ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸ್ಫೋಟ ಪ್ರಕರಣ: crime scene ತನಿಖೆ ಮಾಡುವಲ್ಲಿ ಪೊಲೀಸರು ವಿಫಲರಾದರೆ?

|
Google Oneindia Kannada News

ಬೆಂಗಳೂರು, ಸೆ. 26: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ಸ್ಫೋಟ ಮತ್ತು ಬೆಂಕಿ ಅನಾಹುತದ ಮೂಲ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆಯೆ? .

Crime Scene ತನಿಖೆ ನಡೆಸುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಮರ್ಥ ತಜ್ಞರ ಕೊರತೆ ಎದುರಿಸುತ್ತಿರುವ ಪೊಲೀಸ್ ಇಲಾಖೆ ಬೆಂಕಿ ಅವಘಡ ಹಾಗೂ ಸ್ಫೋಟದ ಮೂಲ ಪತ್ತೆ ಮಾಡುವಲ್ಲಿ ವಿಫಲವಾಗುತ್ತಿದೆ. ಮೇಲ್ನೋಟಕ್ಕೆ ಕಾರಣ ನೀಡಿ ಕೈತೊಳೆದುಕೊಳ್ಳುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ದೇವರ ಚಿಕ್ಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರ ಮುಗ್ಧ ಜೀವಗಳು ಬಲಿಯಾಗಿದ್ದವು. ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂದಿದ್ದರು. ಆನಂತರ ಶಾರ್ಟ್ ಸರ್ಕೂಟ್ ಎಂದು ಹೇಳಲಾಗಿತ್ತು. ಅಂತಿಮವಾಗಿ ದೇವರಿಗೆ ಹಚ್ಚಿದ್ದ ದೀಪದಿಂದ ಇಂಟೀರಿಯರ್ ಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ ಎಂದಷ್ಟೇ ಹೇಳಿದರು.

ವೈಜ್ಞಾನಿಕವಾಗಿ ಅಲ್ಲಿನ "ಕ್ರೈಮ್ ಸೀನ್" ತನಿಖೆ ಮಾಡುವಲ್ಲಿ ಪೊಲೀಸರು ವಿಫಲರಾದರೇ ಎಂಬ ಪ್ರಶ್ನೆ ಮೂಡಿದೆ. ಚಾಮರಾಜಪೇಟೆಯ ನ್ಯೂ ತರಗು ಪೇಟೆಯಲ್ಲಿ ಮೂವರನ್ನು ಬಲಿ ಪಡೆದ ಸ್ಫೋಟಕ ಯಾವುದು ಎಂಬುದಕ್ಕೆ ಮೇಲ್ನೋಟದ ಪಟಾಕಿ ಕಾರಣ ಎಂಬುದು ಹೊರತು ಪಡಿಸಿದರೆ ನೈಜ ಕಾರಣ ಪತ್ತೆ ಮಾಡಲು ಸಾಧ್ಯವಾಗಿಲ್ಲ!

ತರಗುಪೇಟೆ ಅವಘಡ

ತರಗುಪೇಟೆ ಅವಘಡ

ನ್ಯೂ ತರಗು ಪೇಟೆಯ ಪತ್ರಕಾಳಿ ಟ್ರಾನ್ಸ್ ಪೋರ್ಟ್ ಸರ್ವೀಸ್ ಗೋಡನ್ ನಲ್ಲಿ ಸಂಭವಿಸಿದ ಅವಘಡಲ್ಲಿ ಇಬ್ಬರ ದೇಹಗಳು ಛಿದ್ರವಾಗಿತ್ತು. ಮೂವರು ಗಂಭೀರ ಸ್ವರೂಪವಾಗಿ ಗಾಯಗೊಂಡಿದ್ದರು. ದೇಹದ ಭಾಗಗಳು ಛಿತ್ರವಾಗಿ ಬಿದ್ದಿದ್ದವು.

