ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯ ಬೆಂಗಳೂರು ದರ್ಶನಿ; 8 ಪ್ರವಾಸಿ ತಾಣ ವೀಕ್ಷಿಸಿ

|
Google Oneindia Kannada News

ಬೆಂಗಳೂರು, ಜನವರಿ 16 : ಬೆಂಗಳೂರಿನ ವಿವಿಧ ಸ್ಥಳಗಳನ್ನು ನೋಡಲು ಬಿಎಂಟಿಸಿ ಬೆಂಗಳೂರು ದರ್ಶನಿ ಸೇವೆಯನ್ನು ಒದಗಿಸುತ್ತಿದೆ. ಈ ಸೇವೆಗೆ ಮತ್ತೊಂದು ಬಸ್ ಸೇರಿಸಲಾಗಿದ್ದು, 8 ವಿವಿಧ ಸ್ಥಳಗಳನ್ನು ಜನರು ವೀಕ್ಷಿಸಬಹುದಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2019ರ ಡಿಸೆಂಬರ್‌ನಲ್ಲಿ ಆರಂಭಿಸಿದ್ದ 2ನೇ ಬೆಂಗಳೂರು ದರ್ಶನಿ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 41 ಸೀಟುಗಳ ಈ ಬಸ್ ಪ್ರತಿ ಶನಿವಾರ ಮಾತ್ರ ಸಂಚಾರ ನಡೆಸುತ್ತಿತ್ತು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ

ಬಿಎಂಟಿಸಿ ಈಗ ಬೆಂಗಳೂರು ದರ್ಶಿನಿ 2ನೇ ಬಸ್ ಸೇವೆಯನ್ನು ವಾರದ ಏಳು ದಿನಗಳಿಗೂ ವಿಸ್ತರಣೆ ಮಾಡಿದೆ. ವೋಲ್ವೊ ಬಸ್‌ಗಳ ಮೂಲಕ ಜನರು ನಗರದ 8 ಸ್ಥಳಗಳನ್ನು ವೀಕ್ಷಣೆ ಮಾಡಬಹುದು ಮತ್ತು ಅದರ ಬಗ್ಗೆ ವಿವರಗಳನ್ನು ಪಡೆಯಬಹುದಾಗಿದೆ.

ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?

ಪ್ರತಿದಿನ ಬೆಳಗ್ಗೆ 8.45ಕ್ಕೆ ಹೊರಡುವ ಬೆಂಗಳೂರು ದರ್ಶಿನಿ ಬಸ್ ಸಂಜೆ 6 ಗಂಟೆ ತನಕ ಸಂಚಾರ ನಡೆಸುತ್ತದೆ. ಈ ಬಸ್‌ನಲ್ಲಿ ಮಾರ್ಗದರ್ಶಕರು ಸಹ ಇರಲಿದ್ದು, ವಿವಿಧ ಭಾಷೆಗಳಲ್ಲಿ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ಜನರಿಗೆ ಒದಗಿಸಲಿದ್ದಾರೆ.

ಮೈ ಬಿಎಂಟಿಸಿ ಆಪ್ ಬಳಸುವುದು ಹೇಗೆ? ಏನಿದರ ಉಪಯೋಗ?ಮೈ ಬಿಎಂಟಿಸಿ ಆಪ್ ಬಳಸುವುದು ಹೇಗೆ? ಏನಿದರ ಉಪಯೋಗ?

