ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಹತ್ವದ ಬದಲಾವಣೆ

|
Google Oneindia Kannada News

ಬೆಂಗಳೂರು, ಜನವರಿ 24: ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಆರ್‌ಸಿಎಲ್ ದೆಹಲಿ ಮೆಟ್ರೋ ಮಾದರಿಯಲ್ಲಿ ಬದಲಾವಣೆ ಮಾಡಲಿದೆ. ಚೆನ್ನೈ ಮೆಟ್ರೋ ನಿಲ್ದಾಣಗಳಲ್ಲಿ ಈ ಮಾದರಿ ವ್ಯವಸ್ಥೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ Platform Screen Doors (PSDs) ಅಳವಡಿಕೆ ಮಾಡಲಾಗುತ್ತದೆ. ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿಲ್ದಾಣದಲ್ಲಿ ಈ ಮಾದರಿಯನ್ನು ಜಾರಿಗೆ ತರಲಾಗುತ್ತದೆ.

ಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದಿದ್ದ ಮಗು ಸಾವುಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಬಿದ್ದಿದ್ದ ಮಗು ಸಾವು

ದೆಹಲಿ ಮತ್ತು ಚೆನ್ನೈ ಮೆಟ್ರೋ ನಿಲ್ದಾಣದಲ್ಲಿ Platform Screen Doors ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ಜನರು ಫ್ಲಾಟ್ ಫಾರ್ಮ್‌ನಿಂದ ಹಳಿಯ ಸಮೀಪಕ್ಕೆ ಹೋಗುವುದನ್ನು ತಡೆಯಬಹುದಾಗಿದೆ. ರೈಲು ಬಂದಾಗ ಮಾತ್ರ ಈ ಬಾಗಿಲುಗಳು ತೆರದುಕೊಳ್ಳುತ್ತವೆ.

ಭಾರಿ ನಷ್ಟ ಅನುಭವಿಸಿದ ಕೊಚ್ಚಿ ಮೆಟ್ರೋ ಟ್ರೈನ್ ಸೇವೆ ಭಾರಿ ನಷ್ಟ ಅನುಭವಿಸಿದ ಕೊಚ್ಚಿ ಮೆಟ್ರೋ ಟ್ರೈನ್ ಸೇವೆ

BMRCL Plan To install Platform Screen Doors

ನಮ್ಮ ಮೆಟ್ರೋದ ಸುರಂಗ ಮಾರ್ಗದ ನಿಲ್ದಾಣದಲ್ಲಿ ಮಾತ್ರ ಇಂತಹ ಬಾಗಿಲುಗಳನ್ನು ಅಳವಡಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಬಾಗಿಲು ಅವಳಡಿಕೆ ಮಾಡಿದರೆ ಪ್ರಯಾಣಿಕರು ಬಾಗಿಲ ಬಳಿ ಮಾತ್ರ ನಿಲ್ಲಬೇಕು. ಇದರಿಂದಾಗಿ ರೈಲು ಹತ್ತುವ ಧಾವಂತ ತಪ್ಪಿಸಲು ಸಹಾಯಕವಾಗಲಿದೆ.

ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಏಕಾಏಕಿ ತಪಾಸಣೆಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಏಕಾಏಕಿ ತಪಾಸಣೆ

ಈಗಾಗಲೇ ನಮ್ಮ ಮೆಟ್ರೋ ಪ್ರಯಾಣಿಕರು ಗುರುತಿಸಿದ ಜಾಗದಲ್ಲಿ ಸರಿಯಾಗಿ ರೈಲು ನಿಲ್ಲುವುದಿಲ್ಲ ಎಂದು ದೂರುಗಳನ್ನು ನೀಡುತ್ತಿದ್ದಾರೆ. ಬಾಗಿಲುಗಳನ್ನು ಅಳವಡಿಕೆ ಮಾಡಿದರೆ ಬಾಗಿಲು ಇರುವಲ್ಲಿ ಮಾತ್ರ ರೈಲು ನಿಲ್ಲಲಿದೆ.

ನಮ್ಮ ಮೆಟ್ರೋ ನಿಲ್ದಾಣದ ಫ್ಲಾಟ್ ಫಾರ್ಮ್‌ನಲ್ಲಿ ಈಗ ಹಳದಿ ಬಣ್ಣದ ಗೆರೆ ಹಾಕಲಾಗಿದೆ. ಗೆರೆಯನ್ನು ದಾಟಿ ಹಳಿಯ ಸಮೀಪ ಪ್ರಯಾಣಿಕರು ಹೋಗದಂತೆ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

English summary
BMRCL plan to install Platform Screen Doors (PSDs) in Namma metro stations. Delhi and Chennai metro already installed PSDs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X