ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC: ಒಂದೇ ತಿಂಗಳಲ್ಲಿ 3,785 ಕೇಸ್: ಪ್ರಯಾಣಿಕರಿಂದ 6.12 ಲಕ್ಷ ರೂ. ದಂಡ ವಸೂಲಿ

|
Google Oneindia Kannada News

ಬೆಂಗಳೂರು, ಏ. 14: ಹತ್ತು ರೂಪಾಯಿ ಉಳಿಸಲು ಹೋಗಿ ಬಿಎಂಟಿಸಿಯಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದರೆ ಹತ್ತು ಪಟ್ಟು ದಂಡ ಬೀಳುತ್ತೆ! ಹತ್ತು ರೂಪಾಯಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಬರೊಬ್ಬರಿ 100 ರೂ. ದಂಡ ಬೀಳುತ್ತೆ. ಜತೆಗೆ ಟಿಕೆಟ್ ನೀಡದ ನಿರ್ವಾಹಕ ಸಹ ದಂಡ ತೆರಬೇಕಾಗುತ್ತದೆ!

ರಾಜಧಾನಿ ಬೆಂಗಳೂರಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಬಿಎಂಟಿಸಿ ಅಧಿಕಾರಿಗಳು ವಿನೂತನ ಕಾರ್ಯಾಚರಣೆ ಶುರು ಮಾಡಿದ್ದಾರೆ. ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದವರ ಮೇಲೆ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 3,785 ಪ್ರಯಾಣಿಕರಿಂದ 6.12 ಲಕ್ಷ ರೂ. ದಂಡ ವಿಧಿಸಲಾಗಿದೆ.

BMTC collected 6 lakh as penalty from ticket less passengers in Bengaluru

ಇದರ ಜತೆಗೆ ಕರ್ತವ್ಯ ಲೋಪ ಎಸಗಿದ 1963 ನಿರ್ವಾಹಕರ ಮೇಲೆ ಸಹ ಕೇಸು ದಾಖಲಿಸಲಾಗಿದೆ. ಇದರಿಂದ ನಿರ್ವಾಹಕ ವೇತನ ಕಡಿತ ಜತೆಗೆ ಇಲಾಖೆ ವಿಚಾರಣೆ ಎದುರಿಸಬೇಕಾಗುತ್ತದೆ.

BMTC collected 6 lakh as penalty from ticket less passengers in Bengaluru

Recommended Video

ದಲಿತರನ್ನು ದೇವಸ್ಥಾನದಲ್ಲಿ ಈಗ್ಲೂ ಹೇಗೆ ನಡೆಸಿಕೊಳ್ತಾರೆ ಅನ್ನೋದನ್ನ ಹೇಳಿದ ಡಾ.ಜಿ ಪರಮೇಶ್ವರ್ | Oneindia Kannada

ಪ್ರಕರಣ ಇತ್ಯರ್ಥ ಆಗುವ ವರೆಗೂ ವೇತನ ಹೆಚ್ಚಳದ ಮೇಲೆ ಪ್ರಭಾವ ಬೀರಲಿದೆ. ಪ್ರಯಾಣಿಕರು ಮಾಡುವ ತಪ್ಪಿನಿಂದ ನಿರ್ವಾಹಕರು ಜೀವನ ಪರ್ಯಂತ ಪರದಾಡಬೇಕಾಗುತ್ತದೆ. ಮಹಿಳೆಯರ ಆಸನಗಳಲ್ಲಿ ಕೂತು ಪ್ರಯಾಣ ಮಾಡುವ ಪುರುಷರ ಮೇಲೂ ಕೇಸು ಜಡಿದು 23,600 ರೂ. ದಂಡ ವಸೂಲಿ ಮಾಡಲಾಗಿದೆ. ಅದರಲ್ಲಿ 236 ಮಂದಿಗೆ ಕೇಸು ಹಾಕಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

English summary
ticketless travel: BMTC Registered 3785 cases against ticket less passengers and collect 6 lakh as a fine Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X