ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ

|
Google Oneindia Kannada News

ಬೆಂಗಳೂರು,ಜನವರಿ 18: ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ತಿಳಿಸಿದೆ. ಕೊರೊನಾ ಸೋಂಕಿನಿಂದಾಗಿ ಸುಮಾರು ಏಳೆಂಟು ತಿಂಗಳುಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಷ್ಟೇ ಅಲ್ಲದೆ ಪ್ರಯಾಣಿಕರು ಎಸಿ ಬಸ್‌ಗಳತ್ತ ಮುಖ ಮಾಡದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸಧ್ಯಕ್ಕೆ ಹೊಸ ಎಸಿ ಬಸ್‌ಗಳ ಖರೀದಿ ಇಲ್ಲ ಎಂದು ನಿಗಮಗಳು ತಿಳಿಸಿವೆ.

ಬಿಎಂಟಿಸಿಯು ಎಸಿ ಬಸ್ ಟಿಕೆಟ್ ದರವನ್ನು ಶೇ.28ರಷ್ಟು ಕಡಿಮೆ ಮಾಡಿದೆ.ದೈನಂದಿನ ಪಾಸ್‌ ದರವನ್ನು 147 ರೂ. ಗಳಿಂದ 120 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ

ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು 5 ರೂ. ನಿಂದ 20 ರೂ.ವರೆಗೆ ಇಳಿಕೆ ಮಾಡಲಾಗಿದೆ. ಸಾಮಾನ್ಯ ಸೇವೆಗಳ ಮಾಸಿಕ (1050 ರೂ.) ಮತ್ತು ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ (945 ರೂ.) ಪಾಸುದಾರರು ಚಾಲ್ತಿಯಲ್ಲಿರುವ ಪಾಸ್‌ ತೋರಿಸಿ ಭಾನುವಾರಗಳಂದು ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

BMTC And KSRTC Now Wont Induct AC Buses

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಟಿಕೆಟ್‌, ಪಾಸ್‌ ದರಗಳನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಇಳಿಕೆ ಮಾಡಿದ್ದು, ಮಾಸಿಕ ಪಾಸ್‌ 363 ರೂ. ಮತ್ತು ದೈನಂದಿನ ಪಾಸ್‌ ದರವನ್ನು 27 ರೂ.ನಷ್ಟು ಕಡಿಮೆ ಮಾಡಲಾಗಿದೆ.

ವೋಲ್ವೊ ಮಾಸಿಕ ಬಸ್‌ ಪಾಸ್‌ನ ಪ್ರಸ್ತುತ ದರವು ಜಿಎಸ್‌ಟಿ ಸೇರಿ 2363 ರೂ. ಇದೆ. ಆದರೆ ಇಂದಿನಿಂದ ಈ ದರವನ್ನು 2000 ರೂ.ಗಳಿಗೆ ಇಳಿಸಲಾಗಿದೆ. ಹೀಗಾಗಿ ಇರುವ ಎಸಿ ಬಸ್‌ಗಳಿಗೆ ಜನರು ಬರುತ್ತಿಲ್ಲ, ಇನ್ನು ಹೊಸ ಎಸಿ ಬಸ್‌ಗಳನ್ನು ಖರೀದಿಸದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಂದಾಜಿಸಿದೆ.

ವಾರಾಂತ್ಯದಲ್ಲಿ ಶೇ.10ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿಯು ಈಗ ನಿಲ್ಲಿಸಿದೆ.ಬಿಎಂಟಿಸಿಯು ಶೀಘ್ರ 643 ನಾನ್ ಎಸಿ ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಬಿಎಂಟಿಸಿಯು ಈಗ 6537 ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. 1700 ಬಸ್‌ಗಳು ಈಗ ಕಾರ್ಯಾಚರಿಸುತ್ತಿಲ್ಲ.

700 ಎಸಿ ಬಸ್ ಹಾಗೂ 1000 ಸಾವಿರ ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ. 860 ವೋಲ್ವೋ ಬಸ್‌ಗಳ ಪೈಕಿ ಕೇವಲ 150 ಬಸ್‌ಗಳು ಮಾತ್ರ ಓಡಾಡುತ್ತಿವೆ. ಇನ್ನು ಕೆಎಸ್‌ಆರ್‌ಟಿಸಿಯಲ್ಲಿ 545 ಎಸಿ ಬಸ್‌ಗಳ ಪೈಕಿ 160 ಬಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

English summary
Hit by a dip in passenger traffic, state run KSRTC and BMTC have decided to not to induct AC buses anytime soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X