ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ ಪೋಟೋ ಕಳಿಸ್ತೀನಿ ಅಂದ ಮಾತ್ರಕ್ಕೆ 1.25 ಕೋಟಿ ರೂ. ಕೊಟ್ಟ ಮಹಿಳೆ!

|
Google Oneindia Kannada News

ಬೆಂಗಳೂರು: ಮಹಿಳೆಗೆಯೊಬ್ಬರಿಗೆ ಅಶ್ಲೀಲ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿ1.25 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಕೇಸು ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ಪೊಲೀಸರು ಆರೋಪಿಗಳಾದ ಮಹೇಶ್ ಹಾಗೂ ಅಪರ್ಣ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಡುಂಜೋ ಬ್ಯಾಗ್‌ ಬಳಸಿ ಡ್ರಗ್ ಮಾರಾಟ ಮತ್ತೊಂದು ಡ್ರಗ್ ಜಾಲ ಪತ್ತೆಡುಂಜೋ ಬ್ಯಾಗ್‌ ಬಳಸಿ ಡ್ರಗ್ ಮಾರಾಟ ಮತ್ತೊಂದು ಡ್ರಗ್ ಜಾಲ ಪತ್ತೆ

ವಿವಾಹ ಪೂರ್ವ ಸಂಬಂಧ !

ವೈಟ್ ಫೀಲ್ಡ್ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಹತ್ತು ವರ್ಷಗಳ ಹಿಂದೆಯೇಮದುವೆಯಾಗಿದ್ದು, ಎಂಟು ವರ್ಷದ ಮಗನಿದ್ದಾನೆ.

Blackmail for women 1.25 crore extortion


ಮದುವೆಗೂ ಮುನ್ನ ಮಹಿಳೆ, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಮನೆಯವರು ಒಪ್ಪದಿದ್ದರಿಂದ ಮದುವೆ ಆಗಿರಲಿಲ್ಲ ಎನ್ನಲಾಗಿದೆ.

ಅದೇ ಯುವಕನ ಹೆಸರಿನಲ್ಲಿ ಮಹಿಳೆಗೆ ಸಂದೇಶ ಕಳುಹಿಸಿದ್ದ ಆರೋಪಿ, ಆತ್ಮಿಯವಾಗಿ ಮಾತನಾಡಿದ್ದರು. ಇತ್ತೀಚೆಗೆ‌ ಮಹಿಳೆ ಮೊಬೈಲ್ ಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಿಮ್ಮ ಅಶ್ಲೀಲ ಫೋಟೊಗಳು ನನ್ನ ಬಳಿ ಇದೆ. ನಾನು ಕೇಳಿದಷ್ಟು ಹಣವನ್ನು ಅಪರ್ಣಾ ಎಂಬುವರ ಖಾತೆಗೆ ವರ್ಗಾವಣೆ ಮಾಡಬೇಕು. ತಪ್ಪಿದರೆ, ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಹೆದರಿಸಿದ್ದ.

ಮಾಸ್ಕ್‌ ಹಾಕದೇ ದಂಡ ಕಟ್ಟುವಾಗ ಸಿಕ್ಕಿಬಿದ್ದ ಖೋಟಾ ನೋಟು ಜಾಲಮಾಸ್ಕ್‌ ಹಾಕದೇ ದಂಡ ಕಟ್ಟುವಾಗ ಸಿಕ್ಕಿಬಿದ್ದ ಖೋಟಾ ನೋಟು ಜಾಲ

ಆರೋಪಿ ಖಾತೆಗೆ ಹಣ ವರ್ಗ

ಪ್ರತಿಷ್ಟಿತ ಕುಟುಂಬಕ್ಕೆ ಸೇರಿದ್ದ ಮಹಿಳೆ ಹೆದರಿ 1.25 ಕೋಟಿ ಹಣವನ್ನು ಆರೋಪಿ ಖಾತೆಗೆ ವರ್ಗಾಯಿಸಿದ್ದರು ಎನ್ನಲಾಗಿದೆ‌.

Recommended Video

ಹಾಗಾದ್ರೆ ಈ ಆಟಗಾರರ ಭವಿಷ್ಯ !! | RCB | Oneindia Kannada

ಇಷ್ಟಾಗಿಯೂ ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ನಡೆದ ಘಟನೆಯನ್ನು ಪತ್ನಿ ತನ್ನ ಪತಿ ಬಳಿ ಹೇಳಿಕೊಂಡಿದ್ದು, ಪತಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿವಾಹಕ್ಕಿಂತಲೂ ಮೊದಲು ಮಹಿಳೆ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದುಕೊಂಡು ಆತನ ಹೆಸರಿನಲ್ಲಿ ಕೃತ್ಯ ಎಸಗಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮತ್ತಷ್ಟು ಜನರಿಗೆ ಇದೇ ರೀತಿ ಬ್ಲಾಕ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Man blackmails married woman for uploading her obscene photos and videos on social media and grabs RS 1.25 crore. Accused identified by name mahesh arrested by White Field police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X