ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಹಠಾತ್ ಬೆಂಕಿ; 30 ಪ್ರಯಾಣಿಕರು ಪಾರು

|
Google Oneindia Kannada News

ಬೆಂಗಳೂರು, ಏಪ್ರಿಲ್ 9: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯಾಹ್ನ 12.40ರ ಸುಮಾರಿಗೆ ನಡೆದಿದೆ.

ಶೇಷಾದ್ರಿಪುರ ರಸ್ತೆಯ ಕೆ.ಆರ್. ಸರ್ಕಲ್‌ನಲ್ಲಿ ಸಂಚರಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಜಿಸ್ಟಿಕ್‌ನಿಂದ ಹೊಸಕೆರೆಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಕೆ.ಆರ್. ಸರ್ಕಲ್‌ ತಲುಪುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ, ಕೂಡಲೇ ಬಸ್ ನಿಲ್ಲಿಸಿದ್ದಾನೆ.

Bengaluru: BMTC Bus catches fire in KR Circle, 30 passengers safe

ಬಸ್ ಮೇನ್ ಡೋರ್ ಲಾಕ್ ಆಗಿದ್ದರಿಂದ ಬಸ್‌ನ ತುರ್ತು ನಿರ್ಗಮನ ಮೂಲಕ ಸುಮಾರು ಮೂವತ್ತು ಪ್ರಯಾಣಿಕರನ್ನು ಯಾವುದೇ ಅಪಾಯಗಳಿಲ್ಲದೆ ಹೊರಗೆ ಕರೆತರಲಾಗಿದೆ.

ಒಂದೂವರೆ ತಿಂಗಳಿನಲ್ಲಿ ಮೂರನೇ ಪ್ರಕರಣ
ಬೆಂಕಿಯಿಂದ ಬಸ್‌ನ ಎದುರಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬೆಂಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಬಸ್‌ಗೆ ಬೆಂಕಿ ಬಿದ್ದಿರುವುದು ಇದು ಮೂರನೇ ಪ್ರಕರಣವಾಗಿದೆ.

2014ರಲ್ಲಿ 186 ಅಶೋಕ್ ಲೇಲ್ಯಾಂಡ್ ಬಸ್​ಗಳನ್ನು ಖರೀದಿ ಮಾಡಲಾಗಿತ್ತು. ಇತ್ತೀಚಿಗೆ ಸೌತ್ ಎಂಡ್ ಸರ್ಕಲ್ ಮತ್ತು ಮಕ್ಕಳ ಕೂಟದ ಬಳಿ ಎರಡು ಮಿನಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬಿಎಂಟಿಸಿ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ದೂರು ನೀಡಿದ್ದರು.

ಇಂಜಿನಿಯರ್‌ಗಳು ಬಂದು ಎಲ್ಲ ಬಸ್‌ಗಳನ್ನು ತಪಾಸಣೆ ಮಾಡಿ ಸಮಸ್ಯೆ ಬಗಹರಿಸಿದ್ದರು. ಬಳಿಕವೇ ಬಸ್‌ಗಳನ್ನು ಮತ್ತೆ ರೋಡ್‌ಗೆ ಇಳಿಸಲಾಗಿತ್ತು. ಆದರೆ, ಇದೀಗ ಮತ್ತೊಂದು ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

Recommended Video

ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳೂ ಭಾರತವನ್ನು ಅಲುಗಾಡಿಸೋಕೆ ಆಗಲ್ಲ ಎಂದ ಪಾಕಿಸ್ತಾನ | Oneindia Kannada

English summary
Bengaluru: Around 30 passengers escaped unhurt after a moving BMTC bus caught fire in KR Circle. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X