ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿರ ಕೋಟಿ ತಲುಪುತ್ತಿದೆ ಬಿಎಂಟಿಸಿ ಸಾಲದ ಬಾಬ್ತು

By Nayana
|
Google Oneindia Kannada News

ಬೆಂಗಳೂರು, ಜು.9: ಬಿಎಂಟಿಸಿಯ ಆದಾಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕವಾಗಿರುವ ಬಿಎಂಟಿಸಿ, 5 ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ.

ಕಳೆದ ಐದು ವರ್ಷಗಳಲ್ಲಿ 971,62 ಕೋಟಿ ಸಾಲ ಮಾಡಿದ್ದು, 262.02 ಕೋಟಿ ಬಡ್ಡಿ ಕಟ್ಟಿದೆ. 2017-18ರಲ್ಲಿ 329,29 ಕೋಟಿ ಸಾಲ ಪಡೆದಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನಿಗಮದ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ ನೇರ ಸಹಾಯ ಘೋಷಿಸಿದೆ.

ಕರ್ನಾಟಕ ಬಜೆಟ್‌: ಬೆಂಗಳೂರಿಗೆ ಏನೇನು ಸಿಕ್ಕಿದೆ?ಕರ್ನಾಟಕ ಬಜೆಟ್‌: ಬೆಂಗಳೂರಿಗೆ ಏನೇನು ಸಿಕ್ಕಿದೆ?

ವಾಸ್ತವದಲ್ಲಿ ಈ ಮೊತ್ತದಿಂದ ನಿಗಮಕ್ಕೆ ದೊಡ್ಡ ಚೇತರಿಕೆ ಏನೂ ಸಿಗುವುದಿಲ್ಲ, ಈಗ ಬೆಳೆದಿರುವ ಸಾಲದ ಮೊತ್ತಕ್ಕೆ ಸರ್ಕಾರದ ಈ ಅಲ್ಪ ಸಹಾಯಧನ ಕೇವಲ ಬಡ್ಡಿ ಪಾವತಿಗೆ ಸಾಕಾಗುತ್ತದೆ. ಬಿಎಂಟಿಸಿಯು ನಗರಾದ್ಯಂತ ಕಫಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ಇದರ ಸದ್ಬಕೆಯಲ್ಲಿ ನಿಗಮ ಎಡವುತ್ತಿದೆ. ಕೇವಲ ಬಸ್‌ ಕಾರ್ಯಾಚರಣೆಯಿಂದ ಆದಾಯ ಗಳಿಸಲು ಸಾಧ್ಯವಿಲ್ಲ.

BMTC debt to reach Rs 1K soon!

ನಗರದಲ್ಲಿ ನಮ್ಮ ಮೆಟ್ರೋ ರೈಲು ಕಾಯಾಚರಣೆ ಆರಂಭವಾದಾಗಿನಿಂದ ನಿಗಮದ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ನಿತ್ಯ 52 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಇದೀಗ 46 ಲಕ್ಷಕ್ಕೆ ಇಳಿದಿದೆ. ಮೆಟ್ರೋ ರೈಲು ಪ್ರಯಾಣಿಕರಿಗಾಘಿ ಒದಗಿಸಿರುವ ಫೀಡರ್‌ ಬಸ್‌ ಸೇವೆಯಿಂದಲೂ ನಿಗಮಕ್ಕೆ ನಷ್ಟವಾಗುತ್ತಿದೆ.

ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?ಬಿಎಂಟಿಸಿ ಬಸ್‌ ಬಣ್ಣ ಬದಲಾಗಲಿದೆ, ಹೇಗಿರುತ್ತೆ ಗೊತ್ತಾ?

ಈ ಫೀಡರ್‌ ಬಸ್‌ಗಳಿಗೂ ನಿರೀಕ್ಷಿತ ಪ್ರಮಾಣದ ಪ್ರಯಾಣಿಕರಿಲ್ಲ. ಹಾಗೆಂದು ಬಸ್‌ ಕಾರ್ಯಾಚರಣೆ ನಿಲ್ಲಿಸುವಂತಿಲ್ಲ, ಈ ಫೀಡರ್‌ ಬಸ್‌ ಸೇವೆಯಿಂದ ನಿಗಮಕ್ಕೆ 1.5 ಕೋಟಿ ರೂ. ನಷ್ಟವಾಗುತ್ತಿದೆ.

English summary
Once country's most profitable public transport corporation, BMTC to reach debt of Rs.1,000 crores. Datas revealed by the corporation has said financial status is worst than ever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X