ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಆಘಾತ ನೀಡಿದ ನಮ್ಮ ಮೆಟ್ರೋ

|
Google Oneindia Kannada News

ಬೆಂಗಳೂರು, ಜನವರಿ 8: ಹೊಸ ವರ್ಷಕ್ಕೆ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಆಘಾತ ನೀಡಿದೆ. ಮೆಟ್ರೋ ಸ್ಮಾರ್ಟ್ ಕಾರ್ಡ್‌ ಶುಲ್ಕದ ರಿಯಾಯಿತಿಯನ್ನು ಶೇ 15 ರಿಂದ 5 ಕ್ಕೆ ಇಳಿಸಲಾಗಿದೆ.

ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, (ಬಿಎಂಆರ್‌ಸಿಎಲ್) 'ಜನವರಿ 20 ರಿಂದ ಸ್ಮಾರ್ಟ್ ಕಾರ್ಡ್ ರಿಯಾಯಿತಿ ಶುಲ್ಕ ಪರಿಷ್ಕರಣೆಯಾಗಲಿದೆ' ಎಂದು ತಿಳಿಸಿದೆ. ಪ್ರಯಾಣಿಕರ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲಾಗಿದ್ದು, 2017 ರಿಂದ ರಿಯಾಯಿತಿ ದರವನ್ನು ಪರಿಷ್ಕರಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ರಿಯಾಯಿತಿ ದರವನ್ನು ಪರಿಷ್ಕರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

4 ಮೆಟ್ರೋ ನಿಲ್ದಾಣಗಳು, 9 ನೂತನ ಮಾರ್ಗ: 90 ಫೀಡರ್ ಬಸ್‌ಗಳು4 ಮೆಟ್ರೋ ನಿಲ್ದಾಣಗಳು, 9 ನೂತನ ಮಾರ್ಗ: 90 ಫೀಡರ್ ಬಸ್‌ಗಳು

ಇಷ್ಟು ದಿನ, 100 ರುಪಾಯಿ ಮೌಲ್ಯದ ಸ್ಮಾರ್ಟ್ ಕಾರ್ಡ್ ಪಡೆದರೆ ಅದಕ್ಕೆ ನಮ್ಮ ಮೆಟ್ರೋ ಶೇ 15 ರಷ್ಟು ರಿಯಾಯಿತಿ ನೀಡುತ್ತಿತ್ತು. ಅಂದರೆ ನೂರು ರುಪಾಯಿಯಲ್ಲಿ ಪ್ರಯಾಣಿಕನಿಗೆ 15 ರುಪಾಯಿ ಉಳಿಯುತ್ತಿತ್ತು. ಆದರೆ, ಈಗ ಹೊಸ ನಿಯಮದಿಂದ ಕೇವಲ 5 ರುಪಾಯಿ ಮಾತ್ರ ಉಳಿಯಲಿದೆ. ಇದರಿಂದ ಸ್ಮಾರ್ಟ್ ಕಾರ್ಡ್ ಮುಖಾಂತರ ಪ್ರಯಾಣಿಸುವ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

BMRCL Cuts The Smart Card Discount Rate For Namma Metro Passengers

ಈ ಮೊದಲು ಮೆಟ್ರೋ ಸ್ಮಾರ್ಟ್ ಕಾರ್ಡ್ ಪಡೆದರೆ ಅದರಲ್ಲಿನ ಮೊತ್ತ ಪೂರ್ಣ ಖಾಲಿಯಾಗುವವರೆಗೂ ಪ್ರಯಾಣಿಕ ಬಳಸಿಕೊಳ್ಳಬಹುದಿತ್ತು. ಅದನ್ನೂ ಇತ್ತೀಚೆಗೆ ಬಿಎಂಆರ್‌ಸಿಎಲ್ ರದ್ದು ಮಾಡಿ, ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ 50 ರುಪಾಯಿ ಇರಬೇಕು ಎಂಬ ನಿಯಮವನ್ನು ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
BMRCL Cuts The Smart Card Discount rate For Namma Metro Passengers. its cuts by 15% to 5%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X