ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಪೆಟ್ರೋಲ್ ಬಂಕ್‌ ಮುಂದೆ ಬಿಎಂಟಿಸಿ ಬಸ್‌ಗಳ ಸಾಲು!

|
Google Oneindia Kannada News

ಬೆಂಗಳೂರು ಜೂನ್ 28: ಪೆಟ್ರೋಲ್ ಬಂಕ್‌ಗಳಲ್ಲಿ ಇನ್ನು ಮುಂದೆ ಏನಾದರೂ ನೀವು ಬಿಎಂಟಿಸಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದರೆ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಇನ್ನುಮುಂದೆ ಬಿಎಂಟಿಸಿ ಬಸ್‌ಗಳು ನಗರದಾದ್ಯಂತ ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ತುಂಬಿಸುತ್ತವೆ.

ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ ಮತ್ತು ಬಿಎಂಟಿಸಿಯಂತಹ ರಾಜ್ಯ ಸಾರಿಗೆ ನಿಗಮಗಳು ಸೇರಿದಂತೆ ಬೃಹತ್ ಖರೀದಿದಾರರಿಗೆ ಸರ್ಕಾರವು ಸಬ್ಸಿಡಿಯನ್ನು ನೀಡದ ಕಾರಣ, ಚಿಲ್ಲರೆ ವ್ಯಾಪಾರಿಗಳಿಂದ ಇಂಧನವನ್ನು ಪಡೆಯಲು ನಿರ್ಧರಿಸಿದ್ದಾರೆ.

 ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ

"ನಮ್ಮ ಸ್ವಂತ ಡಿಪೋಗಳಲ್ಲಿ ಡೀಸೆಲ್ ಅನ್ನು ಪಡೆಯುವುದಕ್ಕಿಂತ ಖಾಸಗಿ ಬಂಕ್‌ನಲ್ಲಿ ಕಡಿಮೆ ಬೆಲೆಗೆ ಡೀಸೆಲ್ ತುಂಬಿಸಬಹುದು" ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದರು, ಡೀಸೆಲ್ ಬಿಕ್ಕಟ್ಟು ನಿಗಮವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ನಷ್ಟದಲ್ಲಿರುವ ಬಿಎಂಟಿಸಿಗೆ ಡೀಸೆಲ್ ದರ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಡೀಸೆಲ್ ದರಕ್ಕೆ ತಕ್ಕಂತೆ ಟಿಕೆಟ್ ಪ್ರಯಾಣದ ದರವನ್ನೂ ಹೆಚ್ಚಿಸುವುದು ಸುಲಭವಲ್ಲ, ಇಷ್ಟು ದಿನ ಖಾಸಗಿ ಬಂಕ್‌ ಮಾಲೀಕರು ಡಿಪೋಗಳಿಗೆ ಹೋಗಿ ಡೀಸೆಲ್ ತುಂಬಿಸುತ್ತಿದ್ದರು, ಆದರೆ ಇದೀಗ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ಚಿಲ್ಲರೆ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್‌ ಖರೀದಿ ಮಾಡುವವರಿಗೆ ಪೂರೈಕೆ ಮಾಡದಂತೆ ನಿರ್ಬಂಧ ವಿಧಿಸಿದೆ.

ಗುಜರಿ ಬಸ್‌ಗಳನ್ನು ಮಾರಲು ಮುಂದಾದ ಬಿಎಂಟಿಸಿ: 1 ಲಕ್ಷ ರುಪಾಯಿ ಬೆಲೆ ನಿಗದಿಗುಜರಿ ಬಸ್‌ಗಳನ್ನು ಮಾರಲು ಮುಂದಾದ ಬಿಎಂಟಿಸಿ: 1 ಲಕ್ಷ ರುಪಾಯಿ ಬೆಲೆ ನಿಗದಿ

ಹತ್ತಿರದ ಬಂಕ್‌ಗಳಲ್ಲಿ ಡೀಸೆಲ್ ತುಂಬಿಸುತ್ತೇವೆ

ಹತ್ತಿರದ ಬಂಕ್‌ಗಳಲ್ಲಿ ಡೀಸೆಲ್ ತುಂಬಿಸುತ್ತೇವೆ

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಮಾತನಾಡಿ, "ಪ್ರಸ್ತುತ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಬೃಹತ್ ಗ್ರಾಹಕರಿಗೆ ಸರಬರಾಜು ಮಾಡುವ ಡೀಸೆಲ್ ಮೇಲೆ ಲೀಟರ್‌ಗೆ 30 ರೂ.ಗಳ ವ್ಯತ್ಯಾಸವಿದೆ, ನಾವು ಈ ಸಮಸ್ಯೆಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಗಮನಕ್ಕೆ ತಂದಿದ್ದೇವೆ. ರಾಜ್ಯ ಸರ್ಕಾರ, ಈ ಮಧ್ಯೆ, ಯಾವುದೇ ಟ್ರಾಫಿಕ್ ಅಡಚಣೆಯಾಗದಂತೆ ಹತ್ತಿರದ ಲಭ್ಯವಿರುವ ಇಂಧನ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅನ್ನು ತುಂಬಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದಿದ್ದಾರೆ.

