ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ: 5 ದಿನಗಳಲ್ಲಿ 231 ಕೇಸ್, 58 ಸಾವಿರ ರೂ. ದಂಡ ಸಂಗ್ರಹ

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ನಮ್ಮ ಮೆಟ್ರೋದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿರುವ 231 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದು ಐದು ದಿನಗಳಲ್ಲಿ 58 ಸಾವಿರ ದಂಡ ಸಂಗ್ರಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಮಾರ್ಚ್ 24ರಿಂದ ದೂರು ದಾಖಲಿಸಿಕೊಳ್ಳುವ ಕೆಲಸ ಆರಂಭಿಸಲಾಗಿದೆ. ಆರಂಭದಲ್ಲಿ ಹೆಚ್ಚಾಗಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಕೆಲವೇ ದೂರುಗಳನ್ನು ದಾಖಲಿಸಿಕೊಳ್ಳಲಾಗಿತ್ತು.

ಮಾ. 26ರಿಂದಲೇ ಮೆಜೆಸ್ಟಿಕ್- ನಾಯಂಡಹಳ್ಳಿ ಮೆಟ್ರೊ ರೈಲು ಸಂಚಾರ ಶುರುಮಾ. 26ರಿಂದಲೇ ಮೆಜೆಸ್ಟಿಕ್- ನಾಯಂಡಹಳ್ಳಿ ಮೆಟ್ರೊ ರೈಲು ಸಂಚಾರ ಶುರು

ಏಪ್ರಿಲ್ 4ರವರೆಗೂ ಕೇವಲ 9 ದೂರುಗಳನ್ನು ದಾಖಲಿಸಲಾಗಿತ್ತು. ಏಪ್ರಿಲ್ 5 ರ ನಂತರ ಕಠಿಣ ಕ್ರಮಕ್ಕೆ ನಿರ್ಧರಿಸಿ, ಸ್ಕ್ವಾಡ್ ಗಳನ್ನು ಇರಿಸಲಾಯಿತು. ಯಾವುದೇ ನಿಯಮ ಉಲ್ಲಂಘನೆಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಏಪ್ರಿಲ್ 9 ರಂದು ಅತಿ ಹೆಚ್ಚು 88 ಪ್ರಕರಣಗಳು ದಾಖಲಾಗಿದ್ದು, 22 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

BMRCL Books 231 Cases, Collects Rs 58K Fine In 5 Days

ಮೆಟ್ರೋ ರೈಲುಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಎರಡು ವಾರಗಳ ಅರಿವು ಮೂಡಿಸುವ ಕಾರ್ಯಕ್ರಮದ ನಂತರ, ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಬಿಎಂಆರ್ ಸಿಎಲ್ ಆರಂಭಿಸಿದೆ.

ಕಳೆದ ಐದು ದಿನಗಳಲ್ಲಿ 231 ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಗಿದ್ದು, 57, ಸಾವಿರದ 750 ರೂ. ದಂಡ ವಸೂಲಿ ಮಾಡಲಾಗಿದೆ.

ದಂಡ ಕೇಳುವ ಮೊದಲು ಪ್ರತಿಯೊಬ್ಬ ವ್ಯಕ್ತಿಯ ಫೋಟೋ ಕ್ಲಿಕ್ ಮಾಡಲಾಗುತ್ತದೆ. ನನ್ನ ಹಿಂದೆ ವ್ಯಕ್ತಿ ದಂಡ ಪಾವತಿಗೆ ನಿರಾಕರಿಸಿದಾಗ ಆತನನ್ನು ರೈಲಿನಿಂದ ಕೆಳಗಿಳಿಯಲು ಹೇಳಿ ಕರೆದೊಯ್ಯಲಾಯಿತು ಎಂದು ವಕೀಲ ಕಾಂತರಾಜ್ ತವಾನೆ ಟ್ವೀಟ್ ಮಾಡಿದ್ದಾರೆ.

English summary
After a fortnight-long campaign creating awareness among commuters on maintaining physical distance and wearing face mask properly in Metro trains and stations, the Bangalore Metro Rail Corporation Ltd (BMRCL) has began booking violators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X