ಜನರಿಂದ ಉತ್ತಮ ಪ್ರತಿಕ್ರಿಯೆ

ಜನರಿಂದ ಉತ್ತಮ ಪ್ರತಿಕ್ರಿಯೆ

ರಜೆ ದಿನಗಳಲ್ಲಿ ಬೆಂಗಳೂರು ದರ್ಶಿನಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 41 ಸೀಟುಗಳ ಬಸ್‌ಗಳಲ್ಲಿ 25 ರಿಂದ 30 ಸೀಟು ಭರ್ತಿ ಆಗಿರುತ್ತದೆ. ಉಳಿದ ದಿನಗಳಲ್ಲಿ 10 ರಿಂದ 15 ಸೀಟು ಭರ್ತಿಯಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2 ವೊಲ್ವೋ ಬಸ್‌

2 ವೊಲ್ವೋ ಬಸ್‌

ಬೆಂಗಳೂರು ದರ್ಶಿನಿಯಲ್ಲಿ ಮೊದಲು 2 ವೋಲ್ವೊ ಬಸ್‌ಗಳಿದ್ದವು. 41 ಸೀಟುಗಳ ಎರಡು ಬಸ್ ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯ ತನಕ ಸಂಚಾರ ನಡೆಸುತ್ತಿತ್ತು. ಆದರೆ, ಎರಡೂ ಬಸ್ ಒಂದೇ ಸ್ಥಳಗಳಿಗೆ ಭೇಟಿ ನೀಡುತ್ತಿತ್ತು. ಈಗ 8 ಹೊಸ ತಾಣಗಳನ್ನು ಪರಿಚಯಿಸಲಾಗಿದೆ.

ಬೆಂಗಳೂರು ದರ್ಶಿನಿ ದರದ ಮಾಹಿತಿ

ಬೆಂಗಳೂರು ದರ್ಶಿನಿ ದರದ ಮಾಹಿತಿ

ನಿಮ್ಮ ಬಳಿ ಬಿಎಂಟಿಸಿಯ ಯಾವುದೇ ಪಾಸುಗಳಿದ್ದರೂ ಬೆಂಗಳೂರು ದರ್ಶಿನಿಯಲ್ಲಿ ಸಂಚಾರ ನಡೆಸಲು ಸಾಧ್ಯವಿಲ್ಲ. ಬೆಂಗಳೂರು ದರ್ಶಿನಿ ಸೇವೆಯ ಬಸ್‌ಗಳಲ್ಲಿ ಜಿಎಸ್‌ಟಿ ಸೇರಿ 420 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಮಕ್ಕಳಿಗೆ 300 ರೂ.. ಬಸ್‌ನಲ್ಲಿರುವ ಗೈಡ್ ಪ್ರವಾಸಿ ತಾಣಗಳ ಬಗ್ಗೆ ಇಂಗ್ಲಿಶ್, ಹಿಂದಿ, ತಮಿಳು, ತೆಲಗು, ಕನ್ನಡದಲ್ಲಿ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಲಿದ್ದಾರೆ.

ಎಂಟು ಪ್ರವಾಣಿ ತಾಣಗಳ ಮಾಹಿತಿ

ಎಂಟು ಪ್ರವಾಣಿ ತಾಣಗಳ ಮಾಹಿತಿ

ಬೆಂಗಳೂರು ದರ್ಶಿನಿ ಪ್ಯಾಕೇಜ್‌ನಲ್ಲಿ ಜನರು ಕಾಡು ಮಲ್ಲೇಶ್ವರ ದೇವಾಲಯ, ಬೆಂಗಳೂರು ಅರಮನೆ, ಸೆಂಟ್ ಮೇರಿ ಬೆಸಿಲ್ಲಾ ಚರ್ಚ್, ಎಚ್‌ಎಎಲ್ ಮ್ಯುಸಿಯಂ, ಮುರುಗೇಶಪಾಳ್ಯದ ಶಿವ ದೇವಾಲಯ, ಲಾಲ್ ಬಾಗ್, ವಿಧಾನಸೌಧ/ಹೈಕೋರ್ಟ್, ಜವಹಾರಲಾಲ್ ನೆಹರೂ ತಾರಾಲಯವನ್ನು ವೀಕ್ಷಿಸಬಹುದಾಗಿದೆ.

English summary
Bangalore Metropolitan Transport Corporation (BMTC) added another bus for it's darshini fleet. People can travel around eight new locations by this service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X