ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟು

|
Google Oneindia Kannada News

ಬೆಂಗಳೂರು, ಮೇ 16: ಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟು ಮಾಡಿಕೊಂಡಿದೆ.

Recommended Video

ಹೇಳಿದ ಕೆಲ್ಸ ಮಾಡಿಲ್ಲ‌ ಅಂದ್ರೆ‌ ಸಸ್ಪೆಂಡ್ ಮಾಡ್ತೀನಿ | BC Patil Warning to Officers

ಸೋಮವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿಯಿಂದ ನೌಕರರಿಗೆ ಸೂಚಿಸಿದೆ, ಇದಕ್ಕೆ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳಿರುವುದರಿಂದ ಬಿಎಂಟಿಸಿ ನೌಕರರು ಪ್ರಮಾಣ ಪತ್ರ ಪಡೆಯಲು ಮುಗಿಬಿದ್ದಿದ್ದಾರೆ.

ಸಾಮಾಜಿಕ ಅಂತರ ಮರೆತು ವೈದ್ಯಕೀಯ ಪ್ರಮಾಣಪತ್ರ ಪಡೆಯಲು ಕೆಂಗೇರಿ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ಸೇರಿದ್ದಾರೆ. ಬಿಎಂಟಿಸಿಯ ನಿರ್ಲಕ್ಷ್ಯದಿಂದ ಇದೀಗ ಆತಂಕ ಎದುರಾಗಿದೆ.

BMTC Director Orders All Staff To Appear For Work From May 18

ಕೇವಲ ಭಾನುವಾರದವರೆಗೆ ಪ್ರಮಾಣ ಪತ್ರ ಪಡೆಯಲು ಸಮಯ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನೌಕರರಿಗೆ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣ, ಶಾಂತಿನಗರ ಸಾರಿಗೆ ಘಟಕ, ಶಾಂತಿ ನಗರ ಬಿಎಂಟಿಸಿ ಆಸ್ಪತ್ರೆ, ಯಶವಂತಪುರ ಬಿಎಂಟಿಸಿ ಘಟಕ, ಕೆಂಗೇರಿ ಟಿಟಿಎಂಸಿ ಹಾಗೂ ಹೆಣ್ಣೂರು ಘಟಕಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

BMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿBMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿ

ಶುಕ್ರವಾರ ಸುತ್ತೋಲೆ ಹೊರಡಿಸಿದ್ದ ಬಿಎಂಟಿಸಿ, ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿತ್ತು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ ಹಿನ್ನೆಲೆ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್‍ಗಳು ತುರ್ತು ಆರೋಗ್ಯ ಸೇವೆಗಾಗಿ ರಸ್ತೆಗೆ ಇಳಿದಿದ್ದವು.

ಈಗ ಸರ್ಕಾರವು ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಿದೆ. ಸದರಿ ಇಲಾಖೆಯಲ್ಲಿ ಬಿಎಂಟಿಸಿಯು ಒಳಪಡುತ್ತದೆ.

ಆದ್ದರಿಂದ ಮೇ 17ರಂದು ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಮೇ 18ರಿಂದ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿತ್ತು.

English summary
The BMTC has advised employees to attend work from Monday, saying that medical certification is mandatory, as BMTC employees are running out of certificates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X