ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತ್ಯೇಕ ಬಸ್‌ ಪಥದಲ್ಲಿ ಸಂಚಾರ ಆರಂಭಿಸಿದ ಬಿಎಂಟಿಸಿ ಬಸ್

|
Google Oneindia Kannada News

Recommended Video

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಹಾಡು ಕೇಳುವಂತಿಲ್ಲ | Oneindia Kannada

ಬೆಂಗಳೂರು, ಅಕ್ಟೋಬರ್ 21 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳ ಪ್ರಾಯೋಗಿಕ ಸಂಚಾರ ಪ್ರತ್ಯೇಕ ಬಸ್ ಪಥದಲ್ಲಿ ಆರಂಭವಾಗಿದೆ. ನಗರದ 12 ಪ್ರಮುಖ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗುತ್ತದೆ.

ಕೆ. ಆರ್. ಪುರದಿಂದ ಮಾರತ್ ಹಳ್ಳಿ ತನಕ ಪ್ರತ್ಯೇಕ ಬಸ್ ಪಥದಲ್ಲಿ ಬಿಎಂಟಿಸಿ ಬಸ್ ಸಂಚಾರ ಭಾನುವಾರದಿಂದ ಆರಂಭವಾಗಿದೆ. ಪ್ರಾಯೋಗಿಕವಾಗಿ ಈ ಸಂಚಾರ ಆರಂಭಿಸಲಾಗಿದ್ದು, ನವೆಂಬರ್‌ 1 ರಿಂದ ಸಂಚಾರ ಸಂಪೂರ್ಣವಾಗಿ ಆರಂಭವಾಗಲಿದೆ.

ಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆ ಬಿಎಂಟಿಸಿಗೆ ಪ್ರತ್ಯೇಕ ಬಸ್ ಲೇನ್?; ಹೇಗಿರಲಿದೆ ವ್ಯವಸ್ಥೆ

ರಸ್ತೆಯ ಎಡ ಭಾಗದಲ್ಲಿ 3.5 ಮೀಟರ್ ಪ್ರತ್ಯೇಕ ಬಸ್ ಪಥ ನಿರ್ಮಾಣವಾಗಿದೆ. ಬೊಲ್ಲಾರ್ಡ್‌ಗಳನ್ನು ಹಾಕಿ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದೆ. 10 ದಿನಗಳ ಕಾಲ ಬಸ್ ಸಂಚಾರದ ಸಾಧಕ-ಬಾಧಕಗಳ ಅಧ್ಯಯನ ನಡೆಯಲಿದೆ.

ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್ ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

BMTC Began Trial Run In Bus Priority Lane

ಪ್ರತ್ಯೇಕ ಬಸ್ ಪಥದಲ್ಲಿ ಖಾಸಗಿ ವಾಹನ ಬರದಂತೆ ತಡೆಯಲು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ವಾಹನ ಸವಾರರಿಗೆ ಅರಿವು ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಸಿಬ್ಬಂದಿ ಮಾಡುತ್ತಿದ್ದಾರೆ.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ 18.5 ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡಲಾಗಿದೆ. ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ರಾತ್ರಿ ವೇಳೆಯೂ ಕಾಮಗಾರಿ ನಡೆಸಲಾಗುತ್ತಿದೆ.

ಬಸ್ ಪಥದಲ್ಲಿ ಬೇರೆ ವಾಹನಗಳು ಬರುವುದನ್ನು ತಡೆಯಲು ಸಿಸಿಟಿವಿಯನ್ನು ಸಹ ಅಳವಡಿಕೆ ಮಾಡಲಾಗುತ್ತಿದೆ. 90 ಬಸ್‌ಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದ್ದು, ಬೇರೆ ವಾಹನಗಳು ಬಂದರೆ ದೃಶ್ಯವನ್ನು ಸೆರೆ ಹಿಡಿಯಲಿವೆ.

English summary
BMTC bus begin the trail operations in bus priority lane in Bengaluru city. Bus running between K.R.Puram to Marathahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X