ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಳಿ ತನ್ನ ನೌಕರರಿಗೆ ಪಿಎಫ್ ನೀಡಲೂ ಕೂಡ ಹಣ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಎಂಟಿಸಿಯು ಕಳೆದೊಂದು ವರ್ಷದಿಂದ 310 ಕೋಟಿ ರೂ ಭವಿಷ್ಯನಿಧಿ ಬಾಕಿ ಉಳಿಸಿಕೊಂಡಿದೆ, ಇದರಿಂದಾಗಿ ಬಿಎಂಟಿಸಿ ನೌಕರರು ಪರಿತಪಿಸುವಂತಾಗಿದೆ.

ಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶಡಿಪೋ ಹತ್ತಿರವಿದ್ದರೂ ಬಿಎಂಟಿಸಿ ಬಸ್ ಇಲ್ಲ, ಜನರ ಆಕ್ರೋಶ

ಬಿಎಂಟಿಸಿಯು ನೌಕರರ ವೇತನದಲ್ಲಿ ಮಾಸಿಕ ಶೇ.12ರಷ್ಟು ಹಣವನ್ನು ಪಿಎಫ್ ವಂತಿಗೆಗೆ ಕಡಿತ ಮಾಡುತ್ತದೆ. ನಿಗಮದಿಂದ ಪಿಎಫ್ ನಿಧಿಗೆ ಪಾವತಿಸುತ್ತದೆ. ನೌಕರರು ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಬಳಿಕ ಈ ಹಣವನ್ನು ಪಡೆದುಕೊಳ್ಳುತ್ತಾರೆ.

BMTC Did Not Have Enough Money To Give PF For Its Employees

ಬಿಎಂಟಿಸಿ 2018ರ ಜುಲೈನಿಂದ 2019ರ ಆಗಸ್ಟ್ ವರೆಗೂ 310 ಕೋಟಿ ರೂ ಹಣವನ್ನು ಪಿಎಫ್ ನಿಧಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಸರ್ಕಾರಿ ನೌಕರರ ಅಥವಾ ಖಾಸಗಿ ನೌಕರರು ಯಾರೇ ಆದರೂ ಇವೃತ್ತಿ ನಂತರ ಬದುಕು ಮತ್ತೊಂದು ಮಗ್ಗಲಿಗೆ ತಿರುಗುತ್ತದೆ. ನೌಕರರು ನಿವೃತ್ತಿ ಬಳಿಕ ಪಿಎಫ್ ರೂಪದಲ್ಲಿ ದೊಡ್ಡ ಮೊತ್ತ ಕೈಸೇರುವ ವಿಶ್ವಾಸದಲ್ಲಿ ಕುಟುಂಬ, ಮದುವೆ, ಮನೆ, ಮಕ್ಕಳ ಭವಿಷ್ಯ ಸೇರಿದಂತೆ ಹಲವು ಕಾರಣಗಳಿಗೆ ಕಮಿಟ್‌ಮೆಂಟ್ ಮಾಡಿಕೊಂಡಿರುತ್ತಾರೆ.

ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಿಎಂಟಿಸಿಯಲ್ಲಿ ಕಳೆದೊಂದು ವರ್ಷದಿಂದ ಪಿಎಫ್ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ನಿವೃತ್ತ ನೌಕರರಿಗೆ ಸಮಸ್ಯೆಯಾಗಿದೆ. ಸತತ ನಷ್ಟದಿಂದ ನಿಗಮದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸದಿದ್ದರೆ ಮತ್ತಷ್ಟು ಅಧೋಗತಿಗೆ ತಲುಪುತ್ತದೆ.

ಕನ್ನಡದಲ್ಲಿ ಉಗುಳಿದರೆ 500 ರೂ ದಂಡ, ಇಂಗ್ಲಿಷಿನಲ್ಲಿ ಉಗುಳಿದರೆ 100 ರೂ.ಕನ್ನಡದಲ್ಲಿ ಉಗುಳಿದರೆ 500 ರೂ ದಂಡ, ಇಂಗ್ಲಿಷಿನಲ್ಲಿ ಉಗುಳಿದರೆ 100 ರೂ.

ಬಿಎಂಟಿಸಿಯು ಪ್ರತಿ ತಿಂಗಳು ನೌಕರರ ವೇತನ ಆಧರಿಸಿ ಪಿಎಫ್ ಮೊತ್ತ ಕಡಿತಗೊಳಿಸುತ್ತದೆ. ಈ ಹಣವನ್ನು ನಿಗಮದ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದರಿಂದ ಪಾವತಿಸುವಲ್ಲಿ ವಿಳಂಬ ವಾಗಿದೆ.ಮೋಟಾರು ವಾಹನ ತೆರಿಗೆ, ಟೋಲ್ ಶುಲ್ಕದಲ್ಲೂ ವಿನಾಯಿತಿ ನೀಡಬೇಕು ಎನ್ನುವುದು ನಿವೃತ್ತ ನೌಕರರ ಬೇಡಿಕೆಯಾಗಿದೆ.

English summary
BMTC Dont Have Enough Money To Give PF to its employees, Every month, 3.67 per cent of the employees’ salary is deducted and submitted to a PF account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X