ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿ ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ದರ ಹೆಚ್ಚಳ?

|
Google Oneindia Kannada News

ಬೆಂಗಳೂರು, ಡಿ. 2 : ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರು ದರ ಏರಿಕೆ ಬಿಸಿ ಎದುರಿಸಲು ಸಿದ್ಧರಾಗಬೇಕಾಗಿದೆ. ಬಿಎಂಆರ್ ಸಿಎಲ್ ನಮ್ಮ ರಿಚ್ 3 ಮತ್ತು 3ಎ ಜೊತೆಗೆ ಎಂಜಿ ರಸ್ತೆ ಬೈಯಪ್ಪನಹಳ್ಳಿ ನಡುವಿನ ಮೆಟ್ರೋ ದರವನ್ನು ಏರಿಕೆ ಮಾಡಲು ಸಿದ್ಧತೆ ನಡೆಸಿದೆ.

ಸ್ವಸ್ತಿಕ್-ಯಶವಂತಪುರ-ಪೀಣ್ಯ ನಡುವಿನ ನಮ್ಮ ಮೆಟ್ರೋ ಸಂಚಾರ ಆರಂಭವಾದ ಬಳಿಕ ಅಲ್ಲಿ ದರ ಹೆಚ್ಚಳ ಮಾಡಲು ಈಗಾಗಲೇ ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಅದರಂತೆ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಮಾರ್ಗದ ದರ ಹೆಚ್ಚಳಕ್ಕೂ ಸಮೀಕ್ಷೆ ನಡೆಸಿದ್ದು, ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ ಮುಟ್ಟಿಸಲಿದೆ.

Metro

ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವಿನ ನಮ್ಮ ಮೆಟ್ರೋ ಸಂಚಾರ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಈ ಮಾರ್ಗದಲ್ಲಿ ಕನಿಷ್ಠ 10 ಮತ್ತು ಗರಿಷ್ಠ 15 ರೂ. ದರವಿತ್ತು. ಎರಡು ವರ್ಷಗಳಲ್ಲಿ ಈ ಮಾರ್ಗದಲ್ಲಿನ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಸದ್ಯ ರೀಚ್ 3 ಮತ್ತು 3ಎ ಜೊತೆಗೆ ಈ ಮಾರ್ಗದ ಪ್ರಯಾಣ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. (ನಮ್ಮ ಮೆಟ್ರೋಗೆ ಎರಡು ವರ್ಷದ ಸಂಭ್ರಮ)

ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಪ್ರಯಾಣ ದರ ಪರಿಷ್ಕರಣೆ ಮಾಡುವ ಬಗ್ಗೆ ಸಂಸ್ಥೆ ಸಮೀಕ್ಷೆ ಕೈಗೊಂಡಿದೆ ಎಂದು ಹೇಳಿದ್ದಾರೆ. ಪ್ರಯಾಣ ದರ ನಿಗದಿ ಪಡಿಸುವ ಸಮಿತಿ ಈ ಕುರಿತು ವರದಿ ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ. (ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ)

ಆದ್ದರಿಂದ ಸ್ವಸ್ತಿಕ್-ಯಶವಂತಪುರ-ಪೀಣ್ಯ ನಮ್ಮ ಮೆಟ್ರೋ ಪ್ರಯಾಣದರದ ಜೊತೆ ಎಂಜಿ ರಸ್ತೆ-ಬೈಯಪ್ಪನಹಳ್ಳಿ ಪ್ರಯಾಣ ದರವೂ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಹಿಂದೆ ವಿದ್ಯುತ್ ದರ ಏರಿಕೆಯಾದಾಗಲೂ ಈ ಮಾರ್ಗದಲ್ಲಿ ಪ್ರಯಾಣ ದರ ಪರಿಷ್ಕರಣೆ ಮಾಡುವ ಕುರಿತು ಚಿಂತನೆ ನಡೆದಿತ್ತು. ಸದ್ಯ ಅದನ್ನು ಜಾರಿಗೆ ತರಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. (ದುಬಾರಿಯಾಗಲಿದೆ ನಮ್ಮ ಮೆಟ್ರೋ ಪ್ರಯಾಣದರ)

English summary
Traveling on the Namma Metro between MG Road and Baiyapannahalli is set to become dearer with Bangalore Metro Rail Corporation Limited (BMRCL) working on hiking fares. The hike is imminent even as Reach 3 and 3A, between Swastik-Yeshwanthpur-Peenya, is yet to begin commercial operations. Incidentally, a study is underway on fare hike and its effects ahead of commissioning of the 9.9-km stretch on Reach 3 and 3 A which has 10 stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X