ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಮ್ಯಾ ಎಲ್ಲಿದ್ದಿಯಮ್ಮಾ?' : ಟ್ವಿಟ್ಟರಲ್ಲಿ ಪ್ರಶ್ನೆ ಹಾಕಿದ ಶಿಲ್ಪಾ ಗಣೇಶ್

|
Google Oneindia Kannada News

ಬೆಂಗಳೂರು, ಮೇ 24: ಲೋಕಸಭೆ ಚುನಾವಣೆ 2019ರ ಸಂದರ್ಭದಲ್ಲಿ ಸಕತ್ತಾಗಿ ಟ್ರೆಂಡ್ ಆಗಿದ್ದ 'ನಿಖಿಲ್‍ ಎಲ್ಲಿದ್ದೀಯಪ್ಪ..?' ಧಾಟಿಯಲ್ಲೇ 'ರಮ್ಯಾ ಎಲ್ಲಿದ್ದೀಯಮ್ಮ' ಎಂದು ಬಿಜೆಪಿ ಕಾರ್ಯಕರ್ತೆ ಶಿಲ್ಪಾ ಗಣೇಶ್ ಅವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ವೈರಲ್‍ ಆಗಿದ್ದ ನಿಖಿಲ್ ಎಲ್ಲಿದ್ದೀಯಪ್ಪ? ಈಗಲೂ ಟ್ರೆಂಡಿಂಗ್ ನಲ್ಲಿದೆ. ಮಂಡ್ಯ ಲೋಕಸಭೆ ಸಮರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಸೆಣಸಿದ್ದ ಜೆಡಿಎಸ್ -ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಹೀನಾಯ ಸೋಲು ಕಂಡರು.

ಇದಾದ ಬಳಿಕ ಕರ್ನಾಟಕ ಬಿಜೆಪಿ ಅಧಿಕೃತ್ ಖಾತೆಯಿಂದ 'ನಿಖಿಲ್ ಎಲ್ಲಿದ್ದೀಯಪ್ಪ?' ಪ್ರಶ್ನಿಸಿ ಹಾಸ್ಯ ಮಾಡಲಾಯಿತು. ಈಗ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನರನ್ನು ಗೇಲಿ ಮಾಡಲು ಶಿಲ್ಪಾ ಗಣೇಶ್ ಇದೇ ಥರಾದ ಡೈಲಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರು, ಮೋದಿ ವಿರುದ್ಧ ಅನೇಕ ಬಾರಿ ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರದ ಯೋಜನೆ, ಅವರ ನಡೆ, ನುಡಿಯನ್ನು ಟೀಕಿಸಿದ್ದಾರೆ.

ಇತ್ತೀಚೆಗೆ ಮೋದಿ ಸಂದರ್ಶನ ಬಗ್ಗೆ ಟ್ರಾಲ್ ಮಾಡಿದ್ದರು. ಆದರೆ, ರಮ್ಯಾ ಅವರ ಟ್ವೀಟ್ ಗೆ ಶಿಲ್ಪಾ ಗಣೇಶ್, ಜಗ್ಗೇಶ್ ಸೇರಿದಂತೆ ಬಿಜೆಪಿ ನಾಯಕರು, ಬೆಂಬಲಿಗರಿಗೂ ತಿರುಗೇಟು ನೀಡುತ್ತಾ ಬಂದಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕ ರಮ್ಯಾ ಟ್ವೀಟ್ ಮಾಡದೆ ಮೌನಕ್ಕೆ ಶರಣಾಗಿರುವುದನ್ನು ಪ್ರಶ್ನಿಸಲು ಶಿಲ್ಪಾ ಈ ಮಾರ್ಗ ಅನುಸರಿಸಿದ್ದಾರೆ.

ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್?

ಈ ಬಗ್ಗೆ ಟ್ವೀಟ್ ಮಾಡಿರುವ ಶಿಲ್ಪಾ ಗಣೇಶ್‍ "ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು.....ʼʼ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು 5 ವರ್ಷ ಕಾಯಬೇಕು

ಇನ್ನು 5 ವರ್ಷ ಕಾಯಬೇಕು, ಮೋಹಕ ತಾರೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಬಿಡಿ ಎಂದು ಟ್ವೀಟ್.

ದೇಶದ ಅಭಿವೃದ್ಧಿಯತ್ತ ಮುಖಮಾಡಿ

ಸೋಲು ಗೆಲುವು ಎರಡು ಸಹ ಯಾರಿಗೂ ಶಾಶ್ವತವಲ್ಲ ಇಂದು ರಮ್ಯರವರು ಸೋತಿರಬಹುದು ನಾಳೆ ಇದೇ ಸನ್ನಿವೇಶ ನಿಮ್ಗು ಸಹ ಬಂದೆ ಬರುತ್ತೆ ..........ಕಾಲೆಳೆಯುವುದನ್ನು ಬಿಟ್ಟು ದೇಶದ ಅಭಿವೃದ್ಧಿಯತ್ತ ಮುಖಮಾಡಿ ಜನ ಆಯ್ಕೆ ಮಾಡಿರೊದು ಟೀಕೆ ಮಾಡೊಕಲ್ಲ.

ಚಿತ್ರರಂಗಕ್ಕೆ ಮರಳುವುದು ಉತ್ತಮ

ರಮ್ಯಾ ಅವರು ಚಿತ್ರರಂಗಕ್ಕೆ ಮರಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

English summary
BJP worker Shilpa Ganesh tweets asks Ramya where are you? on the same line of popular tag Nikhil Yellidiya which become trending during the Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X