ್ವರ, ಪೀಣ್ಯ, ವೈಟ್ ಫೀಲ್ಡ್, ಕೋರಮಂಗಲ, ಜಯನಗರ, ಯಶವಂತಪುರ, ಶಿವಾಜಿನಗರ, ಕೆಂಗೃಇ, ಬನಶಂಕರಿ ಇನ್ನಿತರೆ ಕಡೆಗಳಲ್ಲಿ ಪಾಸ್ ಕೌಂಟರ್ ತೆರೆಯಲಾಗಿದೆ.

English summary
BMTC announced that they going to hike students yearly bus pass fare. they are increasing 30 rupees for each bus passess.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X