ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ತದಾನ ಮಾಡಿರಿ , ಸಾರ್ಥಕ್ಯ ಭಾವ ತಾಳಿರಿ

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 12 : ರಕ್ತದ ಕಣ ಕಣವೂ ಬದುಕಿನ ಜೀವಿತಾವಧಿಯ ಕುರುಹು. ರಕ್ತವನ್ನು ದಾನ ಮಾಡಿ ಜೀವದಾನಿಗಳಾಗಲು, ಬದುಕಿನಲ್ಲಿ ಸಾರ್ಥಕ್ಯ ಭಾವ ತಳೆಯಲು ನಿಮಗೊಂದು ಅವಕಾಶವಿದೆ. ಬನ್ನಿ ರಕ್ತದಾನದಲ್ಲಿ ಪಾಲ್ಗೊಳ್ಳಿ, ಜೀವ ಉಳಿಸಿ.

ಭುವನೇಶ್ವರಿ ನಗರದ ಧ್ಯಾನ ಮತ್ತು ಯೋಗ ತರಬೇತಿ ಕೇಂದ್ರ, ಇಂಡಿಯನ್ ರೆಡ್ ಕ್ರಾಸ್‌ ಸೊಸೈಟಿ ಮತ್ತು ರೋಟರಿ ಬೆಂಗಳೂರು ಡೈಮಂಡ್‌ ಡಿಸ್ಟ್ರಿಕ್ಟ್ ಅವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.[ಅಡ್ಡಾದಿಡ್ಡಿ ವಾಹನ ಚಲಾವಣೆಯಲ್ಲಿ ಬೆಂಗಳೂರು ನಂ.1]

Blood donation camp in Bengaluru Bhuvaneshwari Nagar on Saturday

'ನೀವು ಉಡುಗೊರೆಯಾಗಿ ನೀಡಲಿರುವ ರಕ್ತಕ್ಕಾಗಿ ಒಂದು ಜೀವ ಕಾಯುತ್ತಿದೆ' ಎಂಬ ಅಡಿಬರಹದ ರಕ್ತ ದಾನ ಶಿಬಿರ ಆಗಸ್ಟ್ 15ರ ಶನಿವಾರದಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಭುವನೇಶ್ವರಿ ನಗರದ ವಿಶ್ವಭಾರತಿ ಇಂಗ್ಲಿಷ್‌ ಶಾಲೆಯಲ್ಲಿ ನಡೆಯಲಿದೆ.

ಸ್ವಯಂ ಪ್ರೇರಿತ ತರಬೇತಿ ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಸ್ಕೈ ಪ್ರೋ ಕಾಂತರಾಜು, ಉಲ್ಲಾಳು ವಾರ್ಡಿನ ಬಿಬಿಎಂಪಿ ಸದಸ್ಯರಾದ ರಾಜಣ್ಣ ಮಾಜಿ ಬಿಬಿಎಂಪಿ ಸದಸ್ಯರಾದ ಜಿ. ಮುನಿರಾಜು, ರಾಮಣ್ಣ ಭಾಗವಹಿಸಲಿದ್ದಾರೆ.

ರಕ್ತದಾನ ಮಾಡಲು ಇಚ್ಛಿಸುವವರು 9986612120 ನಂಬರ್‌ ಗೆ ಕರೆಮಾಡಿ ನೊಂದಣಿ ಮಾಡಿಕೊಳ್ಳಬಹುದು. ಬನ್ನಿ ರಕ್ತದಾನ ಮಾಡೋಣ, 'ಜೀವಿಗಳಿಂದ ಜೀವವನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರೂ ಸಹ ರಕ್ತದಾನ ಮಾಡಲೇಬೇಕು' ಎನ್ನುವ ಶಿವಕುಮಾರ ಸ್ವಾಮಿಯವರ ಮಾತನ್ನು ಅನುಸರಿಸೋಣ.

English summary
Blood donation camp in Vishva Bharathi English School, 6th cross, 2nd stage,Bhuvaneshwari nagar, Bengaluru, August 15, on Saturday. This camp organizes by Indian red cross society, Bengaluru diamond district.Blood donation programme from 10 A.M to 4 P.M. Please Register here-9986612120
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X