ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ವೊಲ್ವೋ ಪಾಸ್ ದರ ಹೆಚ್ಚಳ

By Madhusoodhan
|
Google Oneindia Kannada News

ಬೆ೦ಗಳೂರು, ಜೂನ್ , 24: ಕೇಂದ್ರ ಸರ್ಕಾರ ಜೂನ್ 1 ರಿಂದ ವಿವಿದ ಸೇವೆಗಳ ದರದಲ್ಲಿ ಬದಲಾವಣೆ ಮಾಡಿರುವುದು ಬಿಎಂಟಿಸಿ ಪ್ರಯಾಣಿಕರ ಮೇಲೂ ಪರಿಣಾಮ ಬೀರಿದೆ. ಮೇ 26ರಿ೦ದ ಜೂನ್ 1ರವರೆಗೆ ಹಳೆಯ ಮೊತ್ತಕ್ಕೆ ಬಿಎಂಟಿಸಿ ವೋಲ್ವೋ ಪಾಸ್ ಖರೀದಿಸಿದವರಿ೦ದ ಇದೀಗ ಶೇ. 6 ಹೆಚ್ಚುವರಿ ಮೊತ್ತ ವಸೂಲಿ ಮಾಡಲು ಬಿಎಂಟಿಸಿ ಮುಂದಾಗಿದೆ.

ಕೇ೦ದ್ರ ಸರ್ಕಾರ ಜೂ.1ರಿ೦ದ ಹವಾನಿಯ೦ತ್ರಿತ ಬಸ್ ಸೇವೆಗಳ ಪ್ರಯಾಣ ದರ ಹೆಚ್ಚಳ ಮಾಡಿದೆ. ಇದೇ ಕಾರಣ ಇಟ್ಟುಕೊಂಡು ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (ಬಿಎ೦ಟಿಸಿ) ಹೆಚ್ಚುವರಿ ಹಣ ವಸೂಲಿಗೆ ಮುಂದಾಗಿದೆ.[ಮೊದಲೇ ಹೆಚ್ಚಳದ ಮಾಹಿತಿ ನೀಡಿದ್ದ ಬಿಎಂಟಿಸಿ]

bmtc

ಹಣ ವಸೂಲಿ ಹೇಗೆ?
ವೋಲ್ವೋ ಬಸ್ನಲ್ಲಿ ಪ್ರಯಾಣಿಸುವ ಪಾಸುದಾರರು ಹೆಚ್ಚುವರಿ ಶೇ. 6 ಮೊತ್ತಕ್ಕೆ ನಿವಾ೯ಹಕರು ನೀಡುವ ಸ್ಟಿಕ್ಕರ್ ಖರೀದಿಸಬೇಕು. ಅಲ್ಲದೆ, ಹಾಗೆ ಪಡೆದ ಸ್ಟಿಕ್ಕರ್ ಅನ್ನು ಪಾಸ್ ಗೆ ಅ೦ಟಿಸಿಕೊ೦ಡು ಪ್ರಯಾಣಿಸಬೇಕಾಗುತ್ತದೆ.

ವೋಲ್ವೋ ಬಸ್ಸುಗಳ ದಿನದ ಪಾಸಿನ ದರ 140 ರೂ., ಮಾಸಿಕ ಪಾಸಿನ ದರ 2,300 ರೂ. ಹಾಗೂ ವಾಯುವಜ್ರ ಮಾಸಿಕ ಪಾಸ್ ದರ 3,350 ರೂ.ಗಳು ಇತ್ತು. ಹೊಸ ನಿಯಮದ ಅನ್ವಯ ಪ್ರಯಾಣಿಕರು ಹೆಚ್ಚುವರಿಯಾಗಿ ನೂರಿನ್ನೂರು ರು. ನೀಡಬೇಕಾಗುತ್ತದೆ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 700 ಹವಾ ನಿಯಂತ್ರಿತ ಬಸ್ಸುಗಳು ಸಂಚಾರ ನಡೆಸುತ್ತಿವೆ. ಅವುಗಳಲ್ಲಿ 15 ರೂ.ಗಳಿಂದ 65 ರೂ.ವರೆಗೆ ಟಿಕೆಟ್ ದರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸೇವೆ ನೀಡುವ ವಾಯುವಜ್ರ ಬಸ್ಸುಗಳ ಟಿಕೆಟ್ ದರ 170 ರೂ.ನಿಂದ 300 ರೂ. ಇದೆ.

English summary
Bangalore Metropolitan Transport Corporation (BMTC) send a notification towards hike of Volvo bus pass fare. Travelling in airconditioned buses is costlier with the Bangalore Metropolitan Transport Corporation (BMTC) increasing its fare by 6%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X