ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋನ್ ಕರೆಯಿಂದ ಬ್ಲಾಕ್‌ಮನಿ ದಂಧೆ ಬಯಲಿಗೆಳೆದ ಪುಟ್ಟೇನಹಳ್ಳಿ ಪೊಲೀಸರು

|
Google Oneindia Kannada News

ಬೆಂಗಳೂರು, ಡಿ. 02: ಒಂದು ಪೋನ್ ಕರೆ ಜಾಡು ಹಿಡಿದು ಬ್ಲಾಕ್ ಅಂಡ್ ವೈಟ್ ದಂಧೆ ಮಾಡುತ್ತಿದ್ದ ಜಾಲವನ್ನು ಪುಟ್ಟೇನಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ. ಕೇವಲ 185 ಬ್ಯಾಂಕ್ ಖಾತೆಗಳ ಮೂಲಕ 31 ಕೋಟಿ ರೂ. ಬೇನಾಮಿ ವಹಿವಾಟು ನಡೆಸಿರುವುದನ್ನು ಬಯಲಿಗೆ ಎಳೆದಿದ್ದಾರೆ.

ಅಪರಿಚಿತರಿಂದ ಪೊಲೀಸ್ ಠಾಣೆಗೆ ಒಂದು ಕರೆ ಬಂದಿತ್ತು. ಯಾರೋ ದುಷ್ಕರ್ಮಿಗಳು ಮಚ್ಚು ಮತ್ತು ಲಾಂಗು ಹಿಡಿದು ಎಟಿಎಂ ಕೇಂದ್ರದ ಬಳಿ ಇರುವುದಾಗಿ ಮಾಹಿತಿ ನೀಡಲಾಗಿತ್ತು. ಇದರ ಜಾಡು ಹಿಡಿದು ತೆರಳಿದ ಪುಟ್ಟೇನಹಳ್ಳಿ ಪೊಲೀಸರು ಎಟಿಎಂ ಬಳಿ ಮಚ್ಚು ಹಿಡಿದು ವಿವಿಧ ಖಾತೆಗಳಿಗೆ ಹಣ ಹಾಕುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನ ಬಳಿಯಿದ್ದ ಒಂದು ಲಕ್ಷ ರೂ. ನಗದು ಹಣ ಮತ್ತು ಮಚ್ಚು ವಶಪಡಿಸಿಕೊಂಡಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಆತನ ಮನೆಯಲ್ಲಿ ಶೋಧ ನಡೆಸಿದಾಗ ಪೊಲೀಸರನ್ನೇ ಬೆಚ್ಚಿ ಬೀಳಿಸುವ ದಾಖಲೆಗಳು ಸಿಕ್ಕಿವೆ.

ಮನೆಯಲ್ಲಿ 20 ಲಕ್ಷ ರೂ. ಪತ್ತೆ: ವಶಕ್ಕೆ ಪಡೆದ ವ್ಯಕ್ತಿಯ ಮನೆಯಲ್ಲಿ 20 ಲಕ್ಷ ರೂ. ನಗದು ಹಣ ಸಿಕ್ಕಿದೆ. ಈ ವೇಳೆ ಸಿಕ್ಕಿದ ದಾಖಲೆಗಳನ್ನು ಪರಿಶೀಲಿಸಿದಾಗ ಸಾವಿರಾರು ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಿವೆ. 2656 ವಿವಿಧ ಬ್ಯಾಂಕ್ ಖಾತೆಗಳಿಗೆ 8.9 ಕೋಟಿ ರೂ. ಹಣವನ್ನು ಡೆಪಾಸಿಟ್ ಮಾಡಲಾಗಿದೆ. ಪ್ರತಿ ಖಾತೆಗೂ ಹತ್ತು ಸಾವಿರ ರೂ. ನಿಂದ 30 ಸಾವಿರ ರೂ. ಜಮೆ ಹಣವನ್ನು ಎಟಿಎಂಗಳಿಗೆ ಹೋಗಿ ಜಮೆ ಮಾಡಲಾಗಿದೆ. ಎಟಿಎಂ ಹಣ ಜಮೆ ಮಾಡುವ ಕೇಂದ್ರಗಳನ್ನೇ ದಾಳವನ್ನಾಗಿ ಬಳಸಿಕೊಳ್ಳಲಾಗಿದೆ.

