ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಆಸನಗಳ ಪೂರ್ಣ ಪ್ರಮಾಣದ ಬಳಕೆಗೆ ಅನುಮತಿ ಕೋರಿ ಬಿಎಂಆರ್‌ಸಿಎಲ್ ಪತ್ರ

|
Google Oneindia Kannada News

ಬೆಂಗಳೂರು,ಜನವರಿ 29: ಕೊರೊನಾ ಲಾಕ್‌ಡೌನ್ ಮುಗಿದ ನಂತರ ಮೆಟ್ರೋ ಸಂವಾರವೇನೋ ಆರಂಭವಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಆಸನಗಳನ್ನು ಬಳಕೆ ಮಾಡಿಕೊಳ್ಳಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ.

ಮೆಟ್ರೋ ರೈಲುಗಳಲ್ಲಿನ ಆಸನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಮನವಿ ಮಾಡಿಕೊಂಡಿದೆ.

ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್

ಆಸನಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ನಿಂತುಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಜನರು ಮೆಟ್ರೋದಲ್ಲಿ ಸಂಚಾರ ಮಾಡಲು ಮನಸ್ಸು ಮಾಡುವಂತೆ ಮಾಡುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಪತ್ರ ಬರೆದಿದೆ. ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿದ ಬಳಿಕ ಸೆಪ್ಟೆಂಬರ್ 7,2020ರಂದು ಮೆಟ್ರೋ ರೈಲುಗಳ ಸಂಚಾರ ಪುನರಾರಂಭಿಸಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ಮೆಟ್ರೋ ರೈಲಿನಲ್ಲಿ ಎಷ್ಟು ಮಂದಿ ಪ್ರಯಾಣ

ಮೆಟ್ರೋ ರೈಲಿನಲ್ಲಿ ಎಷ್ಟು ಮಂದಿ ಪ್ರಯಾಣ

ಮೆಟ್ರೋದಲ್ಲಿ ನಿತ್ಯ ಸುಮಾರು 1.3 ಲಕ್ಷದಿಂದ 1.4 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ, ಭಾನುವಾರ ಈ ಸಂಖ್ಯೆ 75,000ಕ್ಕೆ ಇಳಿಕೆಯಾಗುತ್ತದೆ. ನಮ್ಮ ಮೆಟ್ರೋ ರೈಲಿನ ಒಟ್ಟಾರೆ ಸರಾಸರಿ ಪ್ರಯಾಣಿಕರ ಸಂಖ್ಯೆ 1.1 ಲಕ್ಷ ಇದೆ. ಜನವರಿ 27 ರಂದು 1.47 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಇಳಿಯುತ್ತಿರುವುದು, ನಿಯಮಗಳ ಸಡಿಲಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳು ತೆರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ರೈಲಿನಲ್ಲಿನ ಆಸನಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಜನದಟ್ಟಣೆ ಸಮಸ್ಯೆ ಬಗೆಹರಿಸಬಹುದಾಗಿದೆ.

300 ಆಸನಗಳ ಸಾಮರ್ಥ್ಯವುಳ್ಳ ಜಾಗದಲ್ಲಿ 150 ಮಂದಿ ಪ್ರಯಾಣಿಕರು

300 ಆಸನಗಳ ಸಾಮರ್ಥ್ಯವುಳ್ಳ ಜಾಗದಲ್ಲಿ 150 ಮಂದಿ ಪ್ರಯಾಣಿಕರು

300 ಆಸನಗಳ ಸಾಮರ್ಥ್ಯವುಳ್ಳ ಜಾಗದಲ್ಲಿ ಕೇವಲ 150 ಪ್ರಯಾಣಿಕರು ಮಾತ್ರ ಕುಳಿತುಕೊಳ್ಳಬೇಕು. ನಿಂತು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸೇರಿ ಒಂದು ಮೆಟ್ರೋ ರೈಲಿನಲ್ಲಿ 1,800 ಮಂದಿ ಪ್ರಯಾಣಿಸಬೇಕೆಂದು ತಿಳಿಸಿತ್ತು.

ಮಾರ್ಗಸೂಚಿ ಬದಲಾವಣೆಯ ಅಗತ್ಯವಿದೆ

ಮಾರ್ಗಸೂಚಿ ಬದಲಾವಣೆಯ ಅಗತ್ಯವಿದೆ

ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಬದಲಾವಣೆ ಮಾಡುವ ಆಗತ್ಯವಿದೆ. ಮೆಟ್ರೋ ರೈಲಿನಲ್ಲಿ ಎಲ್ಲಾ ಸೀಟುಗಳನ್ನು ಬಳಕೆ ಮಾಡಲು ಅನುಮತಿ ನೀಡುವಂತೆ ಕೋರಿ ಬಿಎಂಆರ್'ಸಿಎಲ್ ಕೇಂದ್ರಕ್ಕೆ ಪತ್ರ ಬರೆದಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

ಮೆಟ್ರೋ ರೈಲಿನಲ್ಲಿ ಆಸನಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದೇ ಆದಲ್ಲಿ, ಪ್ರಯಾಣಿಕರು ನಿಲ್ಲುವ ಸ್ಥಳದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.ಇದೀಗ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುತ್ತಿವೆ. ಎಸಿ ಬಸ್‌ಗಳ ಸಂಚಾರವೂ ಆರಂಭಗೊಂಡಿದೆ.

English summary
To facilitate revival of its ridership, the Bangalore Metro Rail Corporation has written to the Ministry of Urban Affairs seeking its consent to allow passengers to occupy all the seats on a Metro train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X