• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!

|
   ಮೆಟ್ರೋ ರೈಲಿನಲ್ಲಿ ಎಚ್ ಡಿ ಕುಮಾರಸ್ವಾಮಿ ಪಯಣ | Oneindia Kannada

   ಬೆಂಗಳೂರು: ಎರಡನೇ ಹಂತದ ಕನಕಪುರ ರಸ್ತೆ - ಯಲಚೇನಹಳ್ಳಿ ಮತ್ತು ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಕಾಮಗಾರಿ 2020ಕ್ಕೆ ಕೊನೆಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.

   ಎರಡನೇ ಆರು ಬೋಗಿಗಳ ಮೆಟ್ರೋ ಸೇವೆಗೆ ಎಚ್ಡಿಕೆ ಚಾಲನೆ

   ಎರಡನೇ ಆರು ಬೋಗಿಗಳ ಮೆಟ್ರೋ ರೈಲು ಉದ್ಘಾಟನಎ ಬಳಿಕ ಮಾತನಾಡಿದ ಅವರು, ಈಗಾಗಲೇ 2019ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಹಲವು ಕಾರಣಗಳಿಂದಾಗಿ 2020ಕ್ಕೆ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎರಡೂ ಮಾರ್ಗದಲ್ಲೂ ಒಂದೇ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

   ಹಸಿರು ಮಾರ್ಗದಲ್ಲಿ ಆರು ಬೋಗಿಗಳ ಮಟ್ರೋ ಸಂಚಾರ ಸಧ್ಯಕ್ಕಿಲ್ಲ

   ಹಸಿರು ಮಾರ್ಗದಲ್ಲಿ ಆರು ಬೋಗಿಗಳ ಮಟ್ರೋ ಸಂಚಾರ ಸಧ್ಯಕ್ಕಿಲ್ಲ

   ಬೈಯಪ್ಪನಹಳ್ಳಿ- ನಾಯಂಡಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿರುವುದರಿಂದ ಸಿಕ್ಸ್ ಕಾರ್ ಗಳ ಒಟ್ಟು 5 ರೈಲುಗಳ ಸಂಚಾರ ಆರಂಭಿಸಿದ ಬಳಿಕವಷ್ಟೇ ನಾಗಸಂದ್ರ-ಯಲಚೇನಹಳ್ಳಿ ನಡುವಣ ಹಸಿರು ಮಾರ್ಗದಲ್ಲಿ ಸಿಕ್ಸ್ ಕಾರ್ ರೈಲು ಸಂಚಾರ ಆರಂಭಿಸಲಾಗುವುದು ಎಂದರು.

   ದಸರಾ ಮುನ್ನ ಮೆಟ್ರೋ ಕೊಡುಗೆ: 2ನೇ ಸಿಕ್ಸ್ ಕೋಚ್ ಸೇವೆ ಆರಂಭ

   ನವೆಂಬರ್ ನಲ್ಲಿ ಮೂರು ಸಿಕ್ಸ್ ಕಾರ್ಸ್ ಮೆಟ್ರೋ

   ನವೆಂಬರ್ ನಲ್ಲಿ ಮೂರು ಸಿಕ್ಸ್ ಕಾರ್ಸ್ ಮೆಟ್ರೋ

   ಇನ್ನು ಮುಂದೆ ಪ್ರತಿ ತಿಂಗಳು ಒಂದು ಅಥವಾ ಎರಡು ಸಿಕ್ಸ್ ಕಾರ್ ಮೆಟ್ರೊ ಅಳವಡಿಸಲಾಗುತ್ತದೆ. ಮೂರನೇ ಸಿಕ್ಸ್ ಕಾರ್ ಮೆಟ್ರೊ ಇದೇ ಮಾಸಾಂತ್ಯಕ್ಕೆ ಶುರುವಾಗಲಿದೆ ಎಂದರು‌.

   ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು

   ಪೀಕ್ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ 19 ಸಾವಿರ ಮಂದಿ ಪ್ರಯಾಣ

   ಪೀಕ್ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ 19 ಸಾವಿರ ಮಂದಿ ಪ್ರಯಾಣ

   ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಮೆಟ್ರೊ ನಿಲ್ದಾಣವರೆಗೆ ಫುಟ್ ಓವರ್ ಬ್ರಿಜ್ ಜನವರಿ ವೇಳೆಗೆ ಪೂರ್ಣ ಗೊಳ್ಳಲಿದೆ. ಯಶವಂತಪುರ ನಿಲ್ದಾಣದಿಂದ ಮೆಟ್ರೊ ವರೆಗೆ ಫುಟ್ ಓವರ್ ಬ್ರಿಜ್ ನಿರ್ಮಾಣ ಡಿಸೆಂಬರ್ ನಲ್ಲಿ ಆರಂಭವಾಗಲಿದೆ ಎಂದರು.

   ಹಸಿರು ಮಾರ್ಗದಲ್ಲಿ ಬೆಳಗ್ಗೆ 9 ರಿಂದ 10.30ರ ಅವಧಿಯಲ್ಲಿ ಸರಿಸುಮಾರು 9 ಸಾವಿರ ಪ್ರಯಾಣಿಕರು ಸಂಚರಿಸಿದರೆ ನೇರಳೆ ಮಾರ್ಗದಲ್ಲಿ 19 ಸಾವಿರ ಪ್ರಯಾಣಿಕರು ಸಂಚರಿಸುತ್ತಾರೆ. ಹೀಗಾಗಿ ಮೊದಲು ಸಿಕ್ಸ್ ಕಾರ್ ರೈಲುಗಳ ಸೇವೆಯನ್ನು ನೇರಳೆ ಮಾರ್ಗದಲ್ಲಿ ವಿಸ್ತರಿಸಿ, ಎರಡನೇ ಹಂತದಲ್ಲಿ ಹಸಿರು ಮಾರ್ಗದಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.

   ಆರು ಬೋಗಿಯ ಮೆಟ್ರೋ ರೈಲು ಇಂದಿನಿಂದ ಕಾರ್ಯಾರಂಭ

   ಕನಕಪುರ- ಯಲಚೇನಹಳ್ಳಿ ಮೆಟ್ರೋ ಮಾರ್ಗ 2020ಕ್ಕೆ ಪೂರ್ಣ

   ಕನಕಪುರ- ಯಲಚೇನಹಳ್ಳಿ ಮೆಟ್ರೋ ಮಾರ್ಗ 2020ಕ್ಕೆ ಪೂರ್ಣ

   ಕನಕಪುರ -ಯಲಚೇನಹಳ್ಳಿ ಎರಡನೇ ಹಂತದ ಮೆಟ್ರೋ ಕಾಮಗಾರಿ ಇನ್ನಷ್ಟು ತಡವಾಗಲಿದ್ದು, 2020ರವರೆಗೆ ಕಾಯಲೇ ಬೇಕು ಎನ್ನುತ್ತಿದ್ದಾರೆ ಮೆಟ್ರೋ ಎಂಡಿ, ಈಗಾಗಲೇ ತಿಳಿಸಿರುವಂತೆ 2019ರ ಮಾರ್ಚ್ ವೇಳೆಗೆ ಎಲ್ಲಾ ಕಾಮಗಾರಿ ಅಂತ್ಯಗೊಳ್ಳಬೇಕಿತ್ತು ಆದರೆ ಆ ಸಮಯದಲ್ಲಿ ಮುಗಿಯುವುದು ಕಷ್ಟ 2019ರ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, 2020ರ ವೇಳೆ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Metro train service between Kanakapura raid to Yalachenahalli and Mysuru road to Kengeri is expected to resume by 2020, BMRCL MD Ajay Sait said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more