ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಮೆಟ್ರೋ ಮಾರ್ಗ: ಪ್ರತಿ ಎರಡು ನಿಮಿಷಕ್ಕೊಂದು ರೈಲು ಸಂಚಾರ

|
Google Oneindia Kannada News

ಬೆಂಗಳೂರು, ನವೆಂಬರ್ 21: ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡುವತ್ತ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ಈಗಾಗಲೇ ನಮ್ಮ ಮೆಟ್ರೋ ಮೊದಲ ಹಂತಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ದೊರೆತಿದೆ. ಈಗಾಗಲೇ ಕೈಗೊಂಡಿರುವ ಯೋಜನೆ ಪ್ರಕಾರ ನಾಲ್ಕು ವಿಸ್ತರಿಸಿದ ಮಾರ್ಗ ಹಾಗೂ ಎರಡು ಮಾರ್ಗಗಳು ಸೇರಿದಂತೆ ಎರಡನೇ ಹಂತದಲ್ಲಿ ಪ್ರತಿ ಮೂರು ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿತ್ತು.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಇದರ ಜೊತೆಗೆ ಹೊಸ ಮಾರ್ಗಗಳಲ್ಲಿ ಹೆಚ್ಚು ಕಡಿಮೆ ಇದೇ ಅಂತರದಲ್ಲಿ ಯೋಜನೆ ರೂಪಿಸಲಾಗಿದೆ. ಹೊಸ ಮೆಟ್ರೋ ನಿಲ್ದಾಣಗಳ ನಡುವೆ ಪ್ರತಿ ಎರಡು ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆಗೆ ಪೂರಕವಾದ ವಿನ್ಯಾಸ ರೂಪಿಸಲು ಚಿಂತನೆ ನಡೆದಿದೆ. ವಿಸ್ತರಿಸಿದ ಮಾರ್ಗಗಳಲ್ಲೂ ಇದು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಆಲೋಚನೆ ಮಾಡಲಾಗುತ್ತಿದೆ.

ಮೆಟ್ರೋ ನಡುವೆ ಎರಡು ನಿಮಿಷಗಳ ಅಂತರ

ಮೆಟ್ರೋ ನಡುವೆ ಎರಡು ನಿಮಿಷಗಳ ಅಂತರ

ಹೊಸ ಮಾರ್ಗಗಳಾದ ಸಿಲ್ಕ್ ಬೋರ್ಡ್-ಕೆಆರ್ ಪುರಂ(17 ಕಿ.ಮೀ) ಗೊಟ್ಟಿಗೆರೆ-ಐಐಎಂಬಿ-ನಾಗವಾರ(21.25 ಕಿ.ಮೀ), ಆರ್‌ ವಿ ರಸ್ತೆ-ಬೊಮ್ಮಸಂದ್ರ(18.82 ಕಿ.ಮೀ) ಹೆಬ್ಬಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಎರಡು ನಿಮಿಷಗಳ ಅಂತರದಲ್ಲಿ ಮೆಟ್ರೋ ಬರಲಿದೆ.

ಮೆಟ್ರೋ ನಡುವೆ ಈಗಿರುವ ಕನಿಷ್ಠ ಅಂತರ

ಮೆಟ್ರೋ ನಡುವೆ ಈಗಿರುವ ಕನಿಷ್ಠ ಅಂತರ

ನಮ್ಮ ಮೆಟ್ರೋ ಮೊದಲ ಹಂತದಲ್ಲಿ ರೈಲು ಸೇವೆಗಳ ಕನಿಷ್ಠ ಅಂತರ ಪ್ರತಿ 3 ನಿಮಿಷಗಳಿದ್ದು, ಪೀಕ್ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ದೆಹಲಿಯಲ್ಲಿ ಮೆಟ್ರೋ ಅವಧಿ ಅಂತರ

ದೆಹಲಿಯಲ್ಲಿ ಮೆಟ್ರೋ ಅವಧಿ ಅಂತರ

ದೆಹಲಿಯಲ್ಲಿ ಪ್ರಸ್ತುತ ಮೆಟ್ರೋ ಅವಧಿ ಅತ್ಯಂತ ಕಡಿಮೆ ಒಂದೂವರೆ ನಿಮಿಷ ಅಂತರದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಮೂರನೇ ಹಂತದಲ್ಲಿ ಮಾಡುತ್ತಿದೆ. ಉಳಿದ ಯಾವ ಮೆಟ್ರೋ ರೈಲುಗಳು ಇಷ್ಟ ಅಲ್ಪ ಅವಧಿಯಲ್ಲಿ ಸಂಚರಿಸುತ್ತಿಲ್ಲ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಎಲ್ಲೆಲ್ಲಿ ತಡವಾಗುತ್ತಿದೆ

ಎಲ್ಲೆಲ್ಲಿ ತಡವಾಗುತ್ತಿದೆ

ಮೊದಲ ಹಂತದಲ್ಲಿ ಮೂರು ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸಂಚರಿಸುವ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದೆ. ಆದರೆ ಇದಕ್ಕೆ ಟರ್ಮಿನಲ್ ಗಳಲ್ಲಿ ಹಿನ್ನೆಡೆ ಉಂಟಾಗುತ್ತಿದೆ. ಬೈಯಪಪ್ನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಲ್ಲಿ ಪ್ರಯಾಣಿಕರು ಇಳಿದ ಮೇಲೆ ದೂರು ಹೋಗಿ ತಿರುಗಿಸಿಕೊಂಡು ಪಕ್ಕದ ಲೈನಿನಲ್ಲಿ ಬರುತ್ತದೆ ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.

English summary
There is some good news in store for Namma metro, passengers travelling during non-peak hours. Now, get a Metro train every 2 mins in Namma metro phase 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X