ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಯುವಕ ಸಾವು

By Mahesh
|
Google Oneindia Kannada News

ಬೆಂಗಳೂರು, ಮಾ.7: ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಆಕಸ್ಮಿಕವಾಗಿ ಓರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಕೆ.ಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೆ.ಆರ್ ಪುರಂ ಮೇಡಹಳ್ಳಿ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ‌ನಲ್ಲಿರುವ ರೇಡಿಯೇಟರ್ ‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರನ್ನು ಎಚ್ಚರಿಸಿ ಕೆಳಗಿಯುವಂತೆ ಸೂಚಿಸಬೇಕಾದ ಚಾಲಕ ಎಲ್ಲರಿಗಿಂತ ಮೊದಲು ತಾನು ಕೆಳಗೆ ಜಿಗಿದಿದ್ದಾನೆ. ಇದನ್ನು ಕಂಡು ಪ್ರಯಾಣಿಕರು ಬಸ್ ನಿಂದ ಧುಮುಕಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.

Bangalore BMTC Bus tragedy a youth jumps to death

ಬಿಹಾರ ಮೂಲದ ಸುಮಾರು 18 ರಿಂದ 20 ವರ್ಷದ ಯುವಕ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಇಂದು ಬೆಳಗ್ಗೆ ಅರಳೂರಿನಿಂದ ಕೆ.ಆರ್.ಮಾರುಕಟ್ಟೆಗೆ ಬರುತ್ತಿದ್ದ ಬಿಎಂಟಿಸಿ ಬಸ್ ಭಟ್ಟರಹಳ್ಳಿ ನಿಲ್ದಾಣಕ್ಕೆ ಬಂದಿದೆ. ಅಲ್ಲಿ ಬಸ್ ‌ನ ಎಂಜಿನ್ ‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ನಿರ್ವಾಹಕರಿಬ್ಬರೂ ಬಸ್ ‌ನಿಂದ ಹೊರಗೆ ಜಿಗಿದಿದ್ದಾರೆ. ಇದನ್ನು ಕಂಡ ಪ್ರಯಾಣಿಕರು ಗಾಬರಿಯಿಂದ ಕಿಟಕಿ ಗಾಜುಗಳನ್ನು ಒಡೆದು ಹೊರಕ್ಕೆ ಜಿಗಿದ್ದಾರೆ.

ಈ ವೇಳೆ ಬಿಹಾರ ಮೂಲದ ಯುವಕನೂ ಹೊರಗೆ ಜಿಗಿದಿದ್ದು, ಇಳಿಜಾರಿನಲ್ಲಿ ಬಸ್ ಹಿಂದಕ್ಕೆ ಚಲಿಸುತ್ತಿದ್ದ ಬಸ್ ‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಹಿಂದಕ್ಕೆ ಚಲಿಸಿದ ಬಸ್ ಮೋರಿಯೊಂದಕ್ಕೆ ಇಳಿದು ನಿಂತಿದೆ. ಸುದ್ದಿ ತಿಳಿದು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bangalore BMTC Bus tragedy : A youth native of Bihar jumps to death from BMTC bus today(Mar.7) morning after noticing the smoke from the Radiator of the bus. KR Puram Traffic Police rushed to the spot and are investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X