ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗಿಳಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್; ವಿಶೇಷತೆಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ ಬಸ್. ನಗರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರವನ್ನು ಆರಂಭಿಸುವುದಾಗಿ ಬಿಎಂಟಿಸಿ ಹೇಳಿತ್ತು. ನವರಾತ್ರಿ ಸಂದರ್ಭದಲ್ಲಿ ಇದು ಜಾರಿಗೆ ಬಂದಿದೆ. ಎಲೆಕ್ಟ್ರಿಕ್ ಬಸ್ಸುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.

Recommended Video

Electric Bus ನ ವಿಶೇಷತೆ ಏನು ಅಂತೀರಾ?!! | Oneindia Kannada

ಗುರುವಾರ ಶಾಂತಿ ನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಧಾನಸೌಧ ತನಕ ಎಲೆಕ್ಟ್ರಿಕ್ ಬಸ್ಸುಗಳ ಪ್ರಾಯೋಗಿಕ ಸಂಚಾರಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಸರಾ ರಜೆ; NEKRTC ಯಿಂದ 220 ವಿಶೇಷ ಬಸ್ ದಸರಾ ರಜೆ; NEKRTC ಯಿಂದ 220 ವಿಶೇಷ ಬಸ್

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರ ನಡೆಸಿ ಕಾರ್ಯಕ್ಷಮತೆಯನ್ನು ಪರಿಶೀಲಿಲನೆ ಮಾಡಲಿದೆ. ಬಳಿಕ ಸಂಸ್ಥೆಗೆ ಬಸ್ ಖರೀದಿ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ. ಫೇಮ್ ಇಂಡಿಯಾ ಯೋಜನೆಯ ಅಡಿ ಕೇಂದ್ರ ಸರ್ಕಾರ ಬಸ್‌ಗಳ ಖರೀದಿಗೆ ಪ್ರೋತ್ಸಾಹ ನೀಡಲಿದೆ.

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ

ವಾಯು ಮಾಲಿನ್ಯ ಉಂಟಾಗದ ಕಾರಣದಿಂದಾಗಿ ಎಲೆಕ್ಟ್ರಿಕ್ ಬಸ್‌ಗಳು ಪರಿಣಾಮಕಾರಿಯಾಗಿವೆ. ಬೆಂಗಳೂರು ಸೇರಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಕೇಂದ್ರ ಸರ್ಕಾರ ಭವಿಷ್ಯದ ಸಾರಿಗೆ ಉದ್ಯಮವನ್ನು ಗಮನದಲ್ಲಿಟ್ಟುಕೊಂಟು ಈ ಬಸ್‌ಗಳ ಸಂಚಾರಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ.

ಪ್ರಶಾಂತ್ ಆಚಾರ್ ಬಳಿ 10 ಬಸ್‌ಗೆ ಬೇಡಿಕೆ ಇಟ್ಟ ಕೆಎಸ್ಆರ್‌ಟಿಸಿ! ಪ್ರಶಾಂತ್ ಆಚಾರ್ ಬಳಿ 10 ಬಸ್‌ಗೆ ಬೇಡಿಕೆ ಇಟ್ಟ ಕೆಎಸ್ಆರ್‌ಟಿಸಿ!

ರಾಜ್ಯ ಸರ್ಕಾರಗಳಿಗೆ ಆರ್ಥಿಕ ಪ್ರೋತ್ಸಾಹ

ರಾಜ್ಯ ಸರ್ಕಾರಗಳಿಗೆ ಆರ್ಥಿಕ ಪ್ರೋತ್ಸಾಹ

ಕೇಂದ್ರ ಸರ್ಕಾರದ ಭಾರೀ ಕೈಗಾರಿಕಾ ಇಲಾಖೆ ರಾಜ್ಯಗಳಿಗೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಆರ್ಥಿಕ ನೆರವನ್ನು ನೀಡಲಿದೆ. ಫೇಮ್ ಇಂಡಿಯಾ ಯೋಜನೆಯ -2ರ ಅಡಿ ಪ್ರತಿ ಬಸ್‌ಗೆ 55 ಲಕ್ಷ ಪ್ರೋತ್ಸಾಹ ಧನ ಸಿಗಲಿದೆ.

300 ಎಲೆಕ್ಟ್ರಿಕ್ ಬಸ್

300 ಎಲೆಕ್ಟ್ರಿಕ್ ಬಸ್

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ 2020-21ರ ಬಜೆಟ್‌ನಲ್ಲಿ ಬಸ್‌ಗಳನ್ನು ಜೆಸಿಸಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು 100 ಕೋಟಿ ಆರ್ಥಿಕ ಸಹಾಯ ಒದಗಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.

ಎಲೆಕ್ಟ್ರಿಕ್ ಬಸ್‌ ವಿಶೇಷತೆ

ಎಲೆಕ್ಟ್ರಿಕ್ ಬಸ್‌ ವಿಶೇಷತೆ

ಬೆಂಗಳೂರಿನಲ್ಲಿ ಸಂಚಾರ ನಡೆಸಲಿರುವ ಎಲೆಕ್ಟ್ರಿಕ್ ಬಸ್‌ 12 ಮೀಟರ್ ಉದ್ದವಿದೆ. ಸಂಪೂರ್ಣ ಹವಾನಿಯಂತ್ರಿತ ಬಸ್ ಇದಾಗಿದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 200 ರಿಂದ 300 ಕಿ. ಮೀ. ತನಕ ಸಂಚಾರ ನಡೆಸಲಿದೆ. ಬೇರೆ ನಗರಗಳಲ್ಲಿಯೂ ಸರ್ಕಾರ ಬಸ್ ಓಡಿಸಲಿದೆಯೇ? ಕಾದು ನೋಡಬೇಕು.

ಎಷ್ಟು ಜನರ ಪ್ರಯಾಣ?

ಎಷ್ಟು ಜನರ ಪ್ರಯಾಣ?

ಎಲೆಕ್ಟ್ರಿಕ್ ಬಸ್‌ಗಳು 34 +1 ಆಸನ ವ್ಯವಸ್ಥೆಯನ್ನು ಹೊಂದಿದೆ. ಬಸ್‌ಗಳು ಆಟೋಮ್ಯಾಟಿಕ್ ಗೇರ್ ವ್ಯವಸ್ಥೆಗಳನ್ನು ಹೊಂದಿವೆ. ಬೆಂಗಳೂರಿನಲ್ಲಿ ಆರಂಭವಾಗಿರುವ ಬಸ್‌ಗಳ ಸಂಚಾರದ ಕಾರ್ಯಕ್ಷಮತೆ ವರದಿಯ ಮೇಲೆ ಬಸ್‌ಗಳ ಖರೀದಿಯ ಬಗ್ಗೆ ತೀರ್ಮಾನವಾಗಲಿದೆ.

English summary
Bangalore Metropolitan Transport Corporation (BMTC) began the trail run of electric bus. Here are the features of bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X