Black-to-white money racket busted in Bengaluru, found Rs 31 cr Benami Transactions

ಏನಿದು ಜಾಲದ ಅಸಲಿ ಸತ್ಯ: ಇನ್ನೂ ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಿದ ಪುಟ್ಟೇನಹಳ್ಳಿ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಅಬ್ದುಲ್ ಮನಾಫ್, ಸಾಹೀಲ್, ಫಾಸಿಲ್, ಮೊಹಮದ್ ಫೈಸಲ್ ಬಂಧಿತ ಆರೋಪಿಗಳು. ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ತಂಗಿದ್ದರು. ಮನೆ ಮೇಲೆ ದಾಳಿ ಮಾಡಿ ಬಂಧಿತರಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜಾಡು ಹಿಡಿದು ಪುಟ್ಟೇನಹಳ್ಳಿ ಪೊಲೀಸರು ಮಂದಾಗಿದ್ದಾರೆ. ಇನ್ನು ಬೇನಾಮಿ ವಹಿವಾಟು ಸಂಬಂಧ ತನಿಖೆ ನಡೆಸುವಂತೆ ಪುಟ್ಟೇನಹಳ್ಳಿ ಒಲೀಸರು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಡಿ ಅಧಿಕಾರಿಗಳು ಹಣದ ಬೇನಾಮಿ ವಹಿವಾಟಿನ ಬಗ್ಗೆ ತನಿಖೆ ನಡೆಸಲಿದ್ದಾರೆ.

Black-to-white money racket busted in Bengaluru, found Rs 31 cr Benami Transactions

ಬ್ಯಾಂಕಿನವರ ಶಾಮೀಲು?: ನೂರಾರು ಬ್ಯಾಂಕ್ ಖಾತೆಗೆ ಎಟಿಎಂ ಕೇಂದ್ರಗಳಿಂದ ಹಣ ಜಮೆ ಮಾಡುವುದು, ಯಾರದ್ದೋ ಹೆಸರಿನಲ್ಲಿರುವ ಖಾತೆಗಳಲ್ಲಿನ ಹಣ ಪಡೆಯುವ ಮೂಲಕ ಕಪ್ಪು ಹಣವನ್ನು ಕಾನೂನು ಬದ್ಧಗೊಳಿಸುವ ಈ ಜಾಲದಲ್ಲಿ ಬ್ಯಾಂಕ್‌ನವರ ಶಾಮೀಲಾಗಿರುವ ಸಾಧ್ಯತೆಯಿದೆ. ಸಾಮೂಹಿಕವಾಗಿ ಇಷ್ಟು ಖಾತೆಗಳನ್ನು ಮಾಡಿಸಲು ಸಾಧ್ಯವಿಲ್ಲ. ಹೀಗಾಗಿ ನಕಲಿ ದಾಖಲೆಗಳನ್ನು ಕೊಟ್ಟು ಬ್ಯಾಂಕ್ ಖಾತೆ ಮಾಡಿಸಿರುವ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪುಟ್ಟೇನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಕಿಶೋರ್ ತನಿಖೆ ನಡೆಸುತ್ತಿದ್ದು, ಮತ್ತಷ್ಟು ಅಕ್ರಮ ಕುಳಗಳಿಗೆ ಈ ದಂಧೆ ಉರುಳಾಗುವ ಸಾಧ್ಯತೆಯಿದೆ.

Black-to-white money racket busted in Bengaluru, found Rs 31 cr Benami Transactions

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 2600 ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಿದ್ದು, ಬರೋಬ್ಬರಿ 31 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಬೇನಾಮಿ ಹಣವನ್ನು ಕಾನೂನು ಬದ್ಧಗೊಳಿಸಲು ಈ ಮಾರ್ಗ ಹಿಡಿದಿರುವ ಅನುಮಾನ ಮೂಡಿಸಿದೆ. ಹೀಗಾಗಿ ಇದರಲ್ಲಿ ಯಾರಾದರೂ ಪ್ರಭಾವಿಗಳು ಇದ್ದಾರೆಯೇ? ಅಥವಾ ರಿಯಲ್ ಎಸ್ಟೇಟ್ ದಂಧೆಕೋರರು ಈ ಕೃತ್ಯ ಎಸಗಿದರೇ? ಎಂಬುದರ ವಿವರ ಪೊಲೀಸರ ತನಿಖೆಯಲ್ಲಿ ಬಯಲಾಗಬೇಕಿದೆ.

English summary
Puttenahalli Police busted Black-to-white money racket in Bengaluru; arrested 4 people and seized Rs 20 lakh. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X