ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಧರಿಸದಿದ್ದರೆ ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ 500 ರೂ. ದಂಡ

|
Google Oneindia Kannada News

ಬೆಂಗಳೂರು, ಜೂನ್ 13: ಬಿಎಂಟಿಸಿ ನಿರ್ವಾಹಕರು, ಚಾಲಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.

Recommended Video

6 members of a single family from Bengaluru tested corona positive | Oneindia Kannada

ಒಂದೊಮ್ಮೆ ಚಾಲಕರು, ನಿರ್ವಾಹಕರು ಮಾಸ್ಕ್ ಧರಿಸಿದಿದ್ದರೆ 500 ರೂ. ದಂಡ ತೆರಬೇಕಾಗುತ್ತದೆ.ಬಿಎಂಟಿಸಿ ಚಾಲಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಎಂಡಿ ಶಿಖಾ ಈ ಸಿರ್ಧಾರ ತೆಗೆದುಕೊಂಡಿದ್ದಾರೆ.

ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?ಜನರು ಬಿಎಂಟಿಸಿ ಬಸ್ ಹತ್ತದಿರಲು ಕಾರಣ: ಒಂದು ಕೊರೊನಾ ಮತ್ತೊಂದು?

ಕರ್ತವ್ಯ ನಿರ್ವಹಣೆ ವೇಳೆ ಚಾಲನಾ ಸಿಬ್ಬಂದಿ ಕೊರೊನಾ ಸಂಬಂಧಿ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಈ ಆದೇಶ ನಿರ್ಲಕ್ಷಿಸಿದರೆ ದಂಡದ ಜೊತೆಗೆ ಶಿಸ್ತು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಎಚ್ಚರಿಕೆ ನೀಡಿದ್ದಾರೆ.

BMTC Fixed Rs 500 Fine For Drivers And Conductors For Not Wearing Masks

ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿಯು ನಿಗಮದ ಚಾಲನಾ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದು ತಮ್ಮ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಶಿಸ್ತುಕ್ರಮ ಖಚಿತ ಎಂದಿದ್ದಾರೆ.

ಚಾಲಕ ಹಾಗೂ ನಿರ್ವಾಹಕರು ಮುಖಗವಸು ಧರಿಸಿದೆ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರೆ 500 ರೂ ದಂಡ ತೆರಬೇಕು , ಒಂದಕ್ಕಿಂತ ಹೆಚ್ಚು ಬಾರಿ ಸಿಕ್ಕಿಬಿದ್ದರೆ ಚಾಲನಾ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

English summary
The BMTC has fixed a fine of Rs 500 for drivers and conductors who fail to wear masks. Under pressure to generate revenue to pay its employees, the Bangalore Metropolitan Transport Corporation (BMTC) is working hard to improve the daily ridership in the face of the Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X