ಹತ್ತಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. ಈ ರೀತಿಯ ಭಯಾನಕ ಸ್ಫೋಟಕ್ಕೆ ಅಲ್ಲಿ ಸಂಗ್ರಹಿಸಿದ್ದ ರೋಲ್ ಪಟಾಕಿ ಬಾಕ್ಸಗಳು ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಕ್ರೈಮ್ ಸೀನ್ ಅನ್ವೇಷಣೆ ಮಾಡಿದರೂ ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.

 ಎಡವಟ್ಟು ಮಾಡಿದರೆ?

ಎಡವಟ್ಟು ಮಾಡಿದರೆ?

ನ್ಯೂ ತರಗು ಪೇಟೆ ಕ್ರೈಮ್ ಸೀನ್ ತನಿಖೆ ನಡೆಸಬೇಕಿದ್ದ ವಿಧಿ ವಿಜ್ಞಾನ ಪ್ರಯೋಗಾಯದ ತಜ್ಞರು ಸ್ಫೋಟಕ್ಕೆ ಕಾರಣವಾಗಿರುವ ಅಂಶ ಯಾವುದು ಎಂಬುದನ್ನು ಪತ್ತೆ ಮಾಡಬೇಕಿತ್ತು. ಅದರ ಪ್ರಕಾರ ಸ್ಫೋಟದ ಮೂಲ ಕಾರಣ ಅನ್ವೇಷಣೆ ಮಾಡಬೇಕೆ ವಿನಃ ಮಾದರಿ ಸಂಗ್ರಹ ಇಂತಹ ಪ್ರಕರಣದಲ್ಲಿ ಮಹತ್ವ ಅಲ್ಲ.

ಎಲ್ಲಿ ಸ್ಪೋಟ ಆಯಿತು? ಇಷ್ಟು ಎನರ್ಜಿ ಪಟಾಕಿಯಿಂದ ಸಿಡಿಯಲು ಸಾಧ್ಯವೇ ? ಸೋಡಿಯಂ ಕ್ಲೋರೈಡ್ ಮತ್ತು ಸೋಡಿಎಂ ಪಲ್ಪೋರೆಡ್ ಪಟಾಕಿಯಲ್ಲಿ ಬಳಸಲಾಗುತ್ತದೆ. ಮಕ್ಕಳು ಆಟಿಕೆ ಪಿಸ್ತೂಲಿನಲ್ಲಿ ರೋಲ್ ಪಟಾಕಿ ಸ್ಫೋಟವಾಗಬೇಕಾದರೆ, ಕನಿಷ್ಠ ಒಂದರಿಂದ ಎರಡು ಕೆ.ಜಿ. ಒತ್ತಡ ಅದರ ಮೇಲೆ ಬಿದ್ದಾಗ ಅದು ಸ್ಫೋಟಿಸುತ್ತದೆ.

ಆದರೆ ಇಷ್ಟು ಆಗಾದ ಪ್ರಮಾಣದ ಸ್ಫೋಟಕ್ಕೆ ಏನು ಕಾರಣ ಎಂಬುದನ್ನು ಮೊದಲು ಶೋಧ ಮಾಡಬೇಕಿತ್ತು. ಅಲ್ಲಿ ಜಪ್ತಿ ಮಾಡಿರುವ ಪಟಾಕಿಯನ್ನು ಇಳಿಸುವಾಗ, ಕೆಳಗೆ ಬೀಳಿಸಿದಾಗ ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಸಚಿತ್ರ ಪೋಟೋಗಳನ್ನು ಕೂಡ ತೆಗೆದಂತೆ ಕಾಣುತ್ತಿಲ್ಲ. ಘಟನೆ ನಡೆದ ದಿನವೇ ಮೃತ ದೇಹಗಳನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಗಾಯಗಳ ಬಗ್ಗೆ ಮಾಹಿತಿ ಪಡೆದು ರೀಕನ್ ಸ್ಟ್ರಕ್ಷನ್ ಮಾಡಬೇಕಿತ್ತು. ಅದು ಆದಂತೆ ಕಾಣುತ್ತಿಲ್ಲ ಎಂದು ಘಟನೆಯನ್ನು ಹತ್ತಿರದಿಂದ ನೋಡಿದ ನುರಿತ ವಿಧಿ ವಿಜ್ಞಾನ ತಜ್ಞರೊಬ್ಬರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಸ್ಫೋಟದಲ್ಲಿ ದೇಹಗಳು ಛಿದ್ರವಾಗಿವೆ ಎಂದರೆ, ಸ್ಫೋಟದ ಶಾಕ್‌ ವೇವ್ 25000 ಕಿ.ಮೀ. ಪರ್ ಅವರ್ ವೆಲಾಸಿಟಿ ಇರುತ್ತದೆ. ಅಷ್ಟು ಆಗಾದ ಪ್ರಮಾಣದ ವೇವ್ಸ್ ಕ್ರಿಯೇಟ್ ಅಗಿದೆ ಎಂದರೆ, ಎಷ್ಟು ಎಜರ್ನಿ ಬೇಕಾಗುತ್ತದೆ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲದ ತಜ್ಞರು ಪ್ರಯೋಗ ಮಾಡಬೇಕು.

