ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಆರ್‌ಸಿಎಲ್, ಕೆಎಸ್ಆರ್‌ಟಿಸಿಯಿಂದ ಕೋವಿಡ್ ಆರೈಕೆ ಕೇಂದ್ರ

|
Google Oneindia Kannada News

ಬೆಂಗಳೂರು, ಆಗಸ್ಟ್ 06: ಬಿಎಂಆರ್‌ಸಿಎಲ್ ಮತ್ತು ಕೆಎಸ್ಆರ್‌ಟಿಸಿ ತನ್ನ ಸಿಬ್ಬಂದಿಗಳಿಗಾಗಿ ಬೆಂಗಳೂರಿನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿವೆ. ಮೆಟ್ರೋ ರೈಲು ಸಂಚಾರ ನಗರದಲ್ಲಿ ಇನ್ನೂ ಆರಂಭವಾಗಿಲ್ಲ.

Recommended Video

China ಹೊಸ Virus ಗೆ 7 ಮಂದಿ ಬಲಿ | Oneindia Kannada

ಹೊಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬಿಎಂಆರ್‌ಸಿಎಲ್ 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ ಮಾಡಿದೆ. ಕೆಎಸ್ಆರ್‌ಟಿಸಿ ಉಪಯೋಗಿಸದ ಬಸ್ ನಿಲ್ದಾಣವನ್ನೇ 200 ಹಾಸಿಗೆ ಕೇಂದ್ರವಾಗಿ ಪರಿವರ್ತನೆ ಮಾಡಿದೆ.

ಬೆಂಗಳೂರು; ಬೆರಳ ತುದಿಯಲ್ಲೇ ಕೋವಿಡ್ ಆಸ್ಪತ್ರೆ ಮಾಹಿತಿ ಬೆಂಗಳೂರು; ಬೆರಳ ತುದಿಯಲ್ಲೇ ಕೋವಿಡ್ ಆಸ್ಪತ್ರೆ ಮಾಹಿತಿ

ತಮ್ಮ ಸಿಬ್ಬಂದಿಗೆ ಸಹಾಯಕವಾಗಲು ಮತ್ತು ಸರ್ಕಾರದ ಕೋವಿಡ್ ಕೇರ್ ಸೆಂಟರ್ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಇಂತಹ ಪ್ರಯತ್ನ ಮಾಡಲಾಗಿದೆ. ಕೆಲವು ಖಾಸಗಿ ಕಂಪನಿಗಳು ಸಹ ಸೋಂಕಿನ ಲಕ್ಷಣಗಳು ಇಲ್ಲದ ಉದ್ಯೋಗಿಗಳಿಗಾಗಿ ಅಪಾರ್ಟ್‌ಮೆಂಟ್‌ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿವೆ.

ಶುಭ ಸುದ್ದಿ; ಬೆಂಗಳೂರಲ್ಲಿ ಕೋವಿಡ್ ಸೋಂಕು ಗುಣಮುಖ ಹೆಚ್ಚಳ ಶುಭ ಸುದ್ದಿ; ಬೆಂಗಳೂರಲ್ಲಿ ಕೋವಿಡ್ ಸೋಂಕು ಗುಣಮುಖ ಹೆಚ್ಚಳ

BMRCL And KSRTC Set Up COVID Care Center For Staff

ಕೋವಿಡ್ ಸೋಂಕು ತಗುಲಿದ್ದು ಸೋಂಕಿನ ಲಕ್ಷಣಗಳು ಇಲ್ಲವಾದಲ್ಲಿ ಉದ್ಯೋಗಿಗಳು ಮನೆಯಲ್ಲಿ ಇರಬಹುದು. ಹೋಂ ಐಸೊಲೇಷನ್‌ಗೆ ವ್ಯವಸ್ಥೆ ಇಲ್ಲದ ಸಿಬ್ಬಂದಿಗಾಗಿ ಆರೈಕೆ ಕೇಂದ್ರ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗೆ ಮದ್ಯ ಪೂರೈಕೆ! ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ರೋಗಿಗೆ ಮದ್ಯ ಪೂರೈಕೆ!

ಈ ಕೇಂದ್ರದಲ್ಲಿರುವ ಸಿಬ್ಬಂದಿಗಳ ಊಟ, ವಸತಿ, ಔಷಧಿ ಎಲ್ಲಾ ಖರ್ಚುಗಳನ್ನು ಬಿಎಂಆರ್‌ಸಿಎಲ್ ನೋಡಿಕೊಳ್ಳಲಿದೆ. ಈ ಕೇಂದ್ರದಲ್ಲಿ ಈಗಾಲೇ 45 ಉದ್ಯೋಗಿಗಳಿದ್ದಾರೆ. ಕಳೆದ 2 ತಿಂಗಳಿನಲ್ಲಿ ನಮ್ಮ ಮೆಟ್ರೋ ಬೇರೆ ಬೇರೆ ವಿಭಾಗದ 100ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದೆ.

ನಮ್ಮ ಮೆಟ್ರೋ ವಿವಿಧ ಹಂತದ ಕಾಮಗಾರಿಗಳಲ್ಲಿ 6,500 ಜನರು ಕೆಲಸ ಮಾಡುತ್ತಿದ್ದಾರೆ. ಬಿಎಂಆರ್‌ಸಿಎಲ್ ಪೇ ರೋಲ್‌ನಲ್ಲಿ 3000 ಸಿಬ್ಬಂದಿಗಳಿದ್ದಾರೆ. ಸಿಬ್ಬಂದಿಗಳಿಗಾಗಿಯೇ ಈ ಆರೈಕೆ ಕೇಂದ್ರವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಎಚ್‌ಎಎಲ್ ತನ್ನ ಸಿಬ್ಬಂದಿಗಾಗಿ 160 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಿತ್ತು. ಬಾಷ್ ಸಹ ತನ್ನ ಉದ್ಯೋಗಿಗಳಿಗಾಗಿ ಆರೈಕೆ ಕೇಂದ್ರ ಮಾಡಿದೆ.

English summary
BMRCL and KSRTC set up the COVID care centres in Bengaluru for it's staff. BMRCL 45 staff now in center at Hosur road CCC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X