ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನ ಐಪಿಎಲ್ ಪಂದ್ಯಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್

|
Google Oneindia Kannada News

ಬೆಂಗಳೂರು, ಏ. 13 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲದಲ್ಲಿ ಮೊದಲ ಪಂದ್ಯವನ್ನು ಆಡಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸಂಜೆ 5 ಗಂಟೆಯಿಂದ ನಗರದ ವಿವಿಧ ಪ್ರದೇಶಗಳಿಂದ ಮತ್ತು ಪಂದ್ಯ ಮುಗಿದ ಬಳಿಕ ಹಲವು ಪ್ರದೇಶಗಳಿಗೆ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. [ಆರ್ ಸಿಬಿ vs ಹೈದರಾಬಾದ್ ಕದನಕ್ಕೆ ಸೌರಶಕ್ತಿ]

BMTC

ಪ್ರೇಕ್ಷಕರಿಗೆ ವಿತರಣೆ ಮಾಡಲಾದ ಟಿಕೆಟ್‌ಗಳ ಸಂಖ್ಯೆ ಆಧರಿಸಿ ಈ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ನಗರದಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಇಂದು ಸಂಜೆಯೂ ಮಳೆಯಾದರೆ ಎಂಬ ಆತಂಕ ಅಭಿಯಾನಿಗಳಲ್ಲಿ ಉಂಟಾಗಿದೆ.

ಮಾರ್ಗದ ವಿವರ ಇಲ್ಲಿದೆ

ಎಸ್‌ಬಿಎಸ್ 1ಕೆ - ಮಾಣಿಕ್ ಷಾ ಗ್ರೌಂಡ್‌-ಕಾಡುಗೋಡಿ ಬಸ್ ನಿಲ್ದಾಣ
ಜಿ-2 ಮೆಯೋಹಾಲ್‌-ಸರ್ಜಾಪುರ
ಜಿ-3 ಬ್ರಿಗೇಡ್ ರಸ್ತೆ-ಎಲೆಕ್ಟ್ರಾನಿಕ್ ಸಿಟಿ
ಜಿ-4 ಬ್ರಿಗೇಡ್ ರಸ್ತೆ-ಬನ್ನೇರುಘಟ್ಟಪಾರ್ಕ್
ಜಿ-6 ಚಿನ್ನಸ್ವಾಮಿ ಸ್ಟೇಡಿಯಂ-ಕೆಂಗೇರಿ ಕೆಎಚ್‌ಬಿ ಕ್ವಾಟರ್ಸ್
ಜಿ-7 ಬಿಆರ್ ಪರೇಡ್ ಗ್ರೌಂಡ್‌-ಜನಪ್ರಿಯ ಟೌನ್‌ಶಿಪ್
ಜಿ-8 ಎಂಜಿ ರೋಡ್ ಮೆಟ್ರೋ ನಿಲ್ದಾಣ-ನೆಲಮಂಗಲ
ಜಿ-9 ಎಂಜಿ ರೋಡ್ ಮೆಟ್ರೋ ನಿಲ್ದಾಣ-ಯಲಹಂಕ 5ನೇ ಹಂತ
ಜಿ-10 ಬಿಆರ್ ಪರೇಡ್ ಗ್ರೌಂಡ್‌-ಆರ್‌.ಕೆ.ಹೆಗಡೆ ನಗರ
ಜಿ-11 ಎಂಜಿ ರೋಡ್ ಮೆಟ್ರೋ ನಿಲ್ದಾಣ-ಬಾಗಲೂರು
ಜಿ-12 ಮೇಯೋಹಾಲ್‌-ಹೊಸಕೋಟೆ

English summary
The Bangalore Metropolitan Transport Corporation (BMTC) will ply more buses to help cricket fans to reach the Chinnaswamy Stadium on April 13, Monday. Today Royal Challenger Bengaluru will be facing Sun Risers Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X