ವಿಧಿ ವಿಜ್ಞಾನ ಪ್ರಯೋಗಾಲಯದ ಕೆಲಸ ಕಸದಲ್ಲಿ ರಸ ತೆಗೆಯಬೇಕು. ತಜ್ಞ ಎನಿಸಿಕೊಂಡವರು ಕ್ರೈಮ್ ಸೀನ್ ನಲ್ಲಿ ಲೀನವಾಗಬೇಕು. ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವ ಬದ್ಧತೆ ಇರಬೇಕು. ಅದರಂತೆ ಗೋಡನ್ ನಲ್ಲಿ ಸಿಕ್ಕಿದ ವಸ್ತುಗಳನ್ನು ಪಡೆದು ಪ್ರಯೋಗ ನಡೆಸಬೇಕು.
ಆಗ ಮಾತ್ರ ಸ್ಫೋಟಕ್ಕೆ ಮೂಲ ಕಾರಣ ಗೊತ್ತಾಗಲಿದೆ. ಅಲ್ಲಿ ಪಟಾಕಿ ಸಿಕ್ಕಿದೆ. ಅದರಿಂದ ಪಟಾಕಿಯಿಂದ ಸ್ಫೋಟ ಸಂಭಿವಿಸಿತು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಪಟಾಕಿಯಿಂದ ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಅಷ್ಟು ಸ್ಫೋಟ ಸಂಭವಿಸಿದೆ ಎಂದರೆ ಒಂದೇ ಸಮನೆ ಅಷ್ಟು ಪ್ರಮಾಣದ ಒತ್ತಡ ಯಾವ ರೀತಿ ಬಿತ್ತು ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಅನ್ವೇಷಣೆ ಮಾಡಿ ಕಾರಣ ಕೊಡಬೇಕು ಎಂದು ಹೆಸರು ಹೇಳಲು ಇಚ್ಛಿಸದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬೇಸರ ತೋಡಿಕೊಂಡರು.

ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜೆಲ್ ಎಕ್ಸ್ ಪ್ಲೋಸೀವ್ ಹೈ ಎಕ್ಸ್ ಪ್ಲೋಸೀವ್. ಅದಕ್ಕೆ ಎನರ್ಜಿ ಇತ್ತು. ಪಟಾಕಿಯಲ್ಲಿ ಅಷ್ಟು ಪ್ರಮಾಣದ ಎನರ್ಜಿ ಇರಲು ಸಾಧ್ಯವಿಲ್ಲ. ಒಂದು ವೇಳೆ ಅಷ್ಟು ಎಜರ್ನಿ ಉತ್ಪಾದನೆಯಾಗಿದೆ ಎಂದರೆ ಪ್ರಾಯೋಗಿಕವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಅದನ್ನು ಅನ್ವೇಷಣೆ ಮಾಡಿ ತೋರಿಸಬೇಕು.
ಪಟಾಕಿಗಳನ್ನು ಲೇಯರ್ ಬೈ ಲೇಯರ್ ಜೋಡಿಸಲಾಗಿರುತ್ತದೆ. ರೀಲ್ ಒಂದೊಂದೇ ಬಿಡಿಸಿ ಒಂದು ಬಟ್ಟೆಯಲ್ಲಿ ಕಟ್ಟಿ ಸೆಲ್ಲೋ ಟೇಪ್ ನಲ್ಲಿ ಕಟ್ಟಿ ಕಲ್ಲು ಎತ್ತಿ ಹಾಕಿದಾಗ ಈ ಪರಿಯ ಸೌಂಡ್ ಬರಲು ಸಾಧ್ಯ. ಅದರೆ ಸಿದ್ದಪಡಿಸಿದ ಪಟಾಕಿಯ ಮೇಲೆ ಹಾಕಿದ ಒತ್ತಡ ಯಾವುದು ಎಂಬುದನ್ನು ಕಂಡು ಹಿಡಿಯಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ನ್ಯೂ ತರಗು ಪೇಟೆಯ ಅಗ್ನಿ ಅವಘಡಕ್ಕೆ ಮೂಲ ಕಾರಣ ಯಾವುದು ಎಂಬುದಕ್ಕೆ ನೈಜ ಕಾರಣ ಇನ್ನೂ ಪತ್ತೆ ಮಾಡಿಲ್ಲ.

ದೇವರ ಚಿಕ್ಕನಹಳ್ಳಿ ಅಗ್ನಿ ಅವಘಡ

ದೇವರ ಚಿಕ್ಕನಹಳ್ಳಿ ಅಗ್ನಿ ಅವಘಡ

ಯಾವುದೇ ಅಗ್ನಿ ಅವಘಡ ಸಂಭವಿಸದರೆ, ಅದರಲ್ಲಿ ಮಾದರಿ ಸಂಗ್ರಹಕ್ಕಿಂತಲೂ ಕ್ರೈಮ್ ಸೀನ್ ಅನ್ವೇಷಣೆ ಮಾಡಬೇಕು. ದೇವರ ದೀಪದಿಂದ ಅಷ್ಟು ಬೇಗ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವೇ ? ಪ್ಲಾಟ್ ನಲ್ಲಿ ನಿಜವಾಗಿಯೂ ಅಷ್ಟು ಬೇಗ ಅಗ್ನಿ ಅವಘಡ ಸಂಭವಿಸಲು ಕಾರಣವಾಗಿದ್ದು ಯಾವುದು ಎಂಬುದನ್ನು ಕ್ರೈಮ್ ಸೀನ್ ಅನ್ವೇಷಣೆಯಿಂದ ವಿಧಿ ವಿಜ್ಞಾನ ತಜ್ಞರು ಮಾಡಬೇಕಾದ ಕೆಲಸ. ಆದರೆ, ಕ್ರೈಮ್ ಸೀನ್ ಗೆ ಹೋದರೆ ಅದರಲ್ಲಿ ಲೀನವಾಗಬೇಕು.

ಸಿಲಿಂಡರ್ ಸ್ಫೋಟ, ದೀಪದಿಂದ ಬೆಂಕಿ ಹೊತ್ತಿತು, ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಎಂಬ ಕಾರಣ ಕೊಡುವುದರಲ್ಲಿ ಅರ್ಥವಿಲ್ಲ. ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜೆಲ್ ಸ್ಫೋಟ ಪ್ರಕರಣದಲ್ಲಿ ಕೂಡ ವೈಜ್ಞಾನಿಕವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅನ್ವೇಷಣೆ ನಡೆದಂತೆ ಕಾಣುತ್ತಿಲ್ಲ.

