ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಮುಂದಾಗಿದೆ. ಆದ್ದರಿಂದ, ರೈಲು ನಿಲ್ದಾಣದ ಫ್ಲಾಟ್‌ ಫಾರಂಗಳಲ್ಲಿ ಹಳಿಯ ಸಮೀಪ ಗಾಜಿನ ಬಾಗಿಲುಗಳನ್ನು ಅಳವಡಿಸಲಿದೆ.

ಭಾನುವಾರ ಬೆಳಗ್ಗೆ 7 ರಿಂದ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಭಾನುವಾರ ಬೆಳಗ್ಗೆ 7 ರಿಂದ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ

ಈಗಾಗಲೇ ವಿದೇಶಗಳಲ್ಲಿ ರೈಲ್ವೇ ಟ್ರಾಕ್‌ ಸಮೀಪ ಗಾಜಿನ ಬಾಗಿಲು ಅವಳವಡಿಕೆ ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ. ಇದರಿಂದಾಗಿ ಆಕಸ್ಮಿಕವಾಗಿ ಪ್ರಯಾಣಿಕರು ಟ್ರಾಕ್‌ಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಡೆ ಬಿದ್ದಿದೆ.

ಪ್ರತಿಯೊಂದು ಮೆಟ್ರೋ ನಿಲ್ದಾಣದಲ್ಲೂ ಪಾರ್ಕಿಂಗ್ ಸೌಲಭ್ಯ ಬೇಕೇ ಬೇಕು ಪ್ರತಿಯೊಂದು ಮೆಟ್ರೋ ನಿಲ್ದಾಣದಲ್ಲೂ ಪಾರ್ಕಿಂಗ್ ಸೌಲಭ್ಯ ಬೇಕೇ ಬೇಕು

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ರೈಲು ಬರುವ ಮುಂಚೆ ಪ್ರಯಾಣಿಕರು ಹಳದಿ ಪಟ್ಟಿಯನ್ನು ದಾಟದಂತೆ ಅವರು ಎಚ್ಚರಿಕೆ ವಹಿಸುತ್ತಾರೆ. ಈಗ ಟ್ರಾಕ್‌ ಸಮೀಪ ಬಾಗಿಲುಗಳ್ನು ಅವಳಡಿಸಲು ಚಿಂತನೆ ನಡೆಸಲಾಗಿದೆ.

BMRCL to install sliding doors at edge of the platforms

ಗಾಜಿನ ಬಾಗಿಲುಗಳನ್ನು ಟ್ರಾಕ್‌ ಸಮೀಪ ಅಳವಡಿಕೆ ಮಾಡಲಾಗುತ್ತದೆ. ರೈಲು ಬಂದು ನಿಂತ ತಕ್ಷಣ ಬಾಗಿಲು ತೆರೆಯುತ್ತದೆ, ಬಳಿಕ ಮುಚ್ಚಿಕೊಳ್ಳುತ್ತದೆ. ಇದರಿಂದಾಗಿ ಪ್ರಯಾಣಿಕರು ಟ್ರಾಕ್‌ಗೆ ಬೀಳದಂತೆ ತಡೆಯಬಹುದಾಗಿದೆ.

ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿಲ್ಲ. ಕೆಲವು ವರ್ಷಗಳ ಹಿಂದೆ ಯುವಕನೊಬ್ಬರ ಆಯತಪ್ಪಿ ಟ್ರಾಕ್ ಸಮೀಪ ಬಿದ್ದಿದ್ದ. ಆದರೆ, ಮುಂಜಾಗ್ರತಾ ಕ್ರಮವಾಗಿ ಗಾಜಿನ ಬಾಗಿಲುಗಳನ್ನು ಅಳವಡಿಸಲಾಗುತ್ತದೆ.

ಕೆಂಪೇಗೌಡ ವಿಮಾನ ನಿಲ್ದಾಣ- ನಮ್ಮ ಮೆಟ್ರೋಗೆ ಕೆಆರ್ ಪುರಂ ಚೆಕ್ ಇನ್ ಸ್ಟಾಪ್ ಕೆಂಪೇಗೌಡ ವಿಮಾನ ನಿಲ್ದಾಣ- ನಮ್ಮ ಮೆಟ್ರೋಗೆ ಕೆಆರ್ ಪುರಂ ಚೆಕ್ ಇನ್ ಸ್ಟಾಪ್

'ವಿದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ನಮ್ಮ ಮೆಟ್ರೋ ಸುರಂಗ ಮಾರ್ಗದ ನಿಲ್ದಾಣದಲ್ಲಿ ಗಾಜಿನ ಬಾಗಿಲುಗಳನ್ನು ಮೊದಲು ಅಳವಡಿಕೆ ಮಾಡಲು ಚಿಂತಿಸಲಾಗಿದೆ' ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

English summary
Bangalore Metro Rail Corporation Ltd (BMRCL) is planning to install sliding doors at the edge of the platforms which helps prevent people from jumping off or slipping or pushing on the platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X