ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಗೋಡಿ ಮೆಟ್ರೋ ಡಿಪೊ ನಿರ್ಮಾಣಕ್ಕೆ ಶೀಘ್ರ ಟೆಂಡರ್

By Nayana
|
Google Oneindia Kannada News

ಬೆಂಗಳೂರು, ಮೇ 11: ಬಿಎಂಆರ್‌ಸಿಎಲ್‌ ಗೆ ಹೆಬ್ಬಗೋಡಿ ಡಿಪೋ ಜಾಗದ ತೊಂದರೆ ನಿವಾರಣೆಯಾಗಿದ್ದು ಶೀಘ್ರದಲ್ಲಿ ಟೆಂಡರ್ ಕರೆಯಲಿದೆ.

ನಮ್ಮ ಮೆಟ್ರೋ ಎರಡನೇ ಹಂತದ ಮೆಟ್ರೋ ಯೋಜನೆಯಲ್ಲಿ ಹೆಬ್ಬಗೋಡಿ ಡಿಪೊ ನಿರ್ಮಾಣಕ್ಕೆ ಜಾಗ ಪಡೆಯಲು ಅಡ್ಡಿಯಾಗಿದ್ದ ಹೈಕೋರ್ಟ್ ತಡೆಯಾಜ್ಞೆ ತೆರವಾಗಿರುವುದರಿಂದ ಟೆಂಡರ್ ಪ್ರಕ್ರಿಯೆಗೆ ಬಿಎಂಆರ್‌ಸಿಎಲ್ ಸಿದ್ಧತೆ ಆರಂಭಿಸಿದೆ.

ಚುನಾವಣೆ: ಮೆಟ್ರೋ ನಿಲ್ದಾಣಗಳ ಕೆಲ ದ್ವಾರಗಳು ಬಂದ್ ಚುನಾವಣೆ: ಮೆಟ್ರೋ ನಿಲ್ದಾಣಗಳ ಕೆಲ ದ್ವಾರಗಳು ಬಂದ್

ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ 5,744 ಕೋಟಿ ರೂ. ವೆಚ್ಚದಲ್ಲಿ 18.8 ಕಿ.ಮೀ ಉದ್ದದ ಮಾರ್ಗ ನಿರ್ಮಾಣವಾಗುತ್ತಿದೆ. ಅಸ್ತಿತ್ವದಲ್ಲಿರುವ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದ ನಡುವಿನ ಆರ್‌ವಿ ರಸ್ತೆ ನಿಲ್ದಾಣದ ಪಕ್ಕದಿಂ ಈ ಮಾರ್ಗ ಆರಂಭವಾಗಲಿದೆ.

BMRCL to call tender for Hebbagodi metro depot construction

ಹಸಿರು ಮಾರ್ಗದ ರೈಲುಗಳನ್ನು ಇರಿಸಲು ಹಾಗೂ ನಿರ್ವಹಣೆ ಮಾಡಲು ಪೀಣ್ಯದಲ್ಲಿ ಡಿಪೊ ಇದೆ. ಹೊಸ ಮಾರ್ಗದ ರೈಲುಗಳನ್ನು ನಿರ್ವಹಣೆ ಈ ಡಿಪೊದಲ್ಲಿ ಅಸಾಧ್ಯವಾಗಿರುವುದರಿಂದ ಹೆಬ್ಬಗೋಡಿಯಲ್ಲಿ ಡಿಪೊ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 30 ಎಕರೆ ನಿಗದಿಪಡಿಸಲಾಗಿದೆ. ಆದರೆ ಭೂಸ್ವಾಧೀನ ಮಾಡಿಕೊಳ್ಳುವಾಗ ಜಾಗವನ್ನು ಹೊಂದಿದ್ದ ಗೋಪಾಲನ್ ಫೌಂಡೇಷನ್ ಭೂಸ್ವಾಧೀನಕ್ಕೆ ಅಡ್ಡಿ ಮಾಡಿತ್ತು. ಭೂಸ್ವಾಧೀನ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದ ಫೌಂಡೇಷನ್ ತಡೆಯಾಜ್ಞೆ ತಂದಿತ್ತು.

ಇತ್ತೀಚೆಗೆ ತಡೆಯಾಜ್ಞೆ ತೆರವುಗೊಂಡು ಭೂಮಿ ಪಡೆಯಲು ಫೌಂಡೇಷನ್ ಜತೆ ಮಾತುಕತೆ ನಡೆದಿದೆ. ಇದರಿಂದಾಗಿ ಮಾರ್ಗದ ಜತೆಗೆ ಡಿಪೊ ನಿರ್ಮಾಣವೂ ಬೇಗನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

English summary
As high court vacated stay order on acquiring land for proposed Hebbagodi metro depot, BMRCL was ensuring tender process for second phase of metro project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X