ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದೇವಪುರ ಕ್ಷೇತ್ರದಲ್ಲಿ ವಿಜಯೇಂದ್ರ, ಮೊದಲ ಭೇಟಿಯಲ್ಲೇ ಸಭೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 23: ''ಯುವಕರು ಹೆಚ್ಚಿನ ರೀತಿಯಲ್ಲಿ ಪಕ್ಷದ ಬಗ್ಗೆ ಒಲವು ತೋರಿಸುವಂತೆ ಪಕ್ಷದ ಸಂಘಟನೆಗೆ ಒತ್ತು ನೀಡಿ'' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಅವರು ಕರೆ ನೀಡಿದರು.

ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಮಹದೇವಪುರ ಕ್ಷೇತ್ರಕ್ಕೆ ಆಗಮಿಸಿದ್ದ ಅವರು ಮಾಜಿ ಪಾಲಿಕೆ ಸದಸ್ಯರಾದ ಶ್ವೇತಾ ಹೂಡಿ ವಿಜಯಕುಮಾರ್‌ ಅವರ ಎಐಸಿಎಸ್‌ ಲೇಔಟ್‌ ನ ಮನೆಗೆ ಭೇಟಿ ನೀಡಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.

ಯಡಿಯೂರಪ್ಪ ಬಳಿ ಮಹತ್ವದ ಬೇಡಿಕೆ ಇಟ್ಟ ವಹ್ನಿಕುಲ ಕ್ಷತ್ರೀಯರು ಯಡಿಯೂರಪ್ಪ ಬಳಿ ಮಹತ್ವದ ಬೇಡಿಕೆ ಇಟ್ಟ ವಹ್ನಿಕುಲ ಕ್ಷತ್ರೀಯರು

ಮಹದೇವಪುರ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಹಾಗೂ ರಾಜ್ಯದಲ್ಲಿರುವ ಬಿ ಎಸ್‌ ಯಡಿಯೂರಪ್ಪ ನವರ ನೇತೃತ್ವದ ಸರಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಇದರ ಪರಿಣಾಮ ಪಕ್ಷದತ್ತ ಜನರು ಒಲವು ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರು ಪಕ್ಷದತ್ತ ಒಲವು ತೋರಿಸುವಂತೆ ಪಕ್ಷವನ್ನು ಸಂಘಟಿಸಿ ಎಂದು ಕರೆ ನೀಡಿದರು.

BJP Vice President B.Y Vijayendra visits Mahadevapura

ಇದೇ ವೇಳೆ ಬೆಂಗಳೂರು ನಗರ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೇ ನಂ 79 ರ 15 ಏಕರೆ 12 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ದೇವಾಲಯದ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಖಜಾಂಚಿ ಹೂಡಿ ವಿಜಯ ಕುಮಾರ್ ತಿಳಿಸಿದರು.

ಸಿಎಂ ಪುತ್ರ 'ವಿಜಯೇಂದ್ರ' ಮೇಲೆ ಕಾಂಗ್ರೆಸ್ ನಾಯಕರ 'ಕಿಕ್‌ಬ್ಯಾಕ್' ಆರೋಪ!ಸಿಎಂ ಪುತ್ರ 'ವಿಜಯೇಂದ್ರ' ಮೇಲೆ ಕಾಂಗ್ರೆಸ್ ನಾಯಕರ 'ಕಿಕ್‌ಬ್ಯಾಕ್' ಆರೋಪ!

ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದ ಬಿ ವೈ ವಿಜಯೇಂದ್ರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ನೂರು ಮೀಟರ್‌ ಗೂ ಹೆಚ್ಚು ರಸ್ತೆಯನ್ನು ಹೂವನ್ನು ಹಾಸಲಾಗಿತ್ತು. ಖಡ್ಗವನ್ನು ನೀಡಿ ವಿಶೇಷವಾಗಿ ಸ್ವಾಗತಿಸಲಾಯಿತು.

BJP Vice President B.Y Vijayendra visits Mahadevapura

Recommended Video

ಮಗ , ಮೊಮ್ಮಗನಿಂದ ಸರ್ಕಾರ ಲೂಟಿ? | Oneindia Kannada

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಅಧ್ಯಕ್ಷರಾದ ಜಯರಾಜ್‌, ಬಿಎಂಟಿಸಿ ಅಧ್ಯಕ್ಷರಾದ ನಂದೀಶ್‌ ರೆಡ್ಡಿ, ತಮೇಶ್‌ ಗೌಡ, ಮಾಜಿ ಬಿಬಿಎಂಪಿ ಸದಸ್ಯರಾದ ರಮೇಶ್‌, ಮಾರ್ಕೇಟ್‌ ರಮೇಶ್‌ ರಾಜಶೇಖರ ರೆಡ್ಡಿ, ಬಿಜೆಪಿ ಮುಖಂಡ ಕೈಕೊಂಡ್ರಹಳ್ಳಿ ಶೇಖರ್‌ ರೆಡ್ಡಿ, ಕುಂದೇನಹಳ್ಳೀ ರಮೇಶ್‌ ರೆಡ್ಡಿ, ಮಿಥುನ್‌ ರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

English summary
BJP Vice President B.Y Vijayendra today visited Mahadevapura contituency and called party workers to unite and work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X