ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2018ರ ಪಾಸ್‌ನಲ್ಲಿ ಸಂಚರಿಸಲು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಅನುಮತಿ

|
Google Oneindia Kannada News

ಬೆಂಗಳೂರು, ಜೂನ್ 02 : ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನಲೆಯಲ್ಲಿ 2018-19ನೇ ಸಾಲಿನ ಸ್ಮಾರ್ಟ್ ಕಾರ್ಡ್ ಮಾದರಿಯ ವಿದ್ಯಾರ್ಥಿ ಪಾಸ್‌ಗಳಲ್ಲಿ 20/6/2019ರ ತನಕ ವಿದ್ಯಾರ್ಥಿಗಳು ಪ್ರಯಾಣಿಸಲು ಬಿಎಂಟಿಸಿ ಅನುಮತಿ ನೀಡಿದೆ.

ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 2018-19ನೇ ಸಾಲಿನ ಪಾಸ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳು 20-06-2019ರ ವರೆಗೆ ತಮ್ಮ ಸ್ಮಾರ್ಟ್ ಕಾರ್ಡ್ ಮತ್ತು ಈ ವರ್ಷದ ಐ.ಡಿ ಕಾರ್ಡ್ ನೊಂದಿಗೆ ಸಂಚಾರ ನಡೆಸಬಹುದಾಗಿದೆ.

ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

BMTC allowed students to travel in 2018 bus pass

2019-20 ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸು ವಿತರಣೆಯ ಮಾಹಿತಿಯನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೇಳ್ಕೊಳ್ಳೋಕೆ ಬೆಂಗ್ಳೂರಲ್ಲಿ 80 ಲಕ್ಷ ವಾಹನ, ಬಿಎಂಟಿಸಿ ಮಾತ್ರ ಕೆಲವೇ ಸಾವಿರಹೇಳ್ಕೊಳ್ಳೋಕೆ ಬೆಂಗ್ಳೂರಲ್ಲಿ 80 ಲಕ್ಷ ವಾಹನ, ಬಿಎಂಟಿಸಿ ಮಾತ್ರ ಕೆಲವೇ ಸಾವಿರ

ಈಗಾಗಲೇ ಪಾಸು ನೀಡುವ ಪ್ರಕ್ರಿಯೆಯನ್ನು ಬಿಎಂಟಿಸಿ ಆರಂಭಿಸಿದೆ. 2019-20 ನೇ ಸಾಲಿನ ವಿದ್ಯಾರ್ಥಿ ಪಾಸುಗಳ ಹಂಚಿಕೆ ಪ್ರಕ್ರಿಯೆಯನ್ನು ಬಿಎಂಟಿಸಿ ಆರಂಭಿಸಿದೆ.

ಪಾಸು ವಿತರಣೆ ಸಂಬಂಧ ಶಿಕ್ಷಣ ಸಂಸ್ಥೆಯು ಓರ್ವ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಪಾಸ್‌ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದಾಗ ನೋಡೆಲ್ ಅಧಿಕಾರಿಯು ಅದನ್ನು ಪರಿಶೀಲಿಸಿ, ಅನುಮೋದಿಸಬೇಕು ಎಂದು ಬಿಎಂಟಿಸಿ ಸೂಚನೆ ನೀಡಿದೆ.

ಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರ

ಶಿಕ್ಷಣ ಸಂಸ್ಥೆಗಳು ಅನುಮೋದನೆ ಮಾಡಿದ ಅರ್ಜಿಗಳನ್ನು ಮಾತ್ರ ಪಾಸು ವಿತರಣೆ ಮಾಡಲು ಪರಿಗಣನೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

English summary
Bangalore Metropolitan Transport Corporation (BMTC) allowed the student to travel in BMTC buses till June 20-06-2019 those who are having last year 2018-19 smart card with current year id card. BMTC soon update the current academic year student pass issue date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X