ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 1ರಿಂದ ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಳಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಜನವರಿ 1 ರಿಂದ ಎಸಿ ಬಸ್‌ಗಳ ಟಿಕೆಟ್ ದರವನ್ನು ಕಡಿಮೆ ಮಾಡಲು ಬಿಎಂಟಿಸಿ ಮುಂದಾಗಿದೆ.

ಲಾಕ್‌ಡೌನ್‌ಗೂ ಮುನ್ನವೂ ಕೂಡ ಎಸಿ ಬಸ್‌ಗಳ ದರ ಹೆಚ್ಚಿರುವ ಕಾರಣ ಅನಿವಾರ್ಯತೆ ಇರುವವರು ಮಾತ್ರ ಎಸಿ ಬಸ್‌ಗಳಲ್ಲಿ ಚಲಿಸುತ್ತಿದ್ದರು. ಹೀಗಾಗಿ ಆದಾಯ ಕಡಿಮೆಯಾದ ಕಾರಣ ಕೆಲವು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಮುಷ್ಕರದಿಂದ 4 ದಿನದಲ್ಲಿ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು?ಮುಷ್ಕರದಿಂದ 4 ದಿನದಲ್ಲಿ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು?

ಇನ್ನು ಕೊರೊನಾ ಲಾಕ್‌ಡೌನ್ ಶುರುವಾದಾಗಿನಿಂದ ಸಾಮಾನ್ಯ ಬಸ್‌ಗಳು ಕೂಡ ಸ್ಥಗಿತಗೊಂಡಿದ್ದವು. ಎಸಿ ಬಸ್‌ಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಹಾಗೂ ಟಿಕೆಟ್ ದರ ಹೆಚ್ಚಿರುವುದರಿಂದ ಪ್ರಯಾಣಿಕರು ಎಸಿ ಬಸ್‌ಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದರು.

BMTC Air Conditioned Bus Ticket Price To Be Reduced From January 1st 2021

ಅದಕ್ಕೆ ಉಪಾಯ ಕಂಡುಕೊಂಡಿರುವ ಬಿಎಂಟಿಸಿ ಟಿಕೆಟ್ ದರವನ್ನು ಇಳಿಸಲು ಮುಂದಾಗಿದೆ. ಅದು ಈ ಜನವರಿ 1 ರಿಂದ ಜಾರಿಗೆ ಬರಲಿದೆ. ಶೇ.20ರಷ್ಟು ಟಿಕೆಟ್ ದರವನ್ನು ಇಳಿಸಲಾಗುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸಾಮಾನ್ಯ ಹಾಗೂ ವಜ್ರ ಬಸ್‌ಗಳ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

Recommended Video

ಹೊನ್ನಾವರದ Eco Beachಗೆ Blue Flagಗ್‌‌ ಮಾನ್ಯತೆ, ಸಂತಸ ವ್ಯಕ್ತಪಡಿಸಿಸಿದ ಡಿಸಿ ಹರೀಶ್ ಕುಮಾರ್ |Oneindia Kannada

ಜನವರಿ 1 ರಿಂದ ನಗರದಲ್ಲಿ 80 ಎಸಿ ಬಸ್‌ಗಳ ಸಂಚಾರ ಆರಂಭಿಸಲು ಬಿಎಂಟಿಸಿ ಆಲೋಚಿಸಿದೆ. ಎಸಿ ಬಸ್‌ಗಳ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವುದು ಬಿಎಂಟಿಸಿ ಆಲೋಚನೆಯಾಗಿದೆ.

English summary
To Woo Passengers back to AC buses, the Bangalore Metropolitan Transport Corporation(BMTC) has decided to reduce fares.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X