ಸಗಟು ದರಕ್ಕಿಂತ ಚಿಲ್ಲರೆ ದರ ಕಡಿಮೆ!

ಸಗಟು ದರಕ್ಕಿಂತ ಚಿಲ್ಲರೆ ದರ ಕಡಿಮೆ!

ಡೀಸೆಲ್ ಸಗಟು ದರ ಸೋಮವಾರ ಲೀಟರ್‌ಗೆ 120.26 ರು., ಆದರೆ ಚಿಲ್ಲರೆ ಬೆಲೆ ಲೀಟರ್‌ಗೆ 87.87 ರು. ಸಾರಿಗೆ ನಿಗಮವು ತನ್ನ ಬಸ್‌ಗಳಿಗೆ ತುಂಬಿಸುವ ಪ್ರತಿ ಲೀಟರ್ ಡೀಸೆಲ್‌ಗೆ 32.3 ರುಪಾಯಿ ಹೆಚ್ಚುವರಿಯಾಗಿ ಭರಿಸಬೇಕು. ಇದು ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಿದೆ.

ಸಾರಿಗೆ ಇಲಾಖೆ ಮೂಲಗಳ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಇಂಧನ ಬೆಲೆಯನ್ನು ಪರಿಷ್ಕರಿಸಿ ಮತ್ತು ಬೃಹತ್ ಬಳಕೆದಾರರಿಗೆ ಬೆಲೆಯನ್ನು ಹೆಚ್ಚಿಸಿವೆ. ಹಣದುಬ್ಬರ ದರದ ಮೇಲೆ ಪರಿಣಾಮ ಬೀರುವುದರಿಂದ ಚಿಲ್ಲರೆ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಲಾಗಿಲ್ಲ; ಇದು ದೊಡ್ಡ ಪ್ರಮಾಣದ ಡೀಸೆಲ್ ಖರೀದಿದಾರರು ಖಾಸಗಿ ಬಂಕ್‌ಗಳಲ್ಲಿ ಕಡಿಮೆ ಬೆಲೆಗೆ ಡೀಸೆಲ್ ಖರೀದಿಸುತ್ತಾರೆ.

ಪ್ರತಿ ದಿನ 2.4 ಲಕ್ಷ ಲೀಟರ್ ಡೀಸೆಲ್ ಖರೀದಿ

ಪ್ರತಿ ದಿನ 2.4 ಲಕ್ಷ ಲೀಟರ್ ಡೀಸೆಲ್ ಖರೀದಿ

ಬಿಎಂಟಿಸಿ 6,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿದೆ, ತನ್ನ ವಾಹನಗಳನ್ನು ಓಡಿಸಲು ದಿನಕ್ಕೆ 2.4 ಲಕ್ಷ ಲೀಟರ್ ಡೀಸೆಲ್ ಖರೀದಿಸುತ್ತದೆ. ವಾಸ್ತವವಾಗಿ, ಬಿಎಂಟಿಸಿ ಅಧಿಕಾರಿಗಳು ಇತ್ತೀಚಿನವರೆಗೂ, ನಿಗಮದ ಡಿಪೋಗಳಿಗೆ ಡೀಸೆಲ್ ಸರಬರಾಜು ಮಾಡುವ ಖಾಸಗಿ ಚಿಲ್ಲರೆ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವುದರಿಂದ ಈ ವ್ಯವಸ್ಥೆಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ ಎಂದು ಚಿಲ್ಲರೆ ನಿರ್ವಾಹಕರು ಡಿಪೋಗಳಿಗೆ ಡೀಸೆಲ್ ಪೂರೈಸಲು ಹಿಂಜರಿಯುತ್ತಿದ್ದಾರೆ. ಬಸ್ಸುಗಳು ಪೆಟ್ರೋಲ್ ಬಂಕ್‌ಗಳಿಗೆ ಬರುವಂತೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.

ನಾಲ್ಕು ದಿನಕ್ಕಾಗುವಷ್ಟು ಮಾತ್ರ ದಾಸ್ತಾನು

ನಾಲ್ಕು ದಿನಕ್ಕಾಗುವಷ್ಟು ಮಾತ್ರ ದಾಸ್ತಾನು

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಹೇಳಿದಂತೆ, ಕನಿಷ್ಠ ನಾಲ್ಕು ದಿನಗಳಿಗೆ ಆಗುವಷ್ಟು ಡಿಪೋ ಬಂಕ್‌ಗಳಲ್ಲಿ ದಾಸ್ತಾನು ಇದೆ. ಇಲ್ಲಿಯವರೆಗೆ ಸೇವೆಗಳಲ್ಲಿ ಯಾವುದೇ ಅಡ್ಡಿ ಉಂಟಾಗಿಲ್ಲ ಮತ್ತು ಮತ್ತಷ್ಟು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇಂಧನ ಕೇಂದ್ರಗಳಲ್ಲಿ ಬಸ್‌ಗಳು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂಬ ಆತಂಕಕ್ಕೆ ಸಂಬಂಧಿಸಿದಂತೆ, ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
No need to wonder if you see BMTC bus in private petrol bunk. In order to reduce the losses from skyrocketing fuel prices, BMTC buses are filling fuel up with private bunkers across the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X