ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ ಅಂತ್ಯಕ್ಕೆ 6 ಬೋಗಿಗಳ ಮೆಟ್ರೋ ಸಂಚಾರ?

By Nayana
|
Google Oneindia Kannada News

ಬೆಂಗಳೂರು, ಜೂನ್ 2: ಆರು ಬೋಗಿಯ ನಮ್ಮ ಮೆಟ್ರೋ ಅಧಿಕೃತ ಸಂಚಾರ ಅರಂಭಕ್ಕೆ ಗ್ರೀನ್ ಸಿಕ್ಕಿದೆ. ನಮ್ಮ ಮೆಟ್ರೋದ 6 ಬೋಗಿಗಳ ರೈಲಿನ ಪ್ರಯೋಗಾರ್ಥ ಪರೀಕ್ಷೆ ಮುಕ್ತಾಯವಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪರೀಕ್ಷೆಯ ವರದಿಯನ್ನು ನೀಡಿದೆ.

ಇದೀಗ ರೈಲ್ವೆ ಮಂಡಳಿ ಒಪ್ಪಿಗೆಗಾಗಿ ಕಾಯುತ್ತಿದ್ದು, ಮಾಸಾಂತ್ಯಕ್ಕೆ ಪ್ರಯಾಣಿಕರ ಸಂಚಾರಕ್ಕೆ 6 ಬೋಗಿಗಳು ರೈಲು ಮುಕ್ತವಾಗಲಿದೆ.

ಮೆಟ್ರೋ ಮುಷ್ಕರ: ನೌಕರರ ಮೇಲೆ ಎಸ್ಮಾ ಜಾರಿಗೆ ಕೇಂದ್ರ ಚಿಂತನೆಮೆಟ್ರೋ ಮುಷ್ಕರ: ನೌಕರರ ಮೇಲೆ ಎಸ್ಮಾ ಜಾರಿಗೆ ಕೇಂದ್ರ ಚಿಂತನೆ

ಫೆ.14ರಂದು ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಗೆ ಮೊದಲ ಹಂತದಲ್ಲಿ 3 ಹೊಸ ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ನೀಡಿತ್ತು. ಇದೀಗ ಕಾರ್ಯಾಚರಣೆಯಲ್ಲಿರುವ 3 ಬೋಗಿ ರೈಲಿಗೆ ಹೊಸ 3 ಬೋಗಿ ಜೋಡಿಸಿ 6 ಬೋಗಿಯ ರೈಲನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

BMRCL submits report on pilot service of six coaches

ಇದರ ಬೆನ್ನಲ್ಲೇ ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ರೈಲಿನ ಪರೀಕ್ಷಾರ್ಥ ಓಡಾಟಕ್ಕೆ ಏ.19ರಂದು ಚಾಲನೆ ನೀಡಲಾಗಿತ್ತು. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸಮ್ಮುಖದಲ್ಲಿ ದಕ್ಷಿಣ ವಲಯ ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ. ಮನೋಹರ್ ಪರೀಕ್ಷಾರ್ಥ ಸಂಚಾರ ವೀಕ್ಷಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಪರೀಕ್ಷೆಯ ಪೂರ್ಣ ವರದಿಯನ್ನು ಸಿಆರ್‌ಎಸ್‌ಗೆ ನಿಗಮ ಸಲ್ಲಿಸಿದೆ.

ಲೂಪ್ ರೈಲಾಗಿ ಬಳಕೆ: ಮೊದಲ 6 ಬೀಗಿಗಳ ರೈಲನ್ನು ಮೆಜೆಸ್ಟಿಕ್-ಬೈಯಪ್ಪನಹಳ್ಳಿ ನಡುವೆ ಮಾತ್ರ ಲೂಪ್ ರೈಲಾಗಿ ಬಳಸಲು ನಿಗಮ ಚಿಂತನೆ ನಡೆಸಿದೆ. ಈ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ರೈಲಿನೊಳಗೆ ಕಾಲಿಡಲಾಗದಷ್ಟು ದಟ್ಟಣೆ ಇದೆ.

ಹೀಗಾಗಿ 6 ಬೋಗಿಗಳ ರೈಲನ್ನು ಲೂಪ್ ರೈಲಾಗಿ ಬಳಸಿದರೆ, ಮೆಜೆಸ್ಟಿಕ್ ನಿಲ್ದಾಣದ ದಟ್ಟಣೆ ಪರಿಹರಿಸಲು ಸಾಧ್ಯವಾಗಲಿದೆ ಎನ್ನುವುದು ನಿಗಮದ ಅಭಿಪ್ರಾಯವಾಗಿದೆ.2019ರೊಳಗೆ ಎಲ್ಲಾ 150 ಬೋಗಿಗಳು ಹಸ್ತಾಂತರವಾಗಲಿದೆ.

English summary
BMRCL has submitted report to railway safety commissionaire on pilot run of six coaches of metro rail. The authorities expected to issue clearance by end of June and service may resume.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X