ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಬಸ್, ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಜನವರಿ 03 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬಸ್ ಸೇವೆಯನ್ನು ಆರಂಭಿಸಿದೆ. ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ನೂರಾರು ಭಕ್ತರಿಗೆ ಇದರಿಂದಾಗಿ ಸಹಾಯಕವಾಗಲಿದೆ.

ಶುಕ್ರವಾರ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಯಲಹಂಕದ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಬಸ್ ಸೇವೆಗೆ ಚಾಲನೆ ನೀಡಿದರು. ಇಂದನಿಂದಲೇ ಬಸ್‌ಗಳ ಸಂಚಾರ ಆರಂಭವಾಗಿದೆ.

ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?

ಘಾಟಿ ಸುಬ್ರಮಣ್ಯ ದೇವಾಲಯದ ದಕ್ಷಿಣ ಭಾರತದಲ್ಲಿ ನಾಗಾರಾಧನೆ ಮಾಡುವ ಪ್ರಮುಖ ದೇವಾಲಯವಾಗಿದೆ. ಬೆಂಗಳೂರು ನಗರದಿಂದ ಸುಮಾರು 51 ಕಿ. ಮೀ. ದೂರದಲ್ಲಿ ಈ ಕ್ಷೇತ್ರವಿದ್ದು, ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ಮೈ ಬಿಎಂಟಿಸಿ ಆಪ್ ಬಳಸುವುದು ಹೇಗೆ? ಏನಿದರ ಉಪಯೋಗ?ಮೈ ಬಿಎಂಟಿಸಿ ಆಪ್ ಬಳಸುವುದು ಹೇಗೆ? ಏನಿದರ ಉಪಯೋಗ?

BMTC Begins Bus Service To Ghati Subramanyaa

ಭಕ್ತರ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಮಣ್ಯಕ್ಕೆ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಒಟ್ಟು ಎರಡು ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳು ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಸಂಚಾರವನ್ನು ನಡೆಸಲಿವೆ.

ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ

ವೇಳಾಪಟ್ಟಿ: ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಮಣ್ಯಕ್ಕೆ ಬೆಳಗ್ಗೆ 8.15, ಮಧ್ಯಾಹ್ನ 1.50 ಹಾಗೂ 3.40ಕ್ಕೆ ಬಸ್ ಹೊರಡಲಿದೆ. ದೇವಾಲಯದಿಂದ ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 9.35, ಮಧ್ಯಾಹ್ನ 2.45 ಮತ್ತು ಸಂಜೆ 5 ಗಂಟೆಗೆ ಬಸ್ ಸಂಚರಿಸಲಿದೆ.

English summary
Bangalore Metropolitan Transport Corporation (BMTC) introduced bus service to Ghati Subramanyaa. Ghati Subramanyaa famous for ancient hindu temple outskirts of Bengaluru near Doddaballapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X