ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಮೆಟ್ರೋ ನಿಲ್ದಾಣದಲ್ಲಿ 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆ

|
Google Oneindia Kannada News

ಬೆಂಗಳೂರು, ಜುಲೈ 22: ಮುಂದಿನ ವರ್ಷ 2023ರ ಮಾರ್ಚ್‌ನಿಂದ ಭಾರತದಲ್ಲಿ ಆರಂಭವಾಗಲಿದೆ ಎನ್ನಲಾಗುತ್ತಿರುವ 5ಜಿ ಇಂಟರ್‌ನೆಟ್ ಸೇವೆಯ ಪ್ರಾಯೋಗಿಕ ಪರೀಕ್ಷೆ ನಡೆಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆ ಬೆಂಗಳೂರು ನಮ್ಮ ಮೆಟ್ರೋ ಪಾತ್ರವಾಗಿದೆ.

ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ನ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿಆರ್‌ಎಐ) 5ಜಿ ನೆಟ್​​ವರ್ಕ್​​​ನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದೆ. ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ 200ಮೀಟರ್ ವ್ಯಾಪ್ತಿಗೆ 5ಜಿ ಅಂತರ್ಜಾಲ ಸೇವೆ ಲಭ್ಯವಾಗುವಂತೆ ರಿಲಯನ್ಸ್ ಜಿಯೊ ಇದನ್ನು ಸ್ಥಾಪಿಸಿದೆ.

5ಜಿ ಇಂಟರ್‌ನೆಟ್ 4ಜಿ ಗಿಂತಲೂ ಸುಮಾರು ಐವತ್ತು ಪಟ್ಟು ವೇಗ ಇದೆ. ಇದಕ್ಕೆ ಪೂರಕವಾಗಿ ನಿಲ್ದಾಣದಲ್ಲಿ ಪ್ರಾಯೋಗಿಕ ಪರೀಕ್ಷೆ ವೇಳೆ 1.45 Gbps ಡೌನ್‌ಲೋಡ್ ಹಾಗೂ 65 ಎಂಬಿಪಿಎಸ್ ಅಪ್‌ಲೋಡ್ ವೇಗ ಕಂಡು ಬಂದಿದೆ ಎಂದು ಬಿಎಂಆರ್‌ಸಿಎಲ್ ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

BMRCL become the first Metro in India to test 5G network under a Pilot Project of TRAI

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಿಯೊ 5ಜಿ ಇಂಟರ್‌ನೆಟ್ ವೇಗ 4 ಜಿ ಗಿಂತಲೂ 10 ಪಟ್ಟು ಅಧಿಕವಾಗಿದೆ. ಆದರೆ ಫೈಲ್‌ಗಳ ಅಪ್​​ಲೋಡ್‌ ವೇಗ ನಿರೀಕ್ಷೆಯಷ್ಟು ಇಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಕೆಲವು ದಿನಗಳಿಂದ ಹಾಲಿ 4ಜಿ ನೆಟ್​​ವರ್ಕ್ ವೇಗ ಪಡೆದುಕೊಂಡಿದ್ದರಿಂದ ಸಾರ್ವಜನಿಕರು ಅದನ್ನು 5ಜಿ ನೆಟ್​​ವರ್ಕ್ ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಇದರಿಂದ ಅವರಿಗೆ 5ಜಿ ನೆಟ್‌ವರ್ಕ್‌ನ ಅಪ್‌ಲೋಡ್‌ ನಿಧಾನ ಎನ್ನಲಾಗುತ್ತಿದೆ.

ಜಿಯೋ ಸಂಸ್ಥೆ 5ಜಿ ಸ್ಪೆಕ್ಟ್ರಂ ಹರಾಜಿನ ನಂತರ ದೇಶದಲ್ಲಿ ಮುಂದಿನ ವರ್ಷ 5ಜಿ ಅಂತರ್ಜಾಲ ಸೇವೆ ಆರಂಭಿಸುವ ಗುರಿ ಹೊಂದಿದೆ. ಹೊಸ ವೇಗ ಇಂಟರ್‌ನೆಟ್‌ 5ಜಿ ಸೇವೆ ಹಾಲಿ 4ಜಿ ಸೇವೆಗಿಂತಲೂ ದುಬಾರಿ ಎನ್ನಲಾಗುತ್ತಿದೆ.

ಅತೀ ವೇಗದ ಈ 5ಜಿ ನೆಟ್‌ವರ್ಕ್‌ ಸೇವೆ 2023ರಿಂದ ಭಾರತದಲ್ಲಿ ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ 20 ವರ್ಷಗಳ ಅವಧಿಗೆ ಈ ನೂತನ ತರಂಗಾಂತರದ ಸೇವೆ ನೀಡಲು ಒಪ್ಪಿಗೆ ಸೂಚಿಸಿದೆ. ಇದಕ್ಕೆ ಪೂರಕವಾಗಿ ಆದಷ್ಟು ಶೀಘ್ರವೇ ಮೊದಲು 72 ಗಿಗಾ ಹಟ್ಸ್ಟ್ ಸ್ಪೆಕ್ಟ್ರಂ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಈ ಹಿಂದೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದರು.

Recommended Video

BS Yediyurappa ನಿರ್ಧಾರದ ಬಗ್ಗೆ ಭಾವುಕರಾದ ಶಾಸಕ ರೇಣುಕಾಚಾರ್ಯ ಹೇಳಿದ್ದೇನು | *Politics | OneIndia Kannada

English summary
The Bengaluru Metro Rail Corporation Limited (BMRCL) became the first Metro in India to test 5G network under a Pilot Project of TRAI,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X