ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂ. ದಕ್ಷಿಣದ ಭವಿಷ್ಯ ನುಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ

|
Google Oneindia Kannada News

Recommended Video

Lok Sabha ElectionS 2019: ತೇಜಸ್ವಿ ಸೂರ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಗೆಲ್ತಾರಾ? | Oneindia Kannada

ಚಿಕ್ಕಬಳ್ಳಾಪುರ, ಏ 1: ನೋಡಿ.. ಒಬ್ಬ ಕಾಂಗ್ರೆಸ್ ಶಾಸಕನಾಗಿ ನಾನು ಈ ಮಾತನ್ನು ಹೇಳಬಾರದು. ಆದರೆ ಬರೆದಿಟ್ಟು ಕೊಟ್ಟಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಫಲಿತಾಂಶ ನಾನು ಇಂದು ಹೇಳುವ ರೀತಿಯಲ್ಲೇ ಆಗುತ್ತೆ ನೋಡಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಮ್ಮಿಶ್ರ ಸರಕಾರದ ಭಾಗವಾಗಿದ್ದರೂ, ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಸದಾ ಟೀಕಿಸುವ ಸುಧಾಕರ್, ಕಾರ್ಯಕರ್ತರ ಸಭೆಯಲ್ಲಿ ಆಡಿದ ಮಾತು, ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್ ಗೆ ಪರೋಕ್ಷವಾಗಿ ಟಾಂಗ್ ನೀಡಿದಂತಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿಲ್ಲ! ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿಲ್ಲ!

ಬಿಜೆಪಿಯವರು ಬೆಂಗಳೂರು ದಕ್ಷಿಣದಲ್ಲಿ ಹುಡುಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಅಲ್ಲಿ ಯಾರಿಗೆ ಟಿಕೆಟ್ ನೀಡಿದ್ದಾರೆ ಎನ್ನುವುದು ಲೆಕ್ಕಕ್ಕೇ ಬರುವುದಿಲ್ಲ. ಸೂರ್ಯನೇ ಇರಲಿ ಚಂದ್ರನೇ ನಿಂತುಕೊಳ್ಳಲಿ ಅಲ್ಲಿ ಗೆಲ್ಲುವುದು ಬಿಜೆಪಿಯೇ ಎಂದು ಸುಧಾಕರ್ ಹೇಳಿದ್ದಾರೆ.

BJP will retain the Bengaluru South, Congress MLA Dr. Sudhakar

ತೇಜಸ್ವಿ ಸೂರ್ಯ ಯುವಕ, ಅವನ ಮುಖ ನೋಡಿ ಜನ ವೋಟ್ ಹಾಕುವುದಿಲ್ಲ, ಅಲ್ಲಿ ಮತದಾರ ವೋಟ್ ಹಾಕುವುದೇ ಬಿಜೆಪಿಗೆ. ಕಾಂಗ್ರೆಸ್ ಶಾಸಕನಾಗಿ ನಾನು ಈ ರೀತಿ ಹೇಳಬಾರದು, ಆದರೂ ಹೇಳುತ್ತಿದ್ದೇನೆಂದು ಡಾ. ಸುಧಾಕರ್ ಹೇಳಿದ್ದಾರೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಕಾಂಗ್ರೆಸ್ ಮತ್ತು ಬಿಜೆಪಿ, ಎರಡೂ ರಾಷ್ಟ್ರೀಯ ಪಕ್ಷಗಳು ಕೊನೇ ಕ್ಷಣದಲ್ಲಿ ಟಿಕೆಟ್ ಘೋಷಿಸಿತ್ತು. ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್ ಖಚಿತ ಎನ್ನುವ ಮಾತಿನ ನಡುವೆ, ಯುವ ಮುಖಂಡ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್ ಒಲಿದಿತ್ತು.

ಲೋಕಸಭಾ ಚುನಾವಣೆ : ಕಾಂಗ್ರೆಸ್ ಸಚಿವರಿಗೆ ಗೆಲುವಿನ ಹೊಣೆ! ಲೋಕಸಭಾ ಚುನಾವಣೆ : ಕಾಂಗ್ರೆಸ್ ಸಚಿವರಿಗೆ ಗೆಲುವಿನ ಹೊಣೆ!

ಇದು, ಬಿಜೆಪಿ ಆಂತರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಈಗ, ದಿನದಿಂದ ದಿನಕ್ಕೆ ಪರಿಸ್ಥಿತಿ ಬದಲಾಗುತ್ತಿದ್ದು. ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ, ಪ್ರಚಾರಕ್ಕೆ ಬರುವುದಕ್ಕೆ ಒಪ್ಪಿಕೊಂಡಿದ್ದಾರೆ.

English summary
BJP will retain the Bengaluru South, Congress MLA from Chikkaballapura Dr. Sudhakar statement. He said this during party workers meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X