ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲಸದಿಂದ ವಜಾ, ನಮ್ಮ ಕುಟುಂಬ ಬೀದಿಗೆ ಬಿದ್ದಿದೆ; ಬಿಎಂಟಿಸಿ ನೌಕರನಿಂದ ದಯಾಮರಣ ಅರ್ಜಿ!

|
Google Oneindia Kannada News

ಬೆಂಗಳೂರು, ಮೇ.8: ಬಿಎಂಟಿಸಿ ನೌಕರರು ನಡೆಸಿದ ಮುಷ್ಕರದಲ್ಲಿ ನಾನು ಭಾಗಿಯಾಗಿರಲಿಲ್ಲ ಆದ್ರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಈಗ ಕೆಲಸವಿಲ್ಲದೆ ತಿನ್ನಲು ಅನ್ನವಿಲ್ಲ, ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ. ನನ್ನ ಜೀವನ ಸಾಗಿಸಲು ಆಗುತ್ತಿಲ್ಲ. ಆದ್ದರಿಂದ ನಾನು, ನನ್ನ ಹೆಂಡತಿ ಮಕ್ಕಳು ಸಾಯಬೇಕಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿಗೆ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲುಗೆ ದಯಾಮರಣ ಅರ್ಜಿ ಕೊಡುವಂತೆ ಬಿಎಂಟಿಸಿ ನೌಕರ ಶಂಬುಲಿಂಗಯ್ಯ ಚಿಕ್ಕಮಠ ಮನವಿ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸಾರಿಗೆ ಸಚಿವರಿಗೆ ಎಷ್ಟೇ ಮನವಿ ಮಾಡಿದ್ರು ನನಗೆ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಹೆಂಡತಿ ಮಕ್ಕಳಿಗೆ ದಯಮರಣ ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ಈಗಾಗಲೇ ಕೆಲಸದಿಂದ ವಜಾಗೊಂಡ ಐದರಿಂದ ಹತ್ತು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರಿಗೆ ಮಾತ್ರ ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದೆ ದಯಾಮರಣ ಕೊಡಿ ಎಂದು ಪತ್ರ ಬರೆಯುತ್ತಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ವರ್ಷ ಸರ್ಕಾರ ಎಷ್ಟೇ ಮನವಿ ಮಾಡಿದರೂ ಪಟ್ಟುಬಿಡದೆ ಫ್ರೀಡಂಪಾರ್ಕ್‌ನಲ್ಲಿ ಬಿಎಂಟಿಸಿ ನೌಕರರು ಪ್ರತಿಭಟನೆ ಮುಂದುವರೆಸಿದ್ದರು. ಇದರಿಂದ ಕಠಿಣ ನಿರ್ಧಾರಕ್ಕೆ ಬಿಎಂಟಿಸಿ ಆಡಳಿತ ಮಂಡಳಿ ಮುಂದಾಯಿತು.ಪ್ರಮುಖ ಪ್ರತಿಭನಾ ಮುಖಂಡರನ್ನು ಮತ್ತು ಕೆಲ ನೌಕರರನ್ನು ಕೆಲಸದಿಂದ ವಜಾ ಮಾಡಿತ್ತು. ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದ ಕೆಲ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಲವರನ್ನು ಮರು ನೇಮಕ ಮಾಡಿಕೊಂಡಿತ್ತು. ಕಾನೂನು ರೀತಿಯಲ್ಲಿ ವಜಾ ಮಾಡಿದ್ದ ನೌಕರರನ್ನು ಮಾತ್ರ ಇದುವರೆಗೂ ಕೆಲಸಕ್ಕೆ ಬಿಎಂಟಿಸಿ ಆಡಳಿತ ಸಂಸ್ಥೆ ನಿರ್ಧಾರ ಮಾಡಿಲ್ಲ.

BMTC Driver Demands Euthanasia Writes Request Letter to the President and Prime Minister

'ಇದು ಬರೀ ಸಂಬಳದ ವಿಚಾರವಲ್ಲ, ನೌಕರರ ಬೇಡಿಕೆ ಆಗ್ರಹಿಸಿ ನಡೆಸಿದ ಸತ್ಯಾಗ್ರಾಹ ಎಂದು ನಾಳೆ ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಲಾಗುತ್ತದೆ, 2941 ಜನ ಅಮಾನತಾಗಿದ್ದಾರೆ. 7666 ಸಿಬ್ಬಂದಿ ಶೋಕಾಸ್ ನೋಟಿಸ್ ನೀಡಿದ್ದಾರೆ, ಸುಮಾರು 8000 ಜನ ವರ್ಗಾವಣೆ ಮಾಡಿದ್ದಾರೆ, ಒಟ್ಟಾರೆ 20 ಸಾವಿರ ಜನರ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕಾಗಿತ್ತು. ಶೇ 10ರಷ್ಟು ಸಂಬಳ ಏರಿಕೆ ಭರವಸೆ ಸೇರಿದಂತೆ ಅನೇಕ ಆಶ್ವಾಸನೆಗಳು ಇನ್ನೂ ಜಾರಿಯಾಗಿಲ್ಲವೇಕೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದರು. ಸುಮಾರು 15 ದಿನಗಳ ಬಳಿಕ ಕೋರ್ಟ್ ನಿರ್ದೇಶನದ ಬಳಿಕ ಮುಷ್ಕರ ಅಂತ್ಯಕಂಡಿತ್ತು.

BMTC Driver Demands Euthanasia Writes Request Letter to the President and Prime Minister

ಯಾರು ಯಾರು ಅಮಾನತಾಗಿಲ್ಲ ಎಲ್ಲರೂ ಎಂದಿನಂತೆ ಕೆಲಸಕ್ಕೆ ಹಾಜರಾಗಬಹುದು. ಟ್ರೈನಿಗಳು, ಪ್ರೊಬೆಷನರಿ ಅವಧಿಯ ಸಿಬ್ಬಂದಿಗಳನ್ನು ಅಮಾನತಲ್ಲ, ಕೆಲಸದಿಂದ ತೆಗೆದು ಹಾಕಲಾಗಿದೆ. ಅವರು ಅಪೀಲ್ ಮಾಡಲು ಆಗುವುದಿಲ್ಲ. ಶೋಕಾಸ್ ನೋಟಿಸ್ ಪಡೆದಿರುವ ಸಿಬ್ಬಂದಿ ಸೂಕ್ತ ಕಾರಣ ನೀಡಿ, ನಮ್ಮ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ. ಅಮಾನತಾಗಿರುವವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಕೋರ್ಟ್ ಆದೇಶದ ಬಗ್ಗೆ ತಿಳಿದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Recommended Video

Livingstone ಬಗ್ಗೆ Prasidh Krishna ಅಸಮಾಧಾನ | Oneindia Kannada

English summary
BMTC employee Shambulingayya Chikkamath has appealed to the President and Prime Minister for euthanasia. Know Why?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X