ಎಲ್ಲಾ ಕಡೆ ಸ್ಫೋಟ ಸಂಭವಿಸಿದೆ, ಅವಘಡ ಆಗಿದೆ. ಆದರೆ ಅಲ್ಲಿ ಬಳಕೆಯಾಗಿರುವ ವಸ್ತು ಯಾವುದು ? ಎಷ್ಟು ಒತ್ತಡ ಬಿದ್ದರೆ ಅಂತಹ ದುರಂತ ಸಂಭವಿಸಲು ಸಾಧ್ಯ ಎಂಬುದನ್ನು ಪ್ರಯೋಗಾತ್ಮಕವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಅನ್ವೇಷಣೆ ಮಾಡಬೇಕು. ಪ್ರಯೋಗವನ್ನು ಮಾಡಿ ಸಾಭೀತು ಮಾಡಬೇಕು.

ಆದರೆ, ಇತ್ತೀಚೆಗೆ ಅಪರಾಧ ಪ್ರಕರಣಗಳಲ್ಲಿ ಕೇವಲ ತೋರ್ಪಡಿಕೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.

Recommended Video

ಚೆನ್ನೈ ವಿರುದ್ಧ ಸೋಲಿಗೆ ವಿರಾಟ್ ನೇರವಾಗಿ ದೂರಿದ್ದು ಯಾರನ್ನು ಗೊತ್ತಾ? | Oneindia Kannada
ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಹತ್ವ ಇಲ್ಲ

ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಹತ್ವ ಇಲ್ಲ

ವಿಧಿ ವಿಜ್ಞಾನ ಪ್ರಯೋಗಾಲಯ ಕೋರ್ಸ್ ಮಹತ್ವ ಕಳೆದುಕೊಳ್ಳುತ್ತಿದೆ. ಕೆಲವು ಕಾಲೇಜುಗಳಲ್ಲಿ ಬಿಎಸ್ ಸಿ ವಿಧಿ ವಿಜ್ಞಾನ ಪದವಿ ಪಡೆದವರಿಗೆ ಸೂಕ್ತ ಉದ್ಯೋಗಗಳು ಸಿಗುತ್ತಿಲ್ಲ. ಹೀಗಾಗಿ ಈ ಪದವಿಯಿಂದ ವಿದ್ಯಾರ್ಥಿಗಳು ವಿಮುಖರಾಗಿ ಬೇರೆ ಉದ್ಯೋಗ ನೋಡಿಕೊಳ್ಳುತ್ತಿದ್ದಾರೆ. ಅಗ್ನಿ ಅವಘಡ, ನಿಗೂಢ ಕೊಲೆ, ಸ್ಫೋಟದಂತಹ ಪ್ರಕರಣಗಳಲ್ಲಿ ವಿಧಿ ವಿಜ್ಞನ ಪ್ರಯೋಗಾಲಯದ ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ.
ಇದರ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಬೇಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಕೇಂದ್ರ ತೆರೆಯುವುದಕ್ಕಿಂತಲೂ ಮಿಗಿಲಾಗಿ ಸಮರ್ಥರಿಗೆ ತರಬೇತಿ ನೀಡಿ ಅದಕ್ಕೆ ಅಣಿಗೊಳಿಸಬೇಕಾದ ಕಾರ್ಯಕ್ಕೆ ಗೃಹ ಇಲಾಖೆ ಮುಂದಾಗಬೇಕಿದೆ ಎಂದು ಬೆಂಗಳೂರಿನ ಖ್ಯಾತ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ದೇವರಚಿಕ್ಕನಹಳ್ಳಿ ದುರಂತ: ಬೆಂಗಳೂರಿನ ದೇವರ ಚಿಕ್ಕನಹಳ್ಳಿಯ ಅಪರ್ಟ್ ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ಅವಘಢಕ್ಕೆ ಇಬ್ಬರು ಸುಟ್ಟು ಕರಕಲಾಗಿದ್ದರು. ಇದಾದ ಬಳಿಕ ನ್ಯೂ ತರಗು ಪೇಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನೂ ಇಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

English summary
New taragupete blast case and Devara chikkanahalli apartment fire accident : will FSL experts fail to to investigate crime scenes?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X