ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯ 32 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 02 : ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲುತ್ತಿದೆ. ಕಳೆದ ಒಂದು ವಾರದಲ್ಲಿ 20 ಸಿಬ್ಬಂದಿಗೆ ಸೋಂಕು ತಗುಲಿದೆ.

Recommended Video

Facebook brings a new Update to reduce sharing of Fake news | Oneindia Kannada

ಬಿಎಂಟಿಸಿಯ ಒಟ್ಟು 32 ಸಿಬ್ಭಂದಿಗಳಿಗೆ ಇದುವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ ಕೆಲವೇ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿದ್ದು, ರಾತ್ರಿ 8 ಗಂಟೆಗೆ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿದೆ.

ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

ಜೂನ್ 12ರಂದು ಬಿಎಂಟಿಸಿ ಸಿಬ್ಬಂದಿಗೆ ಸೋಂಕು ತಗುಲಿದ ಮೊದಲ ಪ್ರಕರಣ ದಾಖಲಾಗಿತ್ತು. ಎರಡು ವಾರಗಳಲ್ಲಿ ಅದು 16ಕ್ಕೆ ಏರಿಕೆಯಾಯಿತು. ಪ್ರಸ್ತುತ 32 ಸಿಬ್ಭಂದಿಗೆ ಸೋಂಕು ತಗುಲಿದ್ದು, 12 ಸಿಬ್ಬಂದಿ ಗುಣಮುಖರಾಗಿದ್ದಾರೆ.

ಮಾಸ್ಕ್ ಧರಿಸದಿದ್ದರೆ ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ 500 ರೂ. ದಂಡ ಮಾಸ್ಕ್ ಧರಿಸದಿದ್ದರೆ ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ 500 ರೂ. ದಂಡ

BMTC 32 Employees Tested Positive For Coronavirus

ಬಿಎಂಟಿಸಿ ಎಲ್ಲಾ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಲು ಮುಂದಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಸಿಬ್ಬಂದಿಗೆಗಳಿಗೆ ರಜೆ ನೀಡಲಾಗಿದೆ.

ಬಿಎಂಟಿಸಿ ನೌಕರರಿಗೆ ಪಿಪಿಇ ಕಿಟ್‌ಗಳನ್ನು ನೀಡಿ: ಎಎಪಿ ಆಗ್ರಹಬಿಎಂಟಿಸಿ ನೌಕರರಿಗೆ ಪಿಪಿಇ ಕಿಟ್‌ಗಳನ್ನು ನೀಡಿ: ಎಎಪಿ ಆಗ್ರಹ

ಬಸ್ ಸಂಚಾರವಿಲ್ಲ : ಬಿಎಂಟಿಸಿ ಬಸ್‌ಗಳು ರಾತ್ರಿ 8ರ ಬಳಿಕ ಸಂಚಾರ ನಡೆಸುವುದಿಲ್ಲ. ಎಲ್ಲಾ ಡಿಪೋಗಳಿಗೆ ರಾತ್ರಿ 8 ಗಂಟೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚು ಜನರು ಇದ್ದರೆ ಮಾತ್ರ ಮೆಜೆಸ್ಟಿಕ್, ಶಿವಾಜಿನಗರ, ಬನಶಂಕರಿ, ಕೆಂಗೇರಿ, ಯಶವಂತಪುರ ಮುಂತಾದ ನಿಲ್ದಾಣಗಳಿಂದ ರಾತ್ರಿ 9 ಗಂಟೆ ತನಕ ಬಸ್ ಓಡಿಸಬಹುದು.

ಕರ್ನಾಟಕ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ 5ರ ತನಕ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಇದನ್ನು ಪಾಲನೆ ಮಾಡಲು ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಅಂದು ಸಹ ಬಸ್ ಸಂಚಾರ ನಡೆಸುವುದಿಲ್ಲ.

English summary
In a press release Bangalore Metropolitan Transport Corporation (BMTC) said that so far 32 employees have tested positive for Covid-19. Employees aged above 50 and suffering from comorbidities have been sent on leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X