ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸೇವೆ 12ರ ತನಕ ವಿಸ್ತರಣೆ; ಅಧಿಕೃತ ಆದೇಶದಲ್ಲೇನಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಜನವರಿ 1ರಿಂದ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12ಗಂಟೆ ತನಕ ವಿಸ್ತರಣೆ ಮಾಡಲಾಗಿದೆ. ಬಹುದಿನದಿಂದ ಮೆಟ್ರೋ ಸೇವೆ ವಿಸ್ತರಣೆಗೆ ಬೇಡಿಕೆ ಇತ್ತು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಈ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲು ಸೇವಾ ಅವಧಿಯನ್ನು ವಾರದ ಎಲ್ಲಾ ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಆದೇಶ ಹೇಳಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ

ನಾಡಪ್ರಭು ಕೆಂಪೇಗೌಡ-ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು ಉಳಿದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ರೈಲು ನಾಲ್ಕು ದಿಕ್ಕುಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಹೊರಡಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 6 ಕೋಚ್ ರೈಲು; ವೇಳಾಪಟ್ಟಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 6 ಕೋಚ್ ರೈಲು; ವೇಳಾಪಟ್ಟಿ

BMRCL Extends Namma Metro Service Till 12

ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ

ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಹೊರಡುವ ಪರಿಷ್ಕೃತ ವೇಳಾಪಟ್ಟಿ ಹೀಗಿದೆ.

* ಮೈಸೂರು ರಸ್ತೆ : ಪ್ರಸ್ತುತ ವೇಳೆ 11.05, ಪರಿಷ್ಕೃತ ವೇಳೆ 11.40
* ಬೈಯಪ್ಪನಹಳ್ಳಿ : ಪ್ರಸ್ತುತ ವೇಳೆ 11 ಗಂಟೆ. ಪರಿಷ್ಕೃತ ವೇಳೆ 11.35
* ನಾಗಸಂದ್ರ : ಪ್ರಸ್ತುತ ವೇಳೆ 10.50, ಪರಿಷ್ಕೃತ ವೇಳೆ 11.25
* ಯಲಚೇನಹಳ್ಳಿ : ಪ್ರಸ್ತುತ ವೇಳೆ 11 ಗಂಟೆ, ಪರಿಷ್ಕೃತ ವೇಳೆ 11.35

ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಿದರೂ ದಿನದ ಮೊದಲ ರೈಲು ಸೇವಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

English summary
Bangalore Metro Rail Corporation Ltd. (BMRCL) extended Namma Metro service till 12 from January 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X