ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿರೋಧದ ಮಧ್ಯೆ ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ಸುರಂಗ ಮಾರ್ಗಕ್ಕೆ ನಿರ್ಧಾರ

|
Google Oneindia Kannada News

ಬೆಂಗಳೂರು, ಮೇ 10: ಯಾವುದೇ ಕಾರಣಕ್ಕೂ ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.

ಗೊಟ್ಟಿಗೆರೆ-ನಾಗವಾರ ಕೆಂಪು ಮಾರ್ಗದಲ್ಲಿ ಬರುವ ವೆಲ್ಲಾರ ಜಂಕ್ಷನ್‌ನಲ್ಲಿ ಸುರಂಗ ನಿಲ್ದಾಣವನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ನೀಡಲು ಆಲ್‌ ಸೇಂಟ್ಸ್ ಚರ್ಚ್ ನಿರಾಕರಿಸಿತ್ತು.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಇದೀಗ ಮೆಟ್ರೋ ನಿಗಮ ಈ ಕುರಿತು ಸ್ಪಷ್ಟನೆ ನೀಡಿದ್ದು, ವೆಲ್ಲಾರ ಜಂಕ್ಷನ್‌ನಲ್ಲಿ ಶಾಶ್ವತ ಸುರಂಗ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವುದು ಅತ್ಯವಶ್ಯಕ, ಈ ನಿಲ್ದಾಣವು ರಿಚ್‌ಮಂಡ್ ವೃತ್ತಕ್ಕೆ ಸಂಪರ್ಕ ಕಲ್ಪಿಸುತ್ತದೆ. ಲಾಂಗ್‌ಫೋರ್ಡ್‌ ನಿಲ್ದಾಣದಿಂದ ವೆಲ್ಲಾರ ಜಂಕ್ಷನ್ ಮಧ್ಯೆ 877 ಮೀಟರ್ ಅಂತರವಿದೆ.

ವೆಲ್ಲಾರ ಜಂಕ್ಷನ್‌ನಿಂದ ಎಂಜಿ ರಸ್ತೆ 1,266 ಮೀಟರ್ ಅಂತರದಲ್ಲಿದೆ. ಒಂದೊಮ್ಮೆ ವೆಲ್ಲಾರ ಜಂಕ್ಷನ್ ಕೈಬಿಟ್ಟರೆ ಲಾಂಗ್‌ಫರ್ಡ್ ಟೌನ್‌ನಿಂದ ಎಂಜಿ ರಸ್ತೆಗೆ 2144 ಮೀಟರ್ ಅಂತರವಾಗುತ್ತದೆ. ಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿ ಕಷ್ಟವಾಗುತ್ತದೆ. ಹಾಗಾಗಿ ವೆಲ್ಲಾರ ಜಂಕ್ಷನ್‌ನಲ್ಲಿಯೇ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. ನಿರ್ಧಾರದಲ್ಲಿ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ.

ಈ ಪ್ರಯಾಣಿಕರಿಗೆ ತೊಂದರೆ

ಈ ಪ್ರಯಾಣಿಕರಿಗೆ ತೊಂದರೆ

ಒಂದೊಮ್ಮೆ ಆ ನಿಲ್ದಾಣವನ್ನು ಕೈಬಿಟ್ಟರೆ ವೆಲ್ಲಾರ ಜಂಕ್ಷನ್, ಬೆಂಗಳೂರು ಫೂಟ್‌ಬಾಲ್ ಸ್ಟೇಡಿಯಂ, ಗರುಡಾ ಮಾಲ್, ಕ್ಯಾಥೆಡ್ರಲ್ ಹೈಸ್ಕೂಲ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಫಿಲೋಮಿನಾ ಆಸ್ಪತ್ರೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂದೂ ಹೇಳಿದ್ದಾರೆ.

100 ವರ್ಷ ಮೀರಿದ 80ಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ

100 ವರ್ಷ ಮೀರಿದ 80ಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ

ಆಲ್‌ಸೇಂಟ್ ಚರ್ಚ್ ಅವರು ಹೇಳುವ ಪ್ರಕಾರ 100 ವರ್ಷ ಮೀರಿದ 80ಕ್ಕೂ ಹೆಚ್ಚು ಮರಗಳಿಗೆ ಅಪಾಯವಾಗುತ್ತದೆ. ಆದರೆ ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ 50ಕ್ಕೂ ಕಡಿಮೆ ಮರಗಳಿಗೆ ಅಪಾಯವಾಗಲಿದೆ. ಉಳಿದ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದಿದ್ದಾರೆ.

ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ ಒಂದೊಮ್ಮೆ ಮೆಟ್ರೋ ಸ್ಮಾರ್ಟ್‌ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ

21 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗ

21 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗ

ಒಟ್ಟು 21 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 13 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಇದರಲ್ಲಿ 2.7 ಕಿ.ಮೀ ಉದ್ದದ ವೆಲ್ಲಾರ ಜಂಕ್ಷನ್-ಶಿವಾಜಿನಗರ ಹಾಗೂ 2.8 ಕಿ.ಮೀ ಉದ್ದದ ಶಿವಾಜಿನಗರ-ಪಾಟರಿ ಟೌನ್ ಪ್ಯಾಕೇಜ್‌ನ ಕಾಮಗಾರಿ ಆರಂಭವಾಗಿದೆ. ಚರ್ಚ್ ನ ಜಾಗವನ್ನು ಐದು ವರ್ಷಕ್ಕೆ ಬಾಡಿಗೆ ಪಡೆಯಲಾಗಿದೆ.

ಚರ್ಚ್‌ನ 150ನೇ ವಾರ್ಷಿಕೋತ್ಸವ ಸಿದ್ಧತೆ

ಚರ್ಚ್‌ನ 150ನೇ ವಾರ್ಷಿಕೋತ್ಸವ ಸಿದ್ಧತೆ

ಅರ್ಧ ಎಕರೆಯನ್ನು ಈಗಾಗಲೇ ಕಳೆದುಕೊಂಡಿದ್ದು ಇನ್ನು ಅರ್ಧ ಎಕರೆಯನ್ನು ಬಿಟ್ಟುಬಿಡಬೇಕು ಎಂದು ಚರ್ಚ್ ಮನವಿ ಮಾಡಿಕೊಂಡಿದೆ. ಆದರೆ ಇದಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಚರ್ಚ್ 150ನೇ ವಾರ್ಷಿಕೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಮೆಟ್ರೋ ಕಾಮಗಾರಿಯಿಂದ ಇನ್ನು ಐದು ವರ್ಷಗಳ ಕಾಲ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ ಎನ್ನುವುದು ಚರ್ಚ್‌ನ ವಾದವಾಗಿದೆ.

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

English summary
The Bangalore Metro Rail Corporation Ltd (BMRCL) on Thursday clarified that the proposed Vellara Junction station along the Red Line (Gottigere-Nagawara) won’t be dropped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X