ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಮೊದಲ ಹೆಜ್ಜೆ ಇಟ್ಟ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಫೆಬ್ರವರಿ 04 : ಬಿಎಂಆರ್‌ಸಿಎಲ್ ಮೈಸೂರು ರಸ್ತೆ, ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಎಎಫ್‌ಸಿ ಯಂತ್ರವನ್ನು ಅಳವಡಿಕೆ ಮಾಡಿದೆ. ಈ ಮೂಲಕ ಎನ್‌ಸಿಎಂಸಿ ಕಾರ್ಡ್ ಬಳಕೆ ಮಾಡಲು ನಮ್ಮ ಮೆಟ್ರೋ ಮೊದಲ ಹೆಜ್ಜೆ ಇಟ್ಟಿದೆ.

ಏಪ್ರಿಲ್‌ನಲ್ಲಿ ಬೆಂಗಳೂರಲ್ಲಿ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಕಾರ್ಡ್‌ ಬಳಕೆಯನ್ನು ಆರಂಭಿಸಲಾಗುತ್ತದೆ. ಬಿಎಂಆರ್‌ಸಿಎಲ್ ಇದಕ್ಕಾಗಿ ಸಿದ್ಧವಾಗಿದೆ ಎರಡು ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಚಾಲಿತ ಶುಲ್ಕ ಸಂಗ್ರಹ ಗೇಟ್‌ (ಎಎಫ್‌ಸಿ) ಗಳನ್ನು ಸ್ಥಾಪನೆ ಮಾಡಿದೆ.

ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ; ಎಲ್ಲ ರೈಲುಗಳೂ 6 ಬೋಗಿಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ; ಎಲ್ಲ ರೈಲುಗಳೂ 6 ಬೋಗಿ

BMRCL Installed Automatic Fare Collection Gate At Two Stations

ಸ್ವಯಂ ಚಾಲಿತ ಶುಲ್ಕ ಸಂಗ್ರಹ ಗೇಟ್‌ಗಳನ್ನು ಬಿಇಎಲ್ ನಿರ್ಮಿಸಿದೆ. ಇದಕ್ಕೆ ದತ್ತಾಂಶ ಸೇರಿದಂತೆ ತಂತ್ರಜ್ಞಾನವನ್ನು ಸಿಡಿಎಸಿ ಪೂರೈಕೆ ಮಾಡಿದೆ. ಎರಡು ಮೆಟ್ರೋ ನಿಲ್ದಾಣದಲ್ಲಿ ಗೇಟ್ ಅಳವಡಿಕೆ ಮಾಡಿದ್ದು, ಶೀಘ್ರವೇ ಜನರ ಬಳಕೆಗೆ ಉದ್ಘಾಟನೆಯಾಗಲಿದೆ.

 ಕಾಮನ್ ಮೊಬಿಲಿಟಿ ಕಾರ್ಡ್ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ ಕಾಮನ್ ಮೊಬಿಲಿಟಿ ಕಾರ್ಡ್ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ

ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಎಲ್ಲಾ ನಿಲ್ದಾಣಗಳಲ್ಲಿ ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಅನುಕೂಲವಾಗುವಂತಹ ಸ್ವಯಂ ಚಾಲಿತ ಶುಲ್ಕ ಸಂಗ್ರಹ ಗೇಟ್‌ ಸ್ಥಾಪನೆ ಮಾಡಲಾಗುತ್ತದೆ. ಆದರೆ, ಮೊದಲ ಹಂತದ ಮೆಟ್ರೋ ನಿಲ್ದಾಣದಲ್ಲಿ ಇಂತಹ ಗೇಟ್‌ಗಳಿಲ್ಲ.

ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಇನ್ನು ಹೆಚ್ಚು ಹೊತ್ತು ಕಾಯೋದ್ಬೇಡಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಇನ್ನು ಹೆಚ್ಚು ಹೊತ್ತು ಕಾಯೋದ್ಬೇಡ

ಬ್ಯಾಂಕ್‌ಗಳು ಎನ್‌ಸಿಎಂಸಿ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಿವೆ. ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮಾದರಿಯಲ್ಲಿ ಈ ಕಾರ್ಡ್‌ ಕಾರ್ಯ ನಿರ್ವಹಣೆ ಮಾಡಲಿದೆ. ಈ ಮಾದರಿ ಯಂತ್ರಗಳು ಕ್ಯೂಆರ್ ಕೋಡ್‌ಗಳನ್ನು ಸಹ ಸ್ಕ್ಯಾನ್ ಮಾಡಲಿವೆ.

ಪ್ರಾಯೋಗಿಕವಾಗಿ ಏಪ್ರಿಲ್‌ನಲ್ಲಿ ಎನ್‌ಸಿಎಂಸಿ ಕಾರ್ಡ್‌ ಬಳಕೆ ಆರಂಭವಾಗಲಿದೆ. 2020ರ ಅಂತ್ಯದ ವೇಳೆಗೆ ನಗರದ ಎಲ್ಲಾ ಮೆಟ್ರೋ ಮೆಟ್ರೋ ನಿಲ್ದಾಣದಲ್ಲಿ ಎಎಫ್‌ಸಿ ಗೇಟ್ ಅಳವಡಿಕೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

English summary
BMRCL has installed automatic fare collection (AFC) gate at Mysuru Road and Byappanahalli Namma Metro stations. National common mobility card based ticketing will come in effect soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X