ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೆಚ್ಚುತ್ತಿದೆ ಬಿಎಂಟಿಸಿ ಸಿಗ್ನಲ್ ಜಂಪಿಂಗ್ ಪ್ರಕರಣ

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಸಿಗ್ನಲ್ ಜಂಪಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸರ್ಕಾರವೇ ಮಾಡಿರುವ ಕಾನೂನನ್ನು ಸರ್ಕಾರಿ ಸಂಸ್ಥೆಗಳೇ ಗಾಳಿಗೆ ತೂರಿದೆ.

2017ರಲ್ಲಿ ನಿಗಮದ ಬಸ್ ಚಾಲಕರು 21,079 ಬಾರಿ ನಿಯಮ ಉಲ್ಲಂಘಿಸಿದ್ದಾರೆ. ನಗರದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ವಾಹನಗಳ ಸಂಖ್ಯೆಯೂ ಕೂಡ ಅಧಿಕವಾಗುತ್ತಿದೆ. ನಗರದಲ್ಲಿ 75 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಬೇಗ ತೆರಳಬೇಕು ಎನ್ನುವ ಆತುರದಲ್ಲಿ ಸಿಗ್ನಲ್ ಗಳನ್ನು ಜಂಪ್ ಮಾಡುತ್ತಿದ್ದಾರೆ.

ಬಿಎಂಟಿಸಿಗಿಂತ ಆ್ಯಪ್ ಸೇವೆ ನಿಧಾನಗತಿ: ಪ್ರಯಾಣಿಕರಿಗೆ ತೊಂದರೆ ಬಿಎಂಟಿಸಿಗಿಂತ ಆ್ಯಪ್ ಸೇವೆ ನಿಧಾನಗತಿ: ಪ್ರಯಾಣಿಕರಿಗೆ ತೊಂದರೆ

ಒಂದು ವರ್ಷದಲ್ಲಿ 4,055 ಸಿಗ್ನಲ್ ಜಂಪ್ ಪ್ರಕರಣ ದಾಖಲಾಗಿದೆ. 2016ಕ್ಕೆ ಹೋಲಿಸಿದರೆ 2017ರಲ್ಲಿ ಈ ಸಂಖ್ಯೆ ಇಳಿಕೆಯಾಗಿದೆ. 2016ರಲ್ಲಿ 10,338 ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ ಜನವರಿಯಿಂದ ಮಾರ್ಚ್ ವರೆಗೆ 520 ಸಿಗ್ನಲ್ ಜಂಪ್ ಪ್ರಕರಣ ದಾಖಲಾಗಿವೆ.

BMTC buses reach new high in traffic violation

ಬಸ್ ಚಾಲನೆ ವೃತ್ತಿಗೆ ಯುವಕರೇ ಹೆಚ್ಚು ಬರುತ್ತಿದ್ದು, ಅಜಾಗರೂಕತೆಯ ಚಾಲನೆಯೂ ಹೆಚ್ಚುತ್ತಿದೆ. 2017ರಲ್ಲಿ 443 ಇಂತಹ ಪ್ರಕರಣಗಳು ದಾಖಲಾಗಿತ್ತು.

2018ರಲ್ಲಿ ಸದ್ಯದವರೆಗೆ 128ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಚಾಲನೆ ವೇಳೆ ಮೊಬೈಲ್ ಬಳಸಬೇಡಿ ಎಂದು ಪದೇ ಪದೇ ಸಂಚಾರ ಪೊಲೀಸರು ಸೂಚನೆ ನೀಡುತ್ತಿದ್ದರೂ ಕೆಲ ಬಿಎಂಟಿಸಿ ಚಾಲಕರು ಇದನ್ನು ಗಣನೆಗೆ ತೆಗೆದುಕೊಂಡಿಲ್ಲ. 2016ರಲ್ಲಿ 1,351, 2017ರಲ್ಲಿ 1,065, ಮತ್ತು 2018ರಲ್ಲಿ 79 ಮೊಬೈಲ್ ಬಳಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
BMTC bus drivers have practice of jumping signal, negligence and many other violations since years. In 2017, more than 21,000 cases were booked against government sponsored transport corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X