ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖೋಟಾನೋಟು ದಂಧೆ, ಬಿಎಂಟಿಸಿ ಸಿಬ್ಬಂದಿ ಜೈಲುಪಾಲು

|
Google Oneindia Kannada News

ಬೆಂಗಳೂರು, ಮೇ 4: ಬಿಎಂಟಿಸಿ ಅಥವಾ ಖಾಸಗಿ ಬಸ್‌ಗಳು ಯಾವುದೇ ಇರಲಿ, ಅವರು ನೀಡಿದ ನೋಟಿನ ಬಗ್ಗೆ ನಿಮಗೆ ಅನುಮಾನ ಬಂದರೆ ತೆಗೆದುಕೊಳ್ಳಬೇಡಿ.

ಬಿಎಂಟಿಸಿ ಬಸ್‌ ಕಂಡಕ್ಟರ್ ಒಬ್ಬರು ದಿಢೀರ್ ಶ್ರೀಮಂತನಾಗುವ ಆಸೆಯಿಂದ ಖೋಟಾನೋಟು ದಂಧೆಗೆ ಇಳಿದು ಈಗ ಜೈಲು ಪಾಲಾಗಿರುವ ಘಟನೆ ನಡೆದಿದೆ.

ಬಿಎಂಟಿಸಿ ಬಸ್ ಪಲ್ಟಿ ಹಿಂದಿದೆ ಹಲವು ಕಾರಣಗಳುಬಿಎಂಟಿಸಿ ಬಸ್ ಪಲ್ಟಿ ಹಿಂದಿದೆ ಹಲವು ಕಾರಣಗಳು

ಊರಲ್ಲಿದ್ದ ಜಮೀನು ಮಾರಿ 7 ಲಕ್ಷ ರೂ ಅಸಲಿ ನೋಟು ಕೊಟ್ಟು 15 ಲಕ್ಷ ನಕಲಿ ನೋಟು ಪಡೆದು ಶ್ರೀಮಂತನಾಗಲು ಹೊರಟು ಪರಿಚಿತನಿಂದಲೇ ಮೋಸ ಹೋಗಿ, ಕೊನೆಗೆ ಅದೇ ವಂಚಕನ ಮಾತಿಗೆ ಬಿದ್ದು ಖೋಟಾನೋಟು ಮುದ್ರಣ ಹಾಗೂ ಚಲಾವಣೆ ದಂಧೆಗೆ ಇಳಿದು ಈಗ ಜೈಲು ಸೇರಿದ್ದಾನೆ.

Bmtc driver and conductor involved fake currency mafia

2 ಸಾವಿರ ಮತ್ತು 500 ರೂ ಮೌಲ್ಯದ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡಲು ಮುಂದಾಗಿದ್ದ ಬಿಟಂಟಿಸಿ ಡ್ರೈವರ್ ಕಂ ಕಂಡಕ್ಟರ್ ಸೋಮನಗೌಡ, ನಂಜೇಗೌಡ, ಫೋಟೊಗ್ರಾಫರ್ ಕಿರಣ್ ಕುಮಾರ್ ಎಂಬುವವರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಸೋಮನಗೌಡ ಹಾಗೂ ನಂಜೇಗೌಡ ಬಿಎಂಟಿಸಿ ಸಿಬ್ಬಂದಿಯಾಗಿದ್ದು, ಖಾಟಾ ನೋಟುಗಳನ್ನು ಪ್ರಯಾಣಿಕರಿಗೆ ಚಲಾವಣೆ ಮಾಡಿರುವ ಸಾದ್ಯತೆ ಇದೆ. ಆದರೆ ಇದುವರೆಗೂ ಯಾರಿಗೂ ಚಲಾವಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆ, ಎಲ್ಲೆಲ್ಲಿ?ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆ, ಎಲ್ಲೆಲ್ಲಿ?

ಸೋಮನಗೌಡನಿಗೆ ಎರಡು ವರ್ಷಗಳ ಹಿಂದೆ ರಾಮಕೃಷ್ಣ ಎಂಬುವವನ ಪರಿಚಯವಾಗಿತ್ತು. ಒಂದು ಲಕ್ಷ ರೂ ಅಸಲಿ ನೋಟ ಕೊಟ್ಟರೆ 2 ಲಕ್ಷ ರೂ ಖೋಟಾನೋಟು ನೀಡುತ್ತೇನೆ, ಚಲಾವಣೆ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಹೇಳಿದ್ದ.

ಬಳಿಕ 1 ಲಕ್ಷ ರೂ ನೀಡಿ, 2 ಲಕ್ಷ ಖೋಟಾನೋಟು ಪಡೆದು ಅದನ್ನು ಚಲಾವಣೆ ಮಾಡಿದ್ದ. ಬಳಿಕ ದುರಾಸೆಯಿಂದ ಮನೆಯ ಜಮೀನು ಮಾರಿ ಬಂದ ಹಣವನ್ನೆಲ್ಲಾ ಈ ದಂಧೆಗೆ ಸುರಿದಿದ್ದ. ಆದರೆ ಖೋಟಾನೋಟು ಸಿಕ್ಕಿರಲಿಲ್ಲ. ಅವರ ಮಧ್ಯೆ ಜಗಳವೂ ನಡೆದಿತ್ತು. ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

English summary
Bmtc driver and conductor arrested for exchanging huge amount of fake currencies
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X