ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ : ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ಪ್ರಾಯೋಗಿಕ ಸಂಚಾರ

ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ ಮೆಟ್ರೋ ರೈಲು ಮಾರ್ಗದ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ಅವರು ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 20: ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ ಮೆಟ್ರೋ ರೈಲು ಮಾರ್ಗದ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ಅವರು ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.

ಸದ್ಯಕ್ಕೆ ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವೆ ಮಾತ್ರ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. [ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಶೀಘ್ರ ಮೆಟ್ರೋ ರೈಲು]

BMRCL Metro trial run National CollegeGreen Line

ಎರಡು ತಿಂಗಳ ನಂತರ ಯಲಚೇನಹಳ್ಳಿಯಿಂದ ಸಂಪಿಗೆ ರಸ್ತೆಯವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ನಿಗಮ(ಬಿಎಂಆರ್ ಸಿಎಲ್) ನಿರ್ಧರಿಸಿದೆ.[17 ಮೆಟ್ರೋ ಸ್ಟೇಷನ್ ಗಳಲ್ಲಿ ಎಟಿಎಂ ಸೇವೆ]

ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ 8 ಕಿಲೋಮೀಟರ್ ಪ್ರಾಯೋಗಿಕ ಸಂಚಾರಕ್ಕಾಗಿ ಪೀಣ್ಯ ಡಿಪೋದಿಂದ ಹಸಿರು ಮೆಟ್ರೋ ರೈಲನ್ನು ಶನಿವಾರ ರಾತ್ರಿ ಓಡಿಸಲಾಯಿತು. ಮೆಜೆಸ್ಟಿಕ್, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ಸುರಂಗ ಮಾರ್ಗದಲ್ಲಿ ಹಾದು ನ್ಯಾಷನಲ್ ಕಾಲೇಜಿನ ನಿಲ್ದಾಣಕ್ಕೆ ತರಲಾಗಿತ್ತು.

ಈ ಪ್ರಾಯೋಗಿಕ ಸಂಚಾರ ನಾಲ್ಕು ತಿಂಗಳುಗಳ ಕಾಲ ನಡೆಯುವ ಸಾಧ್ಯತೆಯಿದೆ. ಕೇಂದ್ರ ರೈಲ್ವೆ ಸುರಕ್ಷತೆ ಆಯುಕ್ತರ ಬಳಿಯಿಂದ ಅನುಮತಿ ಪಡೆದ ನಂತರ ಬಿಎಂಆರ್‌ ಸಿಎಲ್ ಉದ್ದೇಶಿತ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ 24 ಕಿಲೋಮೀಟರ್ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. [ಮೆಟ್ರೋದಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ!]

ಕಳೆದ ಎರಡು ವರ್ಷಗಳ ಕಾಯುವಿಕೆ ನಂತರ ದಕ್ಷಿಣ ಬೆಂಗಳೂರು ಭಾಗದಲ್ಲಿ ಮೆಟ್ರೋ ಸಂಚಾರ ಪ್ರಾಯೋಗಿಕ ಪರೀಕ್ಷೆ ಕೊನೆಗೂ ಆರಂಭಗೊಂಡಿದೆ. ಏಪ್ರಿಲ್ 2017ರ ನಂತರ ಈ ಮಾರ್ಗದಲ್ಲಿ ಮೆಟ್ರೋ ಈ ಭಾಗದ ಜನರ ದೈನಂದಿನ ಸಾರಿಗೆ ಸಂಪರ್ಕವಾಗಿ ಬೆರೆಯಲಿದೆ.

English summary
Bengaluru City Development Minister K.J. George on Sunday(November 20) inspected and launched trails on over the elevated stretch of the line between National College and Yelachenahalli. This section of the Metro was completed nearly two years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X