ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 29 : ಸರ್ಕಾರ ಅನುಮತಿ ನೀಡಿದರೆ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಪುನಃ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ. ಪ್ರಯಾಣಿಕರು ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿದೆ.

Recommended Video

ವಿಧಾನಸೌಧದಲ್ಲಿ ಶುರುವಾಯ್ತು ಸಿಎಂ ಮಹತ್ವದ ಸಭೆ | CM Meeting in Vidhana Soudha

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ರದ್ದುಗೊಂಡಿದೆ. ಈಗ ಸರ್ಕಾರ ಅನುಮತಿ ನೀಡಿದರೆ ಜೂನ್ 1ರಿಂದ ಮೆಟ್ರೋ ಸೇವೆ ಆರಂಭಿಸಲು ತಯಾರಿ ನಡೆಸಲಾಗುತ್ತಿದೆ.

ಪ್ರಯಾಣಿಕರು ಮತ್ತು ನಮ್ಮ ಮೆಟ್ರೋದ ಸಿಬ್ಬಂದಿ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ಬಿಎಂಆರ್‌ಸಿಎಲ್ ತಯಾರು ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಹೇಗೆ ಕೆಲಸ ಮಾಡಬೇಕು? ಎಂದು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.

BMRCL All Set To Resume Namma Metro Service SOP Drafted

ಮಾರ್ಗಸೂಚಿಯ ಅನ್ವಯ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರು ಆರೋಗ್ಯ ಸೇತು ಅಪ್ಲಿಕೇಶನ್‌ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಕುರಿತು ತಪಾಸಣೆ ನಡೆಸಲಾಗುತ್ತದೆ. ಅಪ್ಲಿಕೇಶನ್‌ ಇಲ್ಲದಿದ್ದರೆ ನಿಲ್ದಾಣಕ್ಕೆ ಪ್ರವೇಶ ಇರುವುದಿಲ್ಲ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಯಾರ ದೇಹದ ಉಷ್ಣತೆ 38 ಡಿಗ್ರಿಗಿಂತ ಹೆಚ್ಚು ಇರುತ್ತದೆಯೋ ಅವರನ್ನು ನಿಲ್ದಾಣದೊಳಗೆ ಬಿಡುವುದಿಲ್ಲ.

ಶೀತ, ಕೆಮ್ಮು ಮತ್ತು ಜ್ವರ ಇರುವ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವಂತಿಲ್ಲ. ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಸಹಹೆ ನೀಡಲಾಗುತ್ತದೆ.

ಒಂದು ರೈಲಿನಲ್ಲಿ 346 ಜನರು ಮಾತ್ರ ಸಂಚಾರ ಮಾಡಬಹುದು. ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಜನಜಂಗುಳಿ ಆಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ರೈಲಿನಲ್ಲಿ ಜನರು ಹೆಚ್ಚಾದರೆ ಮುಂದಿನ ನಿಲ್ದಾಣದಲ್ಲಿ ರೈಲು ನಿಲ್ಲುವುದಿಲ್ಲ.

ಜೂನ್ 1ರಿಂದ ಮೆಟ್ರೋ ರೈಲಿನ ಸಂಚಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಲಿದೆಯೇ? ಎಂಬ ಬಗ್ಗೆ ಇನ್ನೂ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಆದರೆ, ಒಪ್ಪಿಗೆ ಸಿಕ್ಕರೆ ಸಂಚಾರ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

English summary
BMRCL all set to resume Namma metro service in Bengaluru if govt allowed to run train. BMRCL charted the draft standard operating procedure (SoP) for passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X