ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC ನಲ್ಲಿ ಟಿಕೆಟ್ ವ್ಯವಸ್ಥೆ ರದ್ದು: ಬಸ್ ಹತ್ತುವ ಮುನ್ನ 'ಈ' ಅಂಶಗಳು ನಿಮಗೆ ತಿಳಿದಿರಲಿ

|
Google Oneindia Kannada News

ಬೆಂಗಳೂರು, ಮೇ 19: 'ಬೆಂಗಳೂರಿನ ಸಂಚಾರಿ ಜೀವನಾಡಿ' ಬಿ.ಎಂ.ಟಿ.ಸಿ ಸಂಚಾರ ಇಂದಿನಿಂದ ಆರಂಭಗೊಂಡಿದೆ. ಬಸ್ ಸಂಚಾರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇಂದು ಸಿಲಿಕಾನ್ ಸಿಟಿಯಲ್ಲಿ 2000 ಬಿ.ಎಂ.ಟಿ.ಸಿ ಬಸ್ ಗಳು ಓಡಾಡಲಿವೆ.

ಬೆಳಗ್ಗೆ 7 ಗಂಟೆಯಿಂದ ಬಿ.ಎಂ.ಟಿ.ಸಿ ಬಸ್ ಸಂಚಾರ ಪ್ರಾರಂಭಗೊಂಡಿದ್ದು, ಸಂಜೆ 7 ಗಂಟೆಯವರಿಗೆ ಮಾತ್ರ ಬಸ್ ಗಳು ಲಭ್ಯವಿರಲಿವೆ. ಎ.ಸಿ ವೋಲ್ವೋ ಬಸ್ ಓಡಾಟ ಇರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟುಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟು

ಕೋವಿಡ್-19 ನಿಂದಾಗಿ ಬಿ.ಎಂ.ಟಿ.ಸಿ ಯಲ್ಲಿ ಟಿಕೆಟ್ ವ್ಯವಸ್ಥೆ ರದ್ದು ಮಾಡಲಾಗಿದ್ದು, ಪ್ರಯಾಣಿಕರು ದಿನದ ಅಥವಾ ವಾರದ ಅಥವಾ ಮಾಸಿಕ ಪಾಸ್ ಪಡೆದು ಪ್ರಯಾಣಿಸಬೇಕಾಗಿದೆ.

 ಪ್ರಯಾಣಿಕರ ಗಮನಕ್ಕೆ

ಪ್ರಯಾಣಿಕರ ಗಮನಕ್ಕೆ

* ಟಿಕೆಟ್ ವ್ಯವಸ್ಥೆ ರದ್ದು ಮಾಡಲಾಗಿದೆ.
* ತಿಂಗಳ ಪಾಸ್ ಹಾಗೂ ದಿನ ಪಾಸ್ ಗೆ ಅವಕಾಶ ಕಲ್ಪಿಸಲಾಗಿದೆ.
* ಇಂದು ಬಿ.ಎಂ.ಟಿ.ಸಿ ಹತ್ತುವವರು ಕಡ್ಡಾಯವಾಗಿ ವಾರದ/ಮಾಸಿಕ/ದಿನದ ಪಾಸು ಪಡೆದುಕೊಳ್ಳಬೇಕು.
* ಬಿ.ಎಂ.ಟಿ.ಸಿ ಬಸ್ಸಿನಲ್ಲಿ ನಿಂತು ಪ್ರಯಾಣ ಮಾಡಲು ಅವಕಾಶವಿಲ್ಲ.
* ನಗರದ ಕಂಟೇನ್ಮೆಂಟ್ ಜೋನ್ ಗಳಲ್ಲಿ ಬಸ್ ಓಡಾಟ ನಡೆಸುವುದಿಲ್ಲ.
* 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು ಬಿ.ಎಂ.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುವಂತಿಲ್ಲ.
* ಪ್ರಯಾಣಿಕರು ಕಡ್ಡಾಯವಾಗಿ ತಮ್ಮ ಬಳಿ ಗುರುತಿನ ಚೀಟಿ ಇಟ್ಟುಕೊಂಡಿರಬೇಕು.
* ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಿರಬೇಕು.

ಹೊಸ ಪರಿಚಯ

ಹೊಸ ಪರಿಚಯ

ಕೋವಿಡ್-19 ಹಿನ್ನಲೆಯಲ್ಲಿ ಬಿ.ಎಂ.ಟಿ.ಸಿ ಹೊಸದಾಗಿ ವಾರದ ಪಾಸು ಪರಿಚಯಿಸಿದೆ. 300 ರೂಪಾಯಿ ಮುಖಬೆಲೆಯ ವಾರದ ಪಾಸಿನ ಮೂಲಕ 7 ದಿನ ಬೆಂಗಳೂರಿನ ಎಲ್ಲಾ ಭಾಗಕ್ಕೂ ಸಂಚರಿಸಬಹುದಾಗಿದೆ.

ಬಸ್ ಸಂಚಾರ: ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿಬಸ್ ಸಂಚಾರ: ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ

ಬಿ.ಎಂ.ಟಿ.ಸಿ ಸಿಬ್ಬಂದಿಗೆ ಮಾರ್ಗಸೂಚಿ

ಬಿ.ಎಂ.ಟಿ.ಸಿ ಸಿಬ್ಬಂದಿಗೆ ಮಾರ್ಗಸೂಚಿ

* ಪ್ರತಿಯೊಬ್ಬ ಸಿಬ್ಬಂದಿಯೂ ವೈಯುಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು.
* ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು.
* ಕರ್ತವ್ಯಕ್ಕೆ ಹಾಜರಾಗುವ ಪ್ರತಿ ಸಿಬ್ಬಂದಿಯನ್ನೂ ಪ್ರವೇಶ ದ್ವಾರದ ಬಳಿಯೇ ಥರ್ಮಲ್ ಟೆಸ್ಟಿಂಗ್ ಗೆ ಒಳಪಡಿಸಬೇಕು.
* ಸಾರಿಗೆ ನೌಕರನು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಕನಿಷ್ಠ ಆರು ಅಡಿ ಸಾಮಾಜಿಕ ಅಂತರವನ್ನು ಪಾಲಿಸಬೇಕು.
* ಎಲ್ಲಾ ಶಾಖೆಗಳಲ್ಲೂ ಸ್ಯಾನಿಟೈಸರ್ ಅಥವಾ ಸೋಪ್ ವ್ಯವಸ್ಥೆ ಕಲ್ಪಿಸಬೇಕು.

ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು

ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು

ಬಿ.ಎಂ.ಟಿ.ಸಿ ಸಿದ್ಧಪಡಿಸಿರುವ ವಿಶೇಷ ಮಾರ್ಗಸೂಚಿಯನ್ನು ಕಂಡಕ್ಟರ್, ಡ್ರೈವರ್, ತಾಂತ್ರಿಕ ಸಿಬ್ಬಂದಿ, ಡಿಪೋಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಇನ್ನೂ, ಪ್ರಯಾಣಿಕರು ಕೂಡ ಸಾಮಾಜಿಕ ಅಂತರ ಮತ್ತು ಶುಚಿತ್ವಕ್ಕೆ ಮಹತ್ವ ಕೊಡಬೇಕಿದೆ.

English summary
BMTC bus service started: No tickets instead passes will be